ಪ್ರತ್ಯೇಕ ಮೈಸೂರು ರಾಜ್ಯ ರಚಿಸಲು ಆಗ್ರಹ

By Kannadaprabha News  |  First Published Aug 16, 2021, 3:12 PM IST
  • ರಾಜ್ಯದ ಎಲ್ಲಾ  ಪ್ರಾಂತ್ಯಗಳ ಅಭಿವೃದ್ದಿ ಸರ್ವಾಂಗೀಣ ಹಾಗು ನಾಡಿನ  ಸಮತೋಲನದ ಆಡಳಿತಕ್ಕೆ ಪ್ರತ್ಯೇಕ ರಾಜ್ಯ
  • ದೃಷ್ಟಿಯಿಂದ ಏಕೀಕೃತ ಕರ್ನಾಟಕವನ್ನು ಎರಡು ಪ್ರತ್ಯೇಕ ರಾಜ್ಯಗಳಾಗಿ ವಿಂಗಡಿಸಬೇಕೆಂದು ಆಗ್ರಹ

 ಮೈಸೂರು (ಆ.16): ರಾಜ್ಯದ ಎಲ್ಲಾ  ಪ್ರಾಂತ್ಯಗಳ ಅಭಿವೃದ್ದಿ ಸರ್ವಾಂಗೀಣ ಹಾಗು ನಾಡಿನ  ಸಮತೋಲನದ ಆಡಳಿತ ದೃಷ್ಟಿಯಿಂದ ಏಕೀಕೃತ ಕರ್ನಾಟಕವನ್ನು ಎರಡು ಪ್ರತ್ಯೇಕ ರಾಜ್ಯಗಳಾಗಿ ವಿಂಗಡಿಸಬೇಕು.

ದಕ್ಷಿಣ ಕರ್ನಾಟಕವನ್ನು ಮೈಸೂರು ರಾಜ್ಯವಾಗಿ  ರಚಿಸಬೇಕು ಎಂದು ಮೈಸೂರು ರಾಜ್ಯ ರಚನೆಯ ಒತ್ತಾಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಮರಿಮಲ್ಲಯ್ಯ  ಆಗ್ರಹಿಸಿದರು. 

Latest Videos

undefined

ಇಲ್ಲಿ ಭಾಷೆಯೊಂದನ್ನೆ ಮುಖ್ಯ ಗುರಿಯಾಗಿರಿಸಿಕೊಂಡು  ಪ್ರಾಂತ್ಯ ರಚನೆ ಸಲ್ಲದು ಎಂದರು.

ಮೈಸೂರಲ್ಲಿ ಮೆಟ್ರೋ ಲೈಟ್‌ ಯೋಜನೆ ಬಗ್ಗೆ ಅಧ್ಯಯನ!

ದೇಶದ ಒಗ್ಗಟ್ಟು ಬಹಳ ಮುಖ್ಯವಾಗಿದ್ದು ಪ್ರತ್ಯೇಕ ರಾಜ್ಯ ರಚನೆಯಿಂದ ಆಡಳಿತವನ್ನು ಸಮರ್ಪಕವಾಗಿ  ನಿರ್ವಹಿಸಲು ಸಾಧ್ಯವಾಗುತ್ತದೆ. ಸದ್ಯದಲ್ಲಿ ಎಲ್ಲಾ ಜಿಲ್ಲೆಗಳಿಗೆ ಸೂಕ್ತ ಅನುದಾನ ನೀಡದೆ ಯೋಜನೆ ರಚನೆ ಅಸಾಧ್ಯವಾಗಿದೆ. ಈ ತಾರತಮ್ಯ  ಹೋಗಲಾಡಿಸಲು ಎರಡು ಪ್ರತ್ಯೇಕ ರಾಜ್ಯಗಳನ್ನಾಗಿ ವಿಭಜಿಸಬೇಕು ಎಂದು ಅವರು ಹೇಳಿದರು. 

ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಆದಿಶೇಷ್ ಗೌಡ ಮಾತನಾಡಿ ಮೈಸೂರು ರಾಜ್ಯ ರಚನೆಯಿಂದ ಅಭಿವೃದ್ದಿಗೆ ಪ್ರತ್ಯೆಕ ಸಮಗ್ರ ಯೋಜನೆ ರೂಪಿಸಲು ಸಾಧ್ಯ. ಮೈಸೂರು ಮಂಡ್ಯ ಚಾಮರಾಜನಗರ  ಕೊಡಗು ದಕ್ಷಿಣ ಕನ್ನಡ, ಉಡುಪಿ, ಮಂಗಳೂರು ರಾಮನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರಗಳನ್ನು ಒಳಗೊಂಡು ರಾಜ್ಯವಾಗಬೇಕು ಎಂದರು. 

click me!