ಕೇರಳ ಗಡಿಯಲ್ಲಿ ಕೊರೋನಾ ಕಟ್ಟೆಚ್ಚರ : ರಸ್ತೆ ಬಂದ್ ಮಾಡಿ ಆಕ್ರೋಶ

By Kannadaprabha NewsFirst Published Feb 23, 2021, 12:49 PM IST
Highlights

ಕೇರಳದಲ್ಲಿ ಕೊರೋನಾ ಮಹಾಮಾರಿ ಹಾವಳಿ ಹೆಚ್ಚಾಗಿದ್ದು ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇತ್ತ ಕೇರಳದಿಂದ ಬರುವರಿಕೆ ಕೋವಿಡ್ ವರದಿ ಕಡ್ಡಾಯ ಮಾಡಿದ್ದು ಇದನ್ನ ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. 

ಮಂಗಳೂರು (ಫೆ.23):  ಕೇರಳ - ಕರ್ನಾಟಕ ಗಡಿ ಯಲ್ಲಿ ಕೊರೋನಾ ಕಟ್ಟೆಚ್ಚರ ವಹಿಸಿದ್ದು, ಇದನ್ನ ವಿರೋಧಿಸಿ ಮಂಗಳೂರಿನ ತಲಪಾಡಿ ಗಡಿಯಲ್ಲಿ ಕೇರಳ ರಸ್ತೆ ಬಂದ್ ಮಾಡಿದ ಡಿವೈಎಫ್ ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.  

ಕೇರಳದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ  ರಾಜ್ಯಕ್ಕೂ ಮಹಾಮಾರಿ ಹಾವಳಿ ತಟ್ಟದಿರಲಿ ಎಂದು ಮುನ್ನೆಚ್ಚರಿಕಾ ಕ್ರಮವಾಗಿ ಗಡಿಯಲ್ಲಿ ಕೇರಳ ಪ್ರಯಾಣಿಕರಿಗೆ ನೆಗೆಟಿವ್ ವರದಿ ಕಡ್ಡಾಯ ಮಾಡಿದ್ದು ಇದನ್ನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. 

ಕೊರೊನಾ ಸೋಂಕು ಹೆಚ್ಚಳ ತಡೆಗೆ ಮತ್ತಷ್ಟು ಕಠಿಣ ಕ್ರಮ

ದಕ್ಷಿಣ ಕನ್ನಡ ಜಿಲ್ಲಾಡಳಿತ ಮೂರು ದಿನದ ವಿನಾಯಿತಿ ನೀಡಿದರೂ ಡಿವೈಎಫ್‌ಐ ಸಂಘಟನೆ ಕಾರ್ಯಕರ್ತರು ತೀವ್ರ ಪ್ರತಿಭಟನೆಗೆ ಇಳಿದಿದ್ದಾರೆ.  

ದಕ್ಷಿಣ ಕನ್ನಡ ಜಿಲ್ಲಾಡಳಿತ ನೀಡಿದ ಆದೇಶ ವಾಪಸ್ ಪಡೆಯಲು ಆಗ್ರಹಿಸಿ ರಸ್ತೆ ತಡೆ ನಡೆಸಿದ್ದಾರೆ. ತಲಪಾಡಿಯ ಕೇರಳ ಗಡಿ ಭಾಗದ  ರಸ್ತೆಯಲ್ಲಿ ಕುಳಿತು ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕದ ಕೆಎಸ್ಸಾರ್ಟಿಸಿ ಬಸ್ ತಡೆದು  ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.  ಎಸ್‌ಡಿಪಿಐ ಪ್ರತಿಭಟನೆಯಿಂದ ಮಂಗಳೂರಿನಿಂದ ಕರ್ನಾಟಕ ತೆರಳುವ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗಿದೆ. 

click me!