ಕುಂದಾಪುರ, ಬೈಂದೂರಿನ ಹಲವು ಪ್ರದೇಶಗಳು ಕಂಟೈನ್‌ಮೆಂಟ್‌ ಝೋನ್

By Kannadaprabha NewsFirst Published Jun 2, 2020, 9:21 AM IST
Highlights

ಕೋವಿಡ್‌-19 ಪರೀಕ್ಷಾ ವರದಿ ಬಾರದೆ ಕ್ವಾರಂಟೈನ್‌ನಲ್ಲಿರುವವರನ್ನು ಮನೆಗೆ ಕಳುಹಿಸಿದ ಬೆನ್ನಲ್ಲೇ ತಾಲೂಕಿನಲ್ಲಿ ಅತಿ ಹೆಚ್ಚು ಪಾಸಿಟಿವ್‌ ಪ್ರಕರಣಗಳು ವರದಿಯಾದ ಪರಿಣಾಮ ಕುಂದಾಪುರ ಹಾಗೂ ಬೈಂದೂರಿನ ಹಲವು ಪ್ರದೇಶಗಳನ್ನು ಕಂಟೈನ್‌ಮೆಂಟ್‌ ವಲಯಗಳಾಗಿ ಪರಿವರ್ತಿಸಲಾಗಿದೆ.

ಕುಂದಾಪುರ(ಜೂ 02): ಕೋವಿಡ್‌-19 ಪರೀಕ್ಷಾ ವರದಿ ಬಾರದೆ ಕ್ವಾರಂಟೈನ್‌ನಲ್ಲಿರುವವರನ್ನು ಮನೆಗೆ ಕಳುಹಿಸಿದ ಬೆನ್ನಲ್ಲೇ ತಾಲೂಕಿನಲ್ಲಿ ಅತಿ ಹೆಚ್ಚು ಪಾಸಿಟಿವ್‌ ಪ್ರಕರಣಗಳು ವರದಿಯಾದ ಪರಿಣಾಮ ಕುಂದಾಪುರ ಹಾಗೂ ಬೈಂದೂರಿನ ಹಲವು ಪ್ರದೇಶಗಳನ್ನು ಕಂಟೈನ್‌ಮೆಂಟ್‌ ವಲಯಗಳಾಗಿ ಪರಿವರ್ತಿಸಲಾಗಿದೆ.

ಭಾನುವಾರ ಬೈಂದೂರು ತಾಲೂಕಿನ ಕಾಲ್ತೂಡು ಗ್ರಾಮದ ಕಬ್ಸೆಯಲ್ಲಿ ಒಂದು ಪ್ರಕರಣ ಮಾತ್ರ ದಾಖಲಾಗಿತ್ತು. ಇದೀಗ ಸೋಮವಾರ ಬಂದಿರುವ ಪರೀಕ್ಷಾ ವರದಿಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಒಟ್ಟು 15 ಪ್ರಕರಣಗಳಲ್ಲಿ ಕೋವಿಡ್‌ ಸೋಂಕು ದೃಢವಾಗಿದೆ. ಇಂದಿನ ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ಬೈಂದೂರು ಭಾಗದಲ್ಲಿ ವರದಿಯಾಗಿದೆ.

2 ತಿಂಗಳ ಬಳಿಕ ರೈಲ್ವೆ ಬೋಗಿ ಆಸ್ಪತ್ರೆ ಕೊರೋನಾ ಚಿಕಿತ್ಸೆಗೆ!

ಹರ್ಕೂರು, ನಾಡಾ, ದೊಂಬೆ ಶಿರೂರು, ಯಡ್ತರೆ, ಬೈಂದೂರು ಹಾಗೂ ಕೆರ್ಗಾಲ್‌ ಗ್ರಾಮಗಳಲ್ಲಿನ ಒಟ್ಟು 6 ಕಡೆಗಳಲ್ಲಿ ಕಂಟೈನ್‌ಮೆಂಟ್‌ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ನಿರ್ದಿಷ್ಟಚಟುವಟಕೆಗಳನ್ನು ನಿರ್ಬಂಧಿಸಲಾಗಿದೆ. ಕೋವಿಡ್‌ ಸೋಂಕು ದೃಢೀಕೃತರಾದವರನ್ನು ಅಲ್ಲಿಂದ ಚಿಕಿತ್ಸೆಗಾಗಿ ಕೋವಿಡ್‌ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಅವರ ಸಂಪರ್ಕಿತರ ಗಂಟಲು ದ್ರವಗಳನ್ನು ಪರೀಕ್ಷಾ ವರದಿಗಾಗಿ ಕಳುಹಿಸಲಾಗುತ್ತಿದೆ.

ಸೋಂಕು ಪತ್ತೆಯಾದವರ ಮನೆ ಇರುವ ಪ್ರದೇಶದ 100 ಮೀಟರ್‌ ಸುತ್ತಳತೆಯಲ್ಲಿ ಪೊಲೀಸ್‌ ಬ್ಯಾಂಡ್‌ಗಳನ್ನು ಕಟ್ಟಿಸಾರ್ವಜನಿಕ ಪ್ರವೇಶ, ತಿರುಗಾಟ ಹಾಗೂ ಇತರ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಕಂದಾಯ, ಪೊಲೀಸ್‌ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಸಲಹೆ, ಸೂಚನೆಗಳನ್ನು ನೀಡಿದ್ದಾರೆ.

click me!