ಸವಣೂರು (ಆ.15): ಸ್ಥಳೀಯ ಶಾಸಕ ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೆ ಪಟ್ಟಣದ ಹೊರವಲಯದ ಜೋಡು ಮಾರುತಿ ದೇವರಿಗೆ 101 ತೆಂಗಿನಕಾಯಿ ಒಡೆಯಲಾಯಿತು.
ಹರಕೆ ಹೊತ್ತಿದ್ದ ಪುರಸಭೆ ಅಧ್ಯಕ್ಷೆ ಶೈಲಾ ಮುದಿಗೌಡ್ರ ಶನಿವಾರ ದೇವಸ್ಥಾನದಲ್ಲಿ ಬಿಜೆಪಿ ತಾಲೂಕು ಘಟಕ ಹಾಗೂ ಬೊಮ್ಮಾಯಿ ಅಭಿಮಾನಿ ಬಳಗದ ಸದಸ್ಯರ ಸಮ್ಮುಖದಲ್ಲಿ ಹರಕೆ ತೀರಿಸಿದರು.
ಬೊಮ್ಮಾಯಿ ಸರ್ಕಾರ ಯಾವುದೇ ಸಂದರ್ಭದಲ್ಲಿ ಪತನಗೊಳ್ಳಬಹುದು: ಹೀಗೊಂದು ಭವಿಷ್ಯ
ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಉತ್ತಮ ಆಡಳಿತ ನೀಡಲಿ ಎಂದು ಈ ವೇಳೆ ಪ್ರಾರ್ಥಿಸಲಾಯಿತು.
ಬಿಜೆಪಿ ತಾಲೂಕು ಘಟಕ ಅಧ್ಯಕ್ಷ ಗಂಗಾಧರ ಬಾಣದ, ಬಿಜೆಪಿ ಸವಣೂರ ಮಂಡಲ ಕಾರ್ಯದರ್ಶಿ ಚೆನ್ನಬಸಯ್ಯ ದುರ್ಗದಮಠ ಇತರರು ಇದ್ದರು.