ಶಿಕಾರಿಪುರ: ಸಿಎಂ ನಿವಾಸ ಸಮೀಪ ಸೀಲ್‌ಡೌನ್‌

Kannadaprabha News   | Asianet News
Published : Jul 19, 2020, 11:16 AM IST
ಶಿಕಾರಿಪುರ: ಸಿಎಂ ನಿವಾಸ ಸಮೀಪ ಸೀಲ್‌ಡೌನ್‌

ಸಾರಾಂಶ

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರರ ಅಧಿಕೃತ ನಿವಾಸ ಹಾಗೂ ಕಚೇರಿ ಇರುವ ಪಟ್ಟಣದ ಮಾಳೇರಕೇರಿಯಲ್ಲಿನ ವ್ಯಕ್ತಿಯೋರ್ವರಿಗೆ ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ಮನೆ ವ್ಯಾಪ್ತಿಯಲ್ಲಿನ 12 ಮನೆಗಳಿರುವ ಸ್ಥಳವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಶಿಕಾರಿಪುರ (ಜು. 19):  ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರರ ಅಧಿಕೃತ ನಿವಾಸ ಹಾಗೂ ಕಚೇರಿ ಇರುವ ಪಟ್ಟಣದ ಮಾಳೇರಕೇರಿಯಲ್ಲಿನ ವ್ಯಕ್ತಿಯೋರ್ವರಿಗೆ ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ಮನೆ ವ್ಯಾಪ್ತಿಯಲ್ಲಿನ 12 ಮನೆಗಳಿರುವ ಸ್ಥಳವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಬಾಡಿಗೆ ಮನೆಯಲ್ಲಿ ವಾಸವಿರುವ ರಾಜಸ್ಥಾನ ಮೂಲದ ವ್ಯಕ್ತಿ ತನ್ನ ಎಲೆಕ್ಟ್ರಿಕಲ್‌ ಅಂಗಡಿಗೆ ಕೆಲಸಕ್ಕಾಗಿ ಯುವಕನೋರ್ವನ ಜತೆ ಜು. 12ರಂದು ರಾಜಸ್ಥಾನದಿಂದ ಬಸ್‌ ಮೂಲಕ ರಾಣೇಬೆನ್ನೂರು ಮಾರ್ಗವಾಗಿ ಶಿಕಾರಿಪುರಕ್ಕೆ ಆಗಮಿಸಿದ್ದಾರೆ. ರಾಣೇಬೆನ್ನೂರಿನಲ್ಲಿ ಅನುಮಾನಗೊಂಡ ಆರೋಗ್ಯ ಇಲಾಖೆ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಶಿಕಾರಿಪುರದ ಆರೋಗ್ಯ ಇಲಾಖೆ ಸಿಬ್ಬಂದಿ ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಹೋಂ ಕ್ವಾರಂಟೈನ್‌ಗೊಳಪಡಿಸಿದ್ದರು.

ಶಿವಮೊಗ್ಗದಲ್ಲಿ 49 ಮಂದಿಗೆ ಕೊರೋನಾ ಸೋಂಕು ದೃಢ; 800 ರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಅಂಗಡಿ ಕೆಲಸಕ್ಕಾಗಿ ಧಾವಿಸಿದ್ದ ಯುವಕನಿಗೆ ಸೋಂಕು ದೃಡಪಟ್ಟಕಾರಣ ಸೀಲ್‌ ಮಾಡಲಾಗಿದೆ. ತಾ. ವೈದ್ಯಾಧಿಕಾರಿ ಡಾ.ಚಂದ್ರಪ್ಪ, ಪುರಸಭಾ ಮುಖ್ಯಾಧಿಕಾರಿ ಸುರೇಶ್‌, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ ಪೂಜಾರ್‌, ಪೊಲೀಸ್‌ ಅಧಿಕಾರಿಗಳು ಸೀಲ್‌ ಡೌನ್‌ ಮಾಡಿದ್ದಾರೆ. ಮುಖ್ಯಮಂತ್ರಿಗಳ ನಿವಾಸ, ಕಚೇರಿ ಸೀಲ್‌ಡೌನ್‌ನಿಂದ ಹೊರಗಿದೆ.

 

PREV
click me!

Recommended Stories

'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!
ಸಣ್ಣ ಜೆರಾಕ್ಸ್ ಅಂಗಡಿ ಮಾಲೀಕನಿಂದ ₹1.6 ಲಕ್ಷ ವಸೂಲಿ; ಕಗ್ಗಲೀಪುರ PSI ಹರೀಶ್ ಸಸ್ಪೆಂಡ್