ಒಂದೊಂದು ಕೇಂದ್ರಗಳಲ್ಲೂ 150ಕ್ಕೂ ಅಧಿಕ ಮಂದಿ ಗೃಹಲಕ್ಷ್ಮೀ ನೋಂದಣಿಗಾಗಿ ಕಾದು ಕುಳಿತಿದ್ದು, ಸರ್ವರ್ ಕೈಕೊಡುತ್ತಿರುವ ಪರಿಣಾಮ ಸರಿಯಾಗಿ ಓಟಿಪಿ ಲಭ್ಯವಾಗದೇ ನೋಂದಣಿಗೆ ಕೇಂದ್ರದ ಸಿಬ್ಬಂದಿ ಸಹ ಪರದಾಡುವಂತಾಗಿದೆ.
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ(ಜು.21): ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲೂ ಗೃಹಲಕ್ಷ್ಮೀ ಯೋಜನೆಯ ನೋಂದಣಿಗೆ ಸರ್ವರ್ ಕಾಟ ಎದುರಾಗಿದೆ. ಕಾರವಾರ ನಗರದ ಕರ್ನಾಟಕ ಒನ್ ಕೇಂದ್ರಗಳಲ್ಲಿ ಬೆಳಿಗ್ಗೆಯಿಂದಲೇ ಫಲಾನುಭವಿಗಳು ಆಗಮಿಸಿ ಸಾಲುಗಟ್ಟಿ ನಿಂತಿದ್ದು, ಸರ್ವರ್ ಸಮಸ್ಯೆಯಿಂದ ನೋಂದಣಿ ಪ್ರಕ್ರಿಯೆ ವಿಳಂಬವಾಗುತ್ತಿದೆ.
undefined
ಒಂದೊಂದು ಕೇಂದ್ರಗಳಲ್ಲೂ 150ಕ್ಕೂ ಅಧಿಕ ಮಂದಿ ಗೃಹಲಕ್ಷ್ಮೀ ನೋಂದಣಿಗಾಗಿ ಕಾದು ಕುಳಿತಿದ್ದು, ಸರ್ವರ್ ಕೈಕೊಡುತ್ತಿರುವ ಪರಿಣಾಮ ಸರಿಯಾಗಿ ಓಟಿಪಿ ಲಭ್ಯವಾಗದೇ ನೋಂದಣಿಗೆ ಕೇಂದ್ರದ ಸಿಬ್ಬಂದಿ ಸಹ ಪರದಾಡುವಂತಾಗಿದೆ. ಬೆಳಿಗ್ಗೆಯಿಂದ ಕೇವಲ 8 ಮಂದಿಯ ನೋಂದಣಿ ಮಾತ್ರ ಸಾಧ್ಯವಾಗಿದ್ದು, ಇನ್ನೂ ಸಹ ನೂರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಸಲು ಕಾಯುತ್ತಿದ್ದಾರೆ.
ಕೃಷಿ ಕಾಯ್ದೆ ಹಿಂಪಡೆಯಲು ಸಿದ್ದರಾಮಯ್ಯಗೆ ದಮ್ ಇಲ್ಲ: ಕೋಡಿಹಳ್ಳಿ ಚಂದ್ರಶೇಖರ ಕಿಡಿ
ಮೊದಲನೇಯ ದಿನ ಸರ್ವರ್ ಸರಿಯಿದ್ದು 30ಕ್ಕೂ ಅಧಿಕ ಮಂದಿಯ ನೋಂದಣಿ ಕಾರ್ಯವನ್ನು ನಡೆಸಲಾಗಿತ್ತು. ಆದರೆ, ಇಂದು ಬೆಳಿಗ್ಗೆಯಿಂದಲೇ ಸರ್ವರ್ ಕೈಕೊಡುತ್ತಿರುವುದರಿಂದ ಒಂದೊಂದು ನೋಂದಣಿಗೂ ಗಂಟೆಗಳ ಕಾಲ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೋಂದಣಿಗೆ ಸಾಕಷ್ಟು ಮಂದಿ ಹಿರಿಯರೇ ಆಗಮಿಸುತ್ತಿದ್ದು, ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗದೇ ತೆರಳುತ್ತಿದ್ದಾರೆ. ಜನರು ತೀವ್ರ ಎದುರಿಸುತ್ತಿರುವುದರಿಂದ ಕೂಡಲೇ ಸರ್ವರ್ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.