ನಮ್ಮ ಹೊಟ್ಟೆ ಮೇಲೆ ಹೊಡಿಬೇಡಿ; ಹೊರರಾಜ್ಯದ ಕ್ಷೌರಿಕ ಅಂಗಡಿಗೆ ಅವಕಾಶ ನೀಡದಂತೆ ಮನವಿ

Published : Oct 03, 2026, 07:36 AM IST
Siddapur

ಸಾರಾಂಶ

ಮಡಿವಾಳ ಸಮಾಜದ ವ್ಯಕ್ತಿಯೊಬ್ಬರು ಹೊರರಾಜ್ಯದವರನ್ನು ಕರೆಸಿ ಕ್ಷೌರಿಕ ವೃತ್ತಿ ಆರಂಭಿಸಲು ಮುಂದಾಗಿದ್ದಾರೆ. ಇದನ್ನು ವಿರೋಧಿಸಿ ತಾಲೂಕು ಸವಿತಾ ಸಮಾಜದವರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ತಮ್ಮ ಪರಂಪರಾಗತ ವೃತ್ತಿಗೆ ಧಕ್ಕೆಯಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರವಾರ: ಸಿದ್ದಾಪುರ ತಾಲೂಕಿನ ಬಿಳಗಿಯಲ್ಲಿ ಮಡಿವಾಳ ಸಮಾಜದ ಶ್ರೀನಿವಾಸ ಪರಶುರಾಮ ಮಡಿವಾಳ ಅವರು ಹೊರರಾಜ್ಯದಿಂದ ಜನರನ್ನು ಕರೆಸಿ ನಮ್ಮ ಸಮಾಜದ ಪರಂಪರಾಗತ ವೃತ್ತಿಯಾದ ಕ್ಷೌರಿಕ ವೃತ್ತಿಯನ್ನು ಮಾಡಲು ತಯಾರಿ ನಡೆಸುತ್ತಿದ್ದಾರೆ. ಇದನ್ನು ತಹಸೀಲ್ದಾರರು ಕೂಡಲೇ ತಡೆಯಬೇಕೆಂದು ತಾಲೂಕು ಸವಿತಾ ಸಮಾಜದವರು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಸವಿತಾ ಸಮಾಜದ ಪ್ರಮುಖರಾದ ಗಣಪತಿ ಕಾನಗೋಡ ಅವರು, ನಮ್ಮ ಸವಿತಾ ಸಮಾಜಕ್ಕೆ ಯಾವುದೇ ರಾಜಕೀಯ ಬೆಂಬಲ ಇಲ್ಲ. ತಲೆತಲಾಂತರದಿಂದ ಕ್ಷೌರಿಕ ವೃತಿಯನ್ನು ನಡೆಸಿಕೊಂಡು ಜೀವನ ನಡೆಸುತ್ತ ಬರುತಿದ್ದೇವೆ. ಯಾವುದೇ ಜಾತಿ, ಮತ, ಧರ್ಮ ಎನ್ನುವುದನ್ನು ನೋಡದೇ ಸಮಾಜದ ಎಲ್ಲ ಜಾತಿಯವರ ಮನೆಗಳಲ್ಲಿ ನಡೆಯುವ ಶುಭ ಹಾಗೂ ಅಶುಭ ಕಾರ್ಯಕ್ರಮಗಳಿಗೆ ಮನೆಗೇ ತೆರಳಿ ನಮ್ಮ ಸೇವೆಯನ್ನು ನೀಡುತ್ತಿದ್ದೇವೆ. ಎಲ್ಲ ಸಮಾಜದವರೊಡನೆ ಮಾನವೀಯ ಸಂಬಂಧವನ್ನು ಇಟ್ಟುಕೊಂಡು ಮುಂದುವರಿಸಿಕೊಂಡು ಹೋಗುತಿದ್ದೇವೆ ಎಂದರು.

ಹೊರ ರಾಜ್ಯದವರಿಂದ ಕ್ಷೌರಿಕ ವೃತ್ತಿ

ತಾಲೂಕಿನಲ್ಲಿ ಇಲ್ಲಿಯವರೆಗೆ ಎಲ್ಲಿಯೂ ಕ್ಷೌರಿಕ ಸಮಾಜದವರನ್ನು ಬಿಟ್ಟರೆ ಬೇರಾವುದೇ ವ್ಯಕ್ತಿಗಳು ಕ್ಷೌರಿಕ ವೃತ್ತಿ ಮಾಡಿದ ದಾಖಲೆ ಇಲ್ಲ. ಆದರೆ ಬಿಳಗಿಯಲ್ಲಿ ಮಡಿವಾಳ ಸಮಾಜದ ಶ್ರೀನಿವಾಸ ಪರಶುರಾಮ ಮಡಿವಾಳ ಅವರು ಕ್ಷೌರಿಕ ಅಂಗಡಿಯನ್ನು ತೆರೆದು ಹೊರರಾಜ್ಯದಿಂದ ವ್ಯಕ್ತಿಗಳನ್ನು ಕರೆಸಿ ವೃತ್ತಿ ಮಾಡಲು ತಯಾರಿ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದರು.

ತಾಲೂಕು ಸವಿತಾ ಸಮಾಜ ಉಪಾಧ್ಯಕ್ಷ ಜಗದೀಶ, ಪ್ರಮುಖರಾದ ಸತೀಶ ಕೊಡಿಯಾ, ಆನಂದ, ವಿನಾಯಕ ಮಹಾಲೆ, ಚಂದ್ರ ಭಂಡಾರಿ, ಪ್ರಜ್ವಲ ಮಹಾಲೆ, ರಾಜೇಶ, ಶ್ರೀಕಾಂತ, ಶಿವರಾಮ, ಶಿವರಾಜ ಇತರರಿದ್ದರು.

ಈ ಕುರಿತು ತಾಲೂಕು ಸವಿತಾ ಸಮಾಜದವರು ಗುರುವಾರ ಮನವಿ ನೀಡಿದ್ದು, ಉಪ ತಹಸೀಲ್ದಾರ್ ಸಂತೋಷ ಭಂಡಾರಿ ಮನವಿ ಸ್ವೀಕರಿಸಿದರು.

PREV
Read more Articles on
click me!

Recommended Stories

ಅಂತ ಪುಣ್ಯಾತ್ಮನಿಗೆ ಎಂಥ ಮಗ.! ಅಪ್ಪನ ₹90 ಲಕ್ಷ ಸುಲಿಗೆಗೆ ಕಿಡ್ನಾಪ್ ನಾಟಕವಾಡಿದ ಮಗ; ಸಿಕ್ಕಿಬಿದ್ದಿದ್ದು ಹೇಗೆ?
ರೈತರೇ ಎಚ್ಚರ! ಜೋಳದ ಫಸಲಿನ ಚಿಗುರು ವಿಷವಾ? ಸಿಪ್ಪೆ ತಿಂದ 20 ಕುರಿಗಳ ಸಾವಿಗೆ ಅಸಲಿ ಕಾರಣ ಏನು?