ಆ ಒಂದೇ ಕಾರಣಕ್ಕೆ ಕರ್ನಾಟಕದಲ್ಲಿ ಬಿಜೆಪಿ ಗಟ್ಟಿಯಾಯ್ತು... ಸಿದ್ದು ಬಿಚ್ಚಿಟ್ಟ ಗುಟ್ಟು!

By Web DeskFirst Published Aug 31, 2019, 10:40 PM IST
Highlights

ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ/ ಬಿಜೆಪಿ ಕರ್ನಾಟಕದಲ್ಲಿ ಬೇರೂರಲು ಯಾರು ಕಾರಣ? ಮಂಗಳೂರಿನಲ್ಲಿ ಸಿದ್ದರಾಮಯ್ಯ ಆರೋಪಗಳ ಸುರಿಮಳೆ/

ಮಂಗಳೂರು[ಆ. 31]  ಕುಮಾರಸ್ವಾಮಿ ಸಿಎಂ ಆಗೋಕೆ ಆವತ್ತು ಬಿಜೆಪಿ ಜೊತೆ ಸೇರಿದ್ರು.  20-20 ಸರ್ಕಾರ ಮಾಡಿದ ಕಾರಣವೇ ಇವತ್ತು ರಾಜ್ಯದಲ್ಲಿ ಬಿಜೆಪಿ ಬೇರು ಬಿಟ್ಟಿದೆ. ಆವತ್ತು ಅದು ಆಗಿಲ್ಲಾ ಅಂದ್ರೆ ಬಿಜೆಪಿ ಇವತ್ತು ಇರ್ತಾ ಇರಲಿಲ್ಲ ಎಂದು ಮಂಗಳೂರಿನ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಹಾಲು ಕುಡಿದಾ ಮಕ್ಕಳೇ ಬದುಕಲ್ಲ...ವಿಷ ಕುಡಿದ ಮಕ್ಕಳು ಬದುಕುತ್ತವಾ..? ಲಕ್ಷ್ಮಣ ಸವದಿ ಅಂತವರನ್ನ  ಡಿಸಿಎಂ ಮಾಡಿದ್ದಾರೆ. ಅವರು ಸದನದಲ್ಲಿ ಏನು ಮಾಡಿದ್ರು ಅನ್ನೋದು ಜನತೆಗೆ ಗೊತ್ತು. ಅವರೇನು ಮಾಡಿದ್ರು ಅಂತಾ ನಾನು ಹೇಳೋಕೆ ಹೋಗಲ್ಲ. ನಾಚಿಗೆ ಆಗಬೇಕು ಈ ಸರ್ಕಾರಕ್ಕೆ ಅಂತವರನ್ನ ಡಿಸಿಎಂ ಮಾಡಿದ್ದಾರೆ. ಸಿ.ಸಿ ಪಾಟೀಲ್ ಅಂತವರು ಸಚಿವ, ಅವರ ಬಗ್ಗೆಯೂ ಜನತೆಗೆ ಚನ್ನಾಗಿ ಗೊತ್ತಿದೆ ಎನ್ನುತ್ತ ಸವದಿ ಡಿಸಿಎಂ ಮಾಡಿದ್ದಕ್ಕೆ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಕರ್ನಾಟಕಕ್ಕೆ ಹೊಸ ಸಿಎಂ, ಮೋದಿಗೆ ಸ್ವಾಮಿ ಶಾಕ್; ಇಲ್ಲಿವೆ ಆ.31ರ ಟಾಪ್ 10 ಸುದ್ದಿ!

ವಿಧಾನ ಸಭೆ ಚುನಾವಣೆ ಶೀಘ್ರ ಬರಲಿದೆ. ಬಿಎಸ್ ವೈ ಸರ್ಕಾರ ಜಾಸ್ತಿ ಕಾಲ ಉಳಿಯಲ್ಲ. ಇದು ಅನೈತಿಕ ಸರ್ಕಾರವಾಗಿದ್ದು, ಇನ್ನು ಮೂರೂವರೆ ವರ್ಷ ಈ ಸರ್ಕಾರ ಉಳಿಯಲ್ಲ ಎಂದು ಭವಿಷ್ಯ ನುಡಿದರು.

ಯಡಿಯೂರಪ್ಪ ಅವರು ಹೇಗಾದರೂ ಕುರ್ಚಿ ಹಿಡಿಯೋ ಆತುರದಲ್ಲಿದ್ದರು. ಪ್ರಮಾಣ ವಚನ ಸಮಯ ಮಣ್ಣಿನ ಮಗ ಎಂದು ಹಸಿರು ಶಾಲು ಹಾಕ್ತಾರೆ. ಸಾಲ ಮನ್ನಾಕ್ಕೆ ಕೇಳಿದ್ರೆ ನಮ್ಮಲ್ಲಿ ನೋಟ್ ಪ್ರಿಂಟಿಂಗ್ ಮಿಷನ್ ಇಲ್ಲ ಅಂತಾರೆ. ಈಗ ನೆರೆಗೆ ಪರಿಹಾರ ಕೇಳಿದ್ರೆ ಸುಮ್ಮನಿರ್ರಿ ಅಂತಾರೆ. ನಿಮಗೆ ನೈತಿಕತೆ ಇದೆಯಾ ಯಡಿಯೂರಪ್ಪ? ಮಣ್ಣಿನ ಮಗ ಅಂತಾ ಹಸಿರು ಸಾಲ ಹಾಕ್ತಿರಲ್ಲ, ನಾಚಿಕೆ ಆಗಲ್ವಾ? ಎಂದು ವಾಗ್ದಾಳಿ ಮಾಡಿದರು.

ದೇಶದಲ್ಲಿ ಈ ಸ್ಥಿತಿಗೆ ನೇರ ಹೊಣೆ ನರೇಂದ್ರ ಮೋದಿ. ಎರಡು ಬಾರಿ ಕರ್ನಾಟಕದಲ್ಲಿ ಯಡಿಯೂರಪ್ಪ ಸಿಎಂ ಆದಾಗಲೇ ನೆರೆಯಾಗಿದೆ. ಪ್ರಧಾನಿ ಕೇವಲ ವಿದೇಶ ಪ್ರಯಾಣದಲ್ಲಿ ಫೋಟೋ ತೆಗೆದು ಮೋಜಿನಲ್ಲಿದ್ದಾರೆ ಎಂದು ಮೋದಿ ಅವರ ಮೇಲೆಯೂ ಆರೋಪ ಮಾಡಿದರು.

click me!