ರಫೀಕ್ ಅಹಮದ್ ಅವರಿಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿರುವುದಕ್ಕೆ ಅಸಮಾಧಾನಗೊಂಡಿರುವ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್. ಷಫಿ ಅಹಮದ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ತುಮಕೂರು : ರಫೀಕ್ ಅಹಮದ್ ಅವರಿಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿರುವುದಕ್ಕೆ ಅಸಮಾಧಾನಗೊಂಡಿರುವ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್. ಷಫಿ ಅಹಮದ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಈ ಕುರಿತು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಅಳಿಯ ಹಾಗೂ ಮಾಜಿ ರಫೀಕ್ ಅಹಮದ್‌ಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ಷಫಿ ಅಹಮದ್ ಮೇಲಿನ ಕ್ರಮ ಕೈಗೊಂಡಿದ್ದು, ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದು ಅಸಮಾಧಾನ ಹೊರಹಾಕಿ ರಾಜೀನಾಮೆ ನೀಡಿರುವುದಾಗಿ ತಿಳಿಸಿದರು.
ಯುವ ಮುಖಂಡ ಇಕ್ಬಾಲ… ಅಹ್ಮದ್‌ಗೆ ಟಿಕೆಟ್ ನೀಡಿರೋದನ್ನು ವಿರೋಧಿಸಿರುವ ಷಫಿ ಅಹಮದ್, ಒಬ್ಬ ಅಸಮರ್ಥ ವ್ಯಕ್ತಿಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಈ ಅಂಶವನ್ನು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ. ರಫೀಕ್ ಅಹಮದ್, ನಗರಸಭೆ ಮಾಜಿ ಅಧ್ಯಕ್ಷ ಅಸ್ಲಾಂಪಾಷಾ, ವೇಣುಗೋಪಾಲ್, ಆಟೋ ರಾಜು ಹಾಗೂ ಅಪಾರ ಸಂಖ್ಯೆಯ ಬೆಂಬಲಿಗರು ಇದ್ದರು.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ… ಅಹಮದ್ ಹೇಳಿಕೆ ನೀಡಿದ್ದು, ತಮಗೆ ಕಾಂಗ್ರೆಸ್ ಪಕ್ಷ ನೀಡಿರುವುದು ಸತ್ಯಕ್ಕೆ, ಪ್ರಾಮಾಣಿಕತೆಗೆ ದೊರೆತಿರುವ ಗೆಲುವು ಎಂದು ಭಾವಿಸುವುದಾಗಿಯೂ, ಷಫಿ ಅಹಮದ್, ರಫೀಕ್ ಅಹಮದ್ ಅವರನ್ನು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಯಾವತ್ತೂ ಪ್ರಾಮಾಣಿಕ ಅಭ್ಯರ್ಥಿಗಳನ್ನು ಗುರುತಿಸಿ, ಅವಕಾಶ ಕೊಡುತ್ತದೆ. ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ಗುರುತಿಸಿ ಪಕ್ಷ ಟಿಕೆಟ್ ಕೊಟ್ಟಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್, ಡಿ.ಕೆ ಶಿವಕುಮಾರ್,
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ನಗರದ ಏಳ್ಗೆ, ಶಾಂತಿಗಾಗಿ ಶ್ರಮಿಸುತ್ತೇನೆ
ತುಮಕೂರು ನಗರದ ಹೇಳ್ಗೆ ಹಾಗೂ ಶಾಂತಿಗಾಗಿ ಶ್ರಮಿಸುತ್ತೇನೆ. ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಭಿನ್ನಾಭಿಪ್ರಾಯ ಇರುತ್ತದೆ. ಎಲ್ಲರನ್ನೂ ವಿಶ್ವಾಸದಿಂದ ತೆಗೆದುಕೊಂಡು ಹೋಗುತ್ತೇನೆ. ಹಿರಿಯ ಮುಖಂಡ ಷಫಿ ಅಹಮದ್ ಅವರ ಜೊತೆ 20 ವರ್ಷಗಳಿಂದ ಕೆಲಸ ಮಾಡಿದ್ದೇನೆ. ಷಫಿ ಅಹಮದ್ ಸೇರಿದಂತೆ ಎಲ್ಲಾ ಅಸಮಾಧಾನಗೊಂಡಿರುವವರÜ ಜೊತೆ ಸೌಹಾರ್ದಯುತವಾಗಿ ಮಾತನಾಡುತ್ತೇನೆ. ಷಫಿ ಅಹ್ಮದ್ ಹಾಗೂ ಪಕ್ಷದ ಮುಖಂಡರ ಜೊತೆಯಲ್ಲೇ ಪ್ರಚಾರ ಕಾರ್ಯ ನಡೆಸುತ್ತೇನೆ ಎಂದು ಇಕ್ಬಾಲ್ ಅಹಮದ್ ತಿಳಿಸಿದ್ದಾರೆ.
ಈ ಬಾರಿ ಅವಕಾಶ ಸಿಕ್ಕಿದೆ
ಅರ್ಹರನ್ನು ಪಕ್ಷ ಗುರುತಿಸಿದೆ. ಪಕ್ಷದಲ್ಲಿ ಸಾವಿರಾರು ಮಂದಿ ಇರುತ್ತಾರೆ. ಅವರಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ಸಿಗುವುದು. ಈ ಬಾರಿ ನನಗೆ ಅವಕಾಶ ಸಿಕ್ಕಿದೆ. ಈ ಹಿಂದೆ ಅವರಿಗೂ ಸಿಕ್ಕಿತ್ತು.
ಆಗ ನಾನೂ ಕೆಲಸ ಮಾಡಿದ್ದೆ. ಇದೀಗ ನನಗೂ ಎಲ್ಲರೂ ಕೆಲಸ ಮಾಡುವ ವಿಶ್ವಾಸ ಇದೆ ಎಂದು ಇಕ್ಬಾಲ್ ತಿಳಿಸಿದ್ದಾರೆ.ಸಂಘಟನೆ ಕೊರತೆಯಿಲ್ಲ ಎಲ್ಲರಿಗೂ ಉದ್ಯೋಗ ಕೊಡುತ್ತೇವೆ ಎಂದು ಹೇಳಿದ ಬಿಜೆಪಿ ಸರ್ಕಾರ ವಿಫಲವಾಗಿದೆ. ಬಡವರ ಏಳ್ಗೆಗೆæ ಕಾಂಗ್ರೆಸ್ ತೊಡಗಿಕೊಂಡಿದೆ. ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ.
ಮೂಲಭೂತ ಸೌಲಭ್ಯಗಳಾದ ಅನ್ನ, ಅಕ್ಷರ, ಆಶ್ರಯಗಳನ್ನ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ತಮಗೆ ಸಂಘಟನೆ ಕೊರತೆ ಇಲ್ಲ. ಎಲ್ಲರಲ್ಲೂ ಕೆಲ ನ್ಯೂನತೆ ಇರುತ್ತದೆ. ನನ್ನಲ್ಲೂ ಕೆಲ ನ್ಯೂನತೆ ಇರಬಹುದು. ಅದನ್ನ ಸರಿಪಡಿಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದ್ದಾರೆ.
ದೂರೋದನ್ನು ಬಿಡಬೇಕು ಟಿಕೆಚ್ ಸಿಗದಿದ್ದಾಗ ದೂರೋದನ್ನು ಬಿಡಬೇಕು. ಎಲ್ಲವನ್ನೂ ಸರಿ ದೂಗಿಸಿಕೊಂಡು ಹೋಗ್ಬೇಕು. ದೂರುವವರಿಗೆ ವಿನಂತಿ ಮಾಡ್ತೇನೆ. ದೂರೋದನ್ನ ಬಿಡಿ, ಪಕ್ಷ ಒಂದು ಶಕ್ತಿ. ಪಕ್ಷದಲ್ಲಿ ಒಂದು ಶಕ್ತಿಯಾಗಿ ಎಲ್ಲರೂ ಒಟ್ಟಿಗೆ ಹೋಗೋಣ. ನೀವು ನನಗೆ ಶಕ್ತಿ ಕೊಡಿ. ನಾವೆಲ್ಲರೂ ಒಂದು ಪಕ್ಷ. ಅವಕಾಶ ಸಿಕ್ಕಾಗ ಕೆಲಸ ಮಾಡುತ್ತೇನೆ. ಇಲ್ಲ ಅಂದರೆ ಇಲ್ಲ ಅನ್ನೋದು ಸರಿಯಲ್ಲ. ಇದು ಪಕ್ಷÜ ನಿಷ್ಠೆ ಅಲ್ಲ. ಪಕ್ಷ ಅಂತ ಬಂದಾಗ ಬೇರೆ - ಬೇರೆ ಅವಕಾಶ ಇರುತ್ತವೆ. ಅವರಿಗೂ ಪಕ್ಷ ಗುರುತಿಸಿ ಅವಕಾಶ ಕೊಡುತ್ತದೆ. ನಿರಾಶೆ ಆಗೋದು ಬೇಡ. ನಾವೆಲ್ಲರೂ ಒಂದಾಗಿ ಕೆಲಸ ಮಾಡಿಕೊಂಡು ಹೋಗಲು ಎಲ್ಲರಲ್ಲೂ ವಿನಂತಿಸಿಸುವುದಾಗಿ ಇಕ್ಬಾಲ್ ತಿಳಿಸಿದ್ದಾರೆ.