ನಮ್ಮೊಂದಿಗೆ ಜೆಡಿಎಸ್‌ನವರು ಬಂದರೆ ಖುಶಿ : ಪ್ರತಾಪ್ ಸಿಂಹ

Kannadaprabha News   | Asianet News
Published : Feb 23, 2021, 11:52 AM ISTUpdated : Feb 23, 2021, 11:53 AM IST
ನಮ್ಮೊಂದಿಗೆ ಜೆಡಿಎಸ್‌ನವರು ಬಂದರೆ ಖುಶಿ : ಪ್ರತಾಪ್ ಸಿಂಹ

ಸಾರಾಂಶ

ಜೆಡಿಎಸ್‌ನವರು ನಮ್ಮ ಜೊತೆಗೆ ಬಂದರೆ ಖುಷಿ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಈ ಮೂಲಕ ಜೆಡಿಎಸ್‌ ಮುಖಂಡರಿಗೆ ಆಹ್ವಾನ ನೀಡಿದ್ದಾರೆ. 

ಮೈಸೂರು (ಫೆ.23):  ಮೈಸೂರು ಮಹಾನಗರ ಪಾಲಿಕೆಯ ಮೇಯರ್‌, ಉಪ ಮೇಯರ್‌ ಚುನಾವಣೆಯಲ್ಲಿ ನಮ್ಮೊಂದಿಗೆ ಜೆಡಿಎಸ್‌ನವರು ಬಂದರೆ ಖುಷಿ. ಇಲ್ಲ ಅಂದರೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಸಿದ್ಧ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರ್ಕಾರಗಳು ಇವೆ. ಮೈಸೂರು ಮಹಾನಗರ ಪಾಲಿಕೆಗೆ ಏನು ಕೆಲಸ ಆಗಬೇಕೋ ಅದನ್ನ ಮಾಡಿಸಿಕೊಳ್ಳುತ್ತೇವೆ ಎಂದರು.

ಬಿಜೆಪಿಗರು ಬಂದು ನನ್ನ ಬಳಿ ಮಾತಾಡಿದ್ದಾರೆ ಎಂದ ಸಾರಾ : ಅನುಕಂಪ ತೋರಿ ಎಂದ ಸಚಿವ ...

ಈ ಹಿಂದೆ ಪಾಲಿಕೆ ಮತ್ತು ಜಿಪಂನಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿ ಅನುಭವ ಚೆನ್ನಾಗಿತ್ತು. ಕಳೆದೆರೆಡು ವರ್ಷದಿಂದ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿಯಲ್ಲಿ ಏನಾಗ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇದನ್ನ ಅರ್ಥಮಾಡಿಕೊಂಡು ಜೆಡಿಎಸ್‌ನವರು ಬಿಜೆಪಿಗೆ ಬರಲಿ ಎಂದು ಮೈತ್ರಿಗೆ ಆಹ್ವಾನಿಸಿದ ಅವರು, ಸಚಿವ ಎಸ್‌.ಟಿ. ಸೋಮಶೇಖರ್‌ ನೇತೃತ್ವದಲ್ಲಿ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಹೇಳಿದರು.

PREV
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ