ರೈತರೇ ಎಚ್ಚರ! ಜೋಳದ ಫಸಲಿನ ಚಿಗುರು ವಿಷವಾ? ಸಿಪ್ಪೆ ತಿಂದ 20 ಕುರಿಗಳ ಸಾವಿಗೆ ಅಸಲಿ ಕಾರಣ ಏನು?

Kannadaprabha News   | Kannada Prabha
Published : Oct 03, 2026, 06:17 AM IST
sheep death in Kudligi

ಸಾರಾಂಶ

sheep death in Kudlig ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಜಮೀನಿನಲ್ಲಿ ಬೆಳೆದಿದ್ದ ಜೋಳದ ಫಸಲಿನ ಚಿಗುರು ತಿಂದು 20 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಜೋಳದ ಚಿಗುರಿನಲ್ಲಿರುವ ಸೈನೈಡ್ ಅಂಶವೇ ಈ ದುರ್ಘಟನೆಗೆ ಕಾರಣ ಎಂದು ಪಶುಪಾಲನಾ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.

ಕೂಡ್ಲಿಗಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಯರ್ರೋಬಯ್ಯನಹಟ್ಟಿ ಗ್ರಾಮದ ನೀರಾವರಿ ಜಮೀನಿನಲ್ಲಿ ಕಟಾವು ಮಾಡಿದ ಜೋಳದ ಫಸಲಿನ ಚಿಗುರು ತಿಂದು 20 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಇನ್ನು ಕೆಲವು ಕುರಿಗಳು ಸಾವು-ಬದುಕಿನ ನಡುವೆ ಹೋರಾಡುತ್ತಿವೆ.

ಜೋಳದ ಫಸಲಿನ ಚಿಗುರು ವಿಷವಾ?

ಕುರಿಗಳು ಎಂದಿನಂತೆ ಗ್ರಾಮದ ಹೊರವಲಯದ ಗದ್ದೆಗೆ ಮೇಯಲು ತೆರಳಿದ್ದು, ಅಕಸ್ಮಾತ್ತಾಗಿ ಜೋಳದ ಫಸಲಿನ ಚಿಗುರನ್ನು ತಿಂದಿವೆ. ತಕ್ಷಣವೇ ಅವು ಹೊಟ್ಟೆ ಉಬ್ಬರದಿಂದ ಸಾವನ್ನಪ್ಪಿವೆ. ಜೋಳದ ಚಿಗುರು ಸಿಪ್ಪೆಯಲ್ಲಿ ಸೈನೈಡ್ ಅಂಶ ಇರುವುದರಿಂದ ಅದು ವಿಷವಾಗಿ ಪರಿಣಮಿಸಿ ಕುರಿಗಳ ಸಾವಿಗೆ ಕಾರಣವಾಗುತ್ತದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ರೈತರು ಹಾಗೂ ಕುರಿಗಾಯಿಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ವೈದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಸಿಪ್ಪೆ ತಿಂದ 20 ಕುರಿಗಳ ಸಾವಿಗೆ ಅಸಲಿ ಕಾರಣ ಏನು?

ಕುರಿಗಳು ಎಂದಿನಂತೆ ಗ್ರಾಮದ ಹೊರವಲಯದ ಮಾಗಾಣಿ( ಗದ್ದೆ ) ಅರಣ್ಯ ಪಕ್ಕದ ನೀರಾವರಿ ಹೊಲಗಳ ಕಡೆಗೆ ತೆರಳಿದ್ದವು. ಈ ಬಾರಿ ಬರ ಇರುವುದರಿಂದ ಮೇವಿಲ್ಲದೆ ಹೊಟ್ಟೆ ಹಸಿದುಕೊಂಡಿದ್ದ ಕುರಿಗಳು, ಹಸಿರು ಮೇವು ಕಂಡ ಜಾಗಕ್ಕೆ ತೆರಳಿ, ಜೋಳದ ಫಸಲಿನ ಚಿಗುರನ್ನು ತಿಂದಿದ್ದು, ತಕ್ಷಣವೇ ಅವು ಹೊಟ್ಟೆ ಉಬ್ಬರದಿಂದ ಸಾವನ್ನಪ್ಪಿವೆ.

ಸ್ಥಳಕ್ಕೆ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಭೇಟಿ

ಸ್ಥಳಕ್ಕೆ ಪಶುಪಾಲನಾ ಇಲಾಖೆಯ ಅಧಿಕಾರಿಗಳು ತೆರಳಿದ್ದು, ಮೃತಪಟ್ಟ ಎಲ್ಲ ಕುರಿಗಳ ಪರೀಕ್ಷೆ ನಡೆಸಿದ್ದಾರೆ. ಜೋಳದ ಚಿಗುರು ಸಿಪ್ಪೆ ಸೇವಿಸಿರುವುದು ಪತ್ತೆಯಾಗಿದೆ. ಜೋಳದ ಚಿಗುರು ಸಿಪ್ಪೆಯಲ್ಲಿ ಸೈನೈಡ್ ಅಂಶ ಇರುವುದರಿಂದ ಅದು ವಿಷವಾಗಿ ಪರಿಣಮಿಸಿ ಕುರಿಗಳ ಸಾವಿಗೆ ಕಾರಣವಾಗುತ್ತದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ರೈತರು ಹಾಗೂ ಕುರಿಗಾಯಿಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ವೈದಾಧಿಕಾರಿಗಳು ಮನವಿ ಮಾಡಿದ್ದಾರೆ.

ಕುರಿಗಾಯಿಗಳಿಂದ ಸರ್ಕಾರದ ಪರಿಹಾರಕ್ಕಾಗಿ ಅಗತ್ಯ ದಾಖಲೆ ಪಡೆದು ಒಂದು ಕುರಿಗೆ ನಿಗದಿತ ಮೊತ್ತ ಪರಿಹಾರ ನೀಡಲು ಸೂಕ್ತ ಕ್ರಮವಹಿಸಲಾಗುವುದು ಎಂದು ಪಶುಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿ ಡಾ. ರಾಘವೇಂದ್ರ ಪ್ರತಿಕ್ರಿಯಿಸಿದರು.

PREV
Read more Articles on
click me!

Recommended Stories

ಮೈಸೂರು ದಸರಾ: ರಾಜವಂಶಸ್ಥರಿಗೆ ಆಹ್ವಾನ; ಕಂಬಳದಲ್ಲಿ ಗೆಲ್ಲುವ ಕೋಣಕ್ಕೆ ಎಷ್ಟು ಗ್ರಾಂ ಬಂಗಾರ?
ಯುದ್ಧಪೀಡಿತ ಪ್ರದೇಶದಂತಿರುವ ಇಂದಿರಾ ನಗರ ಪುಟ್‌ಪಾತ್! ವಿದೇಶಿಗನ ವಿಡಿಯೋ ವೈರಲ್