ಬಸ್ಸಲ್ಲಿ ಶೇ.95 ಮಹಿ​ಳಾ ಪ್ರಯಾ​ಣಿ​ಕರೇ ಭರ್ತಿ; ಪುರುಷರಿಗೆ ಸೀಟು ಬಿಟ್ಟುಕೊಡುವಂತೆ ಕಂಡಕ್ಟರ್ ಮನವಿ

ಶಕ್ತಿ ಯೋಜನೆಯಿಂದ ಪ್ರತಿ​ಯೊಂದು ಬಸ್‌​ಗ​ಳಲ್ಲಿ ಮಹಿಳಾ ಪ್ರಯಾ​ಣಿ​ಕರೇ ತುಂಬಿ ತುಳು​ಕುತ್ತಿದ್ದು, ಪುರು​ಷ​ರಿಗೂ ಸೀಟ್‌ ಬಿಟ್ಟು​ಕೊಡಿ ಎಂದು ಮಹಿಳಾ ಪ್ರಯಾ​ಣಿ​ಕ​ರಲ್ಲಿ ಬಸ್‌ ನಿರ್ವಾ​ಹ​ಕರು ಮನವಿ ಮಾಡಿ​ಕೊ​ಳ್ಳು​ತ್ತಿ​ರುವ ಪ್ರಕ​ರ​ಣ​ಗಳು ಕಂಡು ಬರು​ತ್ತಿವೆ.


ವಿಶೇ​ಷ ವರ​ದಿ

ಗದಗ (ಜೂ.15) ಶಕ್ತಿ ಯೋಜನೆಯಿಂದ ಪ್ರತಿ​ಯೊಂದು ಬಸ್‌​ಗ​ಳಲ್ಲಿ ಮಹಿಳಾ ಪ್ರಯಾ​ಣಿ​ಕರೇ ತುಂಬಿ ತುಳು​ಕುತ್ತಿದ್ದು, ಪುರು​ಷ​ರಿಗೂ ಸೀಟ್‌ ಬಿಟ್ಟು​ಕೊಡಿ ಎಂದು ಮಹಿಳಾ ಪ್ರಯಾ​ಣಿ​ಕ​ರಲ್ಲಿ ಬಸ್‌ ನಿರ್ವಾ​ಹ​ಕರು ಮನವಿ ಮಾಡಿ​ಕೊ​ಳ್ಳು​ತ್ತಿ​ರುವ ಪ್ರಕ​ರ​ಣ​ಗಳು ಕಂಡು ಬರು​ತ್ತಿವೆ.

Latest Videos

ಈ ಬಗ್ಗೆ ಸ್ವತಃ ಸಾರಿಗೆ ನಿಯಂತ್ರಣಾಧಿಕಾರಿಗಳೇ ಸ್ಪಷ್ಟಣೆ ನೀಡಿದ್ದಾರೆ. ಶೇ.95ರಿಂದ ಶೇ.100ರಷ್ಟುಮಹಿಳಾ ಪ್ರಯಾಣಿಕರಿಂದಲೇ ಬಸ್‌ಗಳು ಭರ್ತಿಯಾಗುತ್ತಿವೆ. ಪುರುಷರಿಗೂ ಸೀಟು ಬಿಟ್ಟುಕೊಡಿ ಎಂದು ನಿರ್ವಾಹಕರು ಮತ್ತು ಅಧಿಕಾರಿಗಳು ಜತೆಗೂಡಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Congress guarantee: ‘ಉಚಿತ ಟಿಕೆಟ್‌’ ಕೊಡದಿದ್ದರೆ ಕಂಡಕ್ಟರ್‌ ಮೇಲೆ ಶಿಸ್ತುಕ್ರಮ!

ನಗರ ಸೇರಿ​ದಂತೆ ಜಿಲ್ಲೆ​ಯಾ​ದ್ಯಂತ ಬಸ್‌ ನಿಲ್ದಾಣಗಳು ಮಹಿ​ಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಪ್ರಯಾಣಿಕರನ್ನು ನಿಯಂತ್ರಿಸುವುದಕ್ಕೆ ನಿರ್ವಾಹಕರು ಹರ​ಸಾ​ಹಸ ಪಡು​ತ್ತಿದ್ದಾ​ರೆ. ಸುಗುಮ ಸಂಚಾರಕ್ಕೆ ಪೊಲೀಸ್‌ ಇಲಾಖೆಯಿಂದ ಜಿಲ್ಲೆಯ ಬಸ್‌ ನಿಲ್ದಾಣಗಳಲ್ಲಿ ಗೃಹ ರಕ್ಷಕ ಸಿಬ್ಬಂದಿ​ ನಿಯೋಜಿಸಲಾಗಿದೆ.

ಪ್ರಯಾ​ಣಿ​ಕರ ಸಂಖೈ ದ್ವಿಗು​ಣ:

ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಯೋಜನೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಏಕಾಏಕಿ ಮಹಿಳಾ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿದೆ. ಬಹು​ತೇ​ಕ ಬಸ್‌ಗಳು ಭರ್ತಿಯಾಗಿ ಸಂಚರಿಸುತ್ತಿವೆ. ಗದಗ ಸಾರಿಗೆ ವಿಭಾಗದಲ್ಲಿ ಮಂಗ​ಳವಾರ 1ಲಕ್ಷದ 21ಸಾವಿ​ರಕ್ಕೂ ಅಧಿಕ ಮಹಿಳೆಯರು ಪ್ರಯಾಣಿಸಿದ್ದು, .35.40 ಲಕ್ಷ ಸರ್ಕಾರದಿಂದ ಗದಗ ಡಿಪೋಗೆ ಮರು ಪಾವತಿ ಆಗಬೇಕಿದೆ.

ಅನಗತ್ಯ ಟಿಕೆಟ್‌:

ಜಿಲ್ಲೆಯಲ್ಲಿ ಒಟ್ಟಾರೆ 1759 ಚಾಲಕ, ನಿರ್ವಾಹಕರಿದ್ದಾರೆ. ಅನಗತ್ಯ ಹೆಚ್ಚು ಕಿ.ಮೀ. ಟಿಕೆಟ್‌ ಪಡೆದು ಮಧ್ಯದಲ್ಲಿಯೇ ಮಹಿಳಾ ಪ್ರಯಾಣಿಕರು ಇಳಿಯುತ್ತಿರುವ ಪ್ರಕರಣಗಳನ್ನು ಗಮನಿಸಿದ್ದಾರೆ. ಲಕ್ಷ್ಮೇ​ಶ್ವರ-ಗದಗ, ಗದಗ-ಮುಂಡರಗಿ ಮತ್ತು ಗದಗ-ಹುಬ್ಬಳ್ಳಿ ಮಾರ್ಗಗಳಲ್ಲಿ ಇತರೆ ಮಾರ್ಗಗಳಿಗಿಂತ ಅಧಿಕ ಮಹಿಳಾ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಹುಬ್ಬಳ್ಳಿಗೆ ಟಿಕೆಟ್‌ ಪಡೆದು ಮಧ್ಯದಲ್ಲಿ ಪ್ರಯಾಣಿಕರು ಇಳಿದು ಬಿಡುತ್ತಿದ್ದಾರೆ. ಇಲ್ಲಿ ಅನಗತ್ಯ ಟಿಕೆಟ್‌ ಪಡೆಯಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ನಷ್ಟಮತ್ತು ನಿರ್ವಾಹಕ, ಚಾಲಕರಿಗೆ ಪ್ರೋತ್ಸಾಹ ಭತ್ಯೆ ಲಾಭ ಎಂದು ನಿರ್ವಾಹಕರೊಬ್ಬರು ತಿಳಿಸಿದ್ದಾರೆ.

ಹೆಚ್ಚುವರಿ .3 ಕೋಟಿ ನಿರೀಕ್ಷೆ

ಪ್ರತಿದಿನ ಸರಾಸರಿ 1.90 ಲಕ್ಷದಿಂದ 2.10 ಲಕ್ಷ ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸುತ್ತಿದ್ದರು. ಮಂಗ​ಳ​ವಾರ ಪ್ರಯಾಣಿಕರ ಸಂಖ್ಯೆ ಸರಾಸರಿ 30 ಸಾವಿರ ಅಧಿಕಗೊಂಡಿದೆ. ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ .18 ಕೋಟಿ ಟಿಕೆಟ್‌ನಿಂದ ಸಂಗ್ರಹ ಆಗಿದೆ. ಪ್ರತಿ ತಿಂಗಳು .15ರಿಂದ 18 ಕೋಟಿ ಸರಾಸರಿ ಸಂಗ್ರಹ ಆಗುತ್ತಿದೆ. ಜೂನ್‌ ತಿಂಗಳಲ್ಲಿ ಹೆಚ್ಚುವರಿ .3 ಕೋಟಿ ಆದಾಯ ಬರುವ ನಿರೀಕ್ಷೆ ಇದೆ ಎಂದು ಸಾರಿಗೆ ಇಲಾಖೆ ಊಹಿಸಿದೆ.

ಜಿಲ್ಲೆಯಲ್ಲಿ 514 ಬಸ್‌ಗಳ ಸಂಚಾರ

  • ಚಾಲಕ ಕಮ… ನಿರ್ವಾಹಕರು 852
  • ನಿರ್ವಾಹಕರು 790
  • ಚಾಲಕರು 55

ಮಹಿಳೆಯರೇ ..ರೂಲ್ಸ್‌ ನೋಡಿ ..ಬಸ್‌ ಹತ್ತಿ, 6 ರಿಂದ 12 ವರ್ಷದೊಳಗಿನ ಬಾಲಕಿಯರಿಗೂ ಉಚಿತ 

ಗದಗ ಸಾರಿಗೆ ವಿಭಾಗದಲ್ಲಿ ಮಂಗ​ಳವಾರ 1ಲಕ್ಷದ 21ಸಾವಿ​ರಕ್ಕೂ ಅಧಿಕ ಮಹಿಳೆಯರು ಪ್ರಯಾಣಿಸಿದ್ದು, .35.40 ಲಕ್ಷ ಸರ್ಕಾರದಿಂದ ಗದಗ ಡಿಪೋಗೆ ಮರು ಪಾವತಿ ಆಗಬೇಕಿದೆ.

-ಜಿ. ಶೀನಯ್ಯ, ಸಾರಿಗೆ ಇಲಾಖೆ ಅಧಿಕಾರಿ

click me!