‘ಯಡಿಯೂರಪ್ಪ ಸಿಎಂ ಆದಾಗಲೆಲ್ಲಾ ರಾಜ್ಯದಲ್ಲಿ ಪ್ರವಾಹ’

By Web Desk  |  First Published Aug 20, 2019, 5:54 PM IST

ತವರು ಕ್ಷೇತ್ರ ಬಾಗಲಕೋಟೆಯ ಬಾದಾಮಿಯಲ್ಲಿ ಸಿದ್ದರಾಮಯ್ಯ ಪ್ರವಾಸ/ ನೆರೆ ಸಂತ್ರಸ್ತರ ಗೋಳು ಆಲಿಸಿದ ಸಿದ್ದರಾಮಯ್ಯ/ ಬಿಎಸ್ ವೈ ಸಿಎಂ ಆದಾಗಲೆ ನೆರೆ ಪ್ರವಾಹ ಬರುತ್ತೆ ಎಂದ ನಾಯಕ/


ಬಾಗಲಕೋಟೆ[ಆ. 20]  ರಾಜ್ಯದಲ್ಲಿ ನೆರೆ ಪ್ರವಾಹ ಬಂದಾಗಲೆಲ್ಲಾ  ಯಡಿಯೂರಪ್ಪನೇ ಸಿಎಂ .. 2009ರಲ್ಲಿ ಪ್ರವಾಹ ಬಂದಾಗ ಯಡಿಯೂರಪ್ಪನವರೇ ಮುಖ್ಯಮಂತ್ರಿ ಇದ್ರು.. ಈಗಲೂ ಅವರೇ ಮುಖ್ಯಮಂತ್ರಿ ಇದ್ದಾರೆ, ಈ ಸಾರಿ ಇನ್ನೂ ಹೆಚ್ಚು ಪ್ರವಾಹ ಬಂದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ಲೇಷಣೆಯ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಡಾಣಕಶಿರೂರ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಹಿಂದೆ ಕಟ್ಟಿಸಿಕೊಟ್ಟ ಮನೆಗಳಿಗೆ ಯಾರೂ ಹೋಗಿಲ್ಲ ನೀವೇ ಹೇಳಿದ್ದೀರಿ. ವಾಸಕ್ಕೆ ಯೋಗ್ಯವಿಲ್ಲ ಅಂತ ಹೋಗಿಲ್ಲ, ಕಳಪೆ ಗುಣಮಟ್ಟದ್ದಾಗಿವೆ. ಅವನ್ನೆಲ್ಲಾ ನೆಲಸಮ ಮಾಡಿ ಮತ್ತೇ ಕಟ್ಟಿಕೊಡಿ ಅಂತ ಕೇಳ್ತಿದ್ದೀರಿ. ಈ ಸರ್ಕಾರ ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳುತ್ತೋ ನನಗೆ ಗೊತ್ತಿಲ್ಲ. ಆದರೆ  ನಾನು ನಿಮ್ಮ ಪ್ರತಿನಿಧಿಯಾಗಿ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಬಿಎಸ್‌ವೈ ಸೇನೆ: ಯಾವ ಜಿಲ್ಲೆಗೆ ದಕ್ಕಿಲ್ಲ ಮಂತ್ರಿ ಭಾಗ್ಯ?

Tap to resize

Latest Videos

ಬಾಗಲಕೋಟೆ ಜಿಲ್ಲೆ ಬಾದಾಮಿ ತವರು ಕ್ಚೇತ್ರದಲ್ಲಿ ನೆರೆ ಸಂತ್ರಸ್ತರ ಸಮಸ್ಯೆಯನ್ನು ಸಿದ್ದರಾಮಯ್ಯ ಆಲಿಸುತ್ತಿದ್ದಾರೆ. ತಮ್ಮ ಕಾಲೋನಿಗೆ ಭೇಟಿ ನೀಡಿಲ್ಲ ಎಂದು ಆರೋಪಿಸಿ ಮಹಿಳೆಯರು ಸಿದ್ದರಾಮಯ್ಯ ಕಾರಿಗೆ ಸೋಮವಾರ ಘೇರಾವ್ ಹಾಕಿದ್ದರು.  ಈ ಹಿಂದೆ 2008ರಲ್ಲಿ ಬಿಎಸ್ ವೈ ಸಿಎಂ ಆಗಿದ್ದ ವೇಳೆಯೂ ಉತ್ತರ ಕರ್ನಾಟಕ ಭೀಕರ ಪ್ರವಾಹಕ್ಕೆ ತುತ್ತಾಗಿತ್ತು.

click me!