ಹುಬ್ಬಳ್ಳಿ: ಚಾಲಕನ ಸಮಯಪ್ರಜ್ಞೆ, ತಪ್ಪಿದ ಭಾರೀ ದುರಂತ

By Kannadaprabha NewsFirst Published Sep 9, 2020, 10:07 AM IST
Highlights

ಬಸ್‌ನಲ್ಲಿ ತಲೆ ಸುತ್ತು ಬಂದು ಬಿದ್ದ ಚಾಲಕ|ಹುಬ್ಬಳ್ಳಿಯ ಬಿಆರ್‌ಟಿಎಸ್‌ ಬಸ್‌ನಲ್ಲಿ ನಡೆದ ಘಟನೆ| ಕುಸಿದು ಬೀಳುವ ಮುನ್ನ ಬಸ್‌ನ್ನು ನಿಧಾನಗೊಳಿಸಿ ನಿಲ್ಲಿಸಿದ ಪರಿಣಾಮ ಬಸ್‌ನಲ್ಲಿದ್ದ 40 ಜನ ಪ್ರಯಾಣಿಕರ ಪ್ರಾಣ ಉಳಿದಿದೆ| ಕುಸಿದು ಬೀಳುತ್ತಿರುವ ದೃಶ್ಯ ಬಸ್‌ನಲ್ಲಿ ಸಿಸಿ ಕ್ಯಾಮರಾದಲ್ಲಿ ಸೆರೆ| 

ಹುಬ್ಬಳ್ಳಿ(ಸೆ.09): ಬಸ್‌ ಚಾಲಕನಿಗೆ ಶುಗರ್‌ ಲೇವಲ್‌ ಜಾಸ್ತಿಯಾದ ಪರಿಣಾಮ ತಲೆಸುತ್ತು ಬಂದು ಚಾಲಕ ಕುಸಿದು ಬಿದ್ದಿದ್ದಾರೆ. ಆದರೆ ಹೀಗೆ ಕುಸಿದು ಬೀಳುವ ಮುನ್ನ ಬಸ್‌ನ್ನು ನಿಧಾನಗೊಳಿಸಿ ನಿಲ್ಲಿಸಿದ ಪರಿಣಾಮ ಬಸ್‌ನಲ್ಲಿದ್ದ 40 ಜನ ಪ್ರಯಾಣಿಕರ ಪ್ರಾಣ ಉಳಿದಿದೆ.

ಆಗಿದ್ದೇನು?:

ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸುವ ಬಿಆರ್‌ಟಿಎಸ್‌ ಬಸ್‌ ಚಾಲಕ ಎ.ಎಂ. ಸುಣದಾಳ ಎಂಬುವವರಿಗೆ ನವನಗರ ಬ್ರಿಡ್ಜ್‌ ಬಳಿ ತಲೆ ಸುತ್ತು ಬಂದಿದೆ. ಬಸ್‌ ವೇಗದಲ್ಲಿ ಚಲಿಸುತ್ತಿತ್ತು. ಚಾಲಕ ತನಗೆ ತಲೆ ಸುತ್ತು ಬರುತ್ತಿರುವುದನ್ನು ಗಮನಿಸಿ ಕೂಡಲೇ ರಸ್ತೆ ಪಕ್ಕದಲ್ಲೇ ಬಸ್‌ನ್ನು ನಿಧಾನಗೊಳಿಸಿ ನಿಲ್ಲಿಸಿ ಕುಸಿದು ಬಿದ್ದಿದ್ದಾರೆ. ಕೂಡಲೇ ಪ್ರಯಾಣಿಕರೇ ಓಡಿ ಬಂದು ಎಚ್ಚರಗೊಳಿಸಿ ನೀರು ಕುಡಿಸಿದ್ದಾರೆ. ಅಲ್ಲದೇ, ಎದುರಿಗೆ ಬರುತ್ತಿದ್ದ ಮತ್ತೊಂದು ಬಿಆರ್‌ಟಿಎಸ್‌ ಬಸ್‌ಗೆ ಕೈ ತೋರಿಸಿ ನಿಲ್ಲಿಸಿ ವಿಷಯ ತಿಳಿಸಿದ್ದಾರೆ. 

ಧರ್ಮದಿಂದಲೇ ರಾಜಕಾರಣ ಮಾಡುತ್ತೇನೆ: ಸಂತೋಷ ಲಾಡ್‌

ಆ ಬಸ್‌ ಡ್ರೈವರ್‌ ಆಗಮಿಸಿ ಎಲ್ಲ ಪ್ರಯಾಣಿಕರನ್ನು ಬೇರೆ ಬಸ್‌ನಲ್ಲಿ ಸಾಗಿಸಿದ್ದಾರೆ. ಅಷ್ಟೊತ್ತಾಗಲೇ ಈ ವಿಷಯ ಅಧಿಕಾರಿ ವರ್ಗಕ್ಕೆ ಗೊತ್ತಾಗಿ ಕೂಡಲೇ ಸ್ಥಳಕ್ಕೆ ತೆರಳಿದ್ದಾರೆ. ಬಳಿಕ ಅದೇ ಬಸ್‌ನಲ್ಲೇ ಅಸ್ವಸ್ಥಗೊಂಡಿದ್ದ ಚಾಲಕ ಸುಣದಾಳ ಅವರನ್ನು ಕಿಮ್ಸ್‌ ಆಸ್ಪತ್ರೆಗೆ ಸಾಗಿಸಿದ್ದಾರೆ. ಕಿಮ್ಸ್‌ನಲ್ಲಿ ಪರೀಕ್ಷೆಗೊಳಪಡಿಸಿದಾಗ ಶುಗರ್‌ ಲೇವಲ್‌ ಕಡಿಮೆಯಾಗಿರುವುದು ಗೊತ್ತಾಗಿದೆ. ಚಿಕಿತ್ಸೆ ನೀಡಿ ಮರುದಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ. ಈ ಘಟನೆ ನಡೆದು ಎರಡು ದಿನಗಳಾಗಿವೆ. ಸದ್ಯ ಚಾಲಕ ಆರೋಗ್ಯವಾಗಿದ್ದಾರೆ. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಆದರೆ ಬಸ್‌ ಚಾಲನೆ ಮಾಡುವಾಗಲೇ ತಲೆ ಸುತ್ತು ಬಂದು ಕುಸಿದು ಬೀಳುವ ಹಂತಕ್ಕೆ ತಲುಪಿದ್ದರೂ ಬಸ್‌ ಪಕ್ಕಕ್ಕೆ ನಿಲ್ಲಿಸಿರುವುದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. 40 ಜನ ಪ್ರಯಾಣಿಕರ ಪ್ರಾಣ ಉಳಿಸಿದಂತಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಚಾಲಕ ಬಸ್‌ ನಿಲುಗಡೆ ಮಾಡುತ್ತಿರುವುದು. ಕುಸಿದು ಬೀಳುತ್ತಿರುವ ದೃಶ್ಯಗಳೆಲ್ಲ ಬಸ್‌ನಲ್ಲಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
 

click me!