ED Raid: ಪ್ರಧಾನಿ ಮೋದಿ ಹೇಳಿದ್ದನ್ನೇ ಸತೀಶ್ ಜಾರಕಿಹೊಳಿ ಮಾಡುತ್ತಿದ್ದಾರೆ; ಸಚಿವ ಪ್ರಿಯಾಂಕ್ ಖರ್ಗೆ ಅಚ್ಚರಿ ಹೇಳಿಕೆ!

Published : Sep 12, 2026, 05:09 PM IST
priyank kharge

ಸಾರಾಂಶ

ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದು, ವಿದೇಶಿ ಹೂಡಿಕೆ ಕಾನೂನುಬಾಹಿರವಲ್ಲ ಎಂದು ಹೇಳಿದ್ದಾರೆ. ಇತ್ತ, ಸಹೋದರ ಬಾಲಚಂದ್ರ ಜಾರಕಿಹೊಳಿ ಅವರು 770 ಕೋಟಿ ಹೂಡಿಕೆ ಆರೋಪವನ್ನು ನಿರಾಕರಿಸಿದ್ದು, ವಶಪಡಿಸಿಕೊಂಡ ಹಣಕ್ಕೆ ಲೆಕ್ಕವಿದೆ ಮತ್ತು ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ಜಾರಿ ನಿರ್ದೇಶಾಲಯ (ಇಡಿ) ದಾಳಿಯ ಕುರಿತಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಇಡಿ ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ? ಇನ್ನು ಮುಂದಿನ ತನಿಖೆ ನಡೆಯಬೇಕು ಅಂತ ಹೇಳಿದ್ದಾರೆ. ಇದು ಆರೋಪ ಅಂತ ಇದೆ. ಅಲ್ಲಿ ಸಾಕ್ಷಿ ಸಿಕ್ಕಿದೆ ಅಂತಾರೆ, ಏನು ಸಾಕ್ಷಿ ಸಿಕ್ಕಿದೆ ಅಂತ ಹೇಳಿಲ್ಲ. ಪ್ರೆಸ್ ನೋಟ್ ನೂರು ನೋಡಿ ಇದ್ದೀವಿ ಅಲ್ವಾ? ಹೊಸದಾ ಎಂದು ಪ್ರಶ್ನಿಸಿದ್ದಾರೆ.

ಇಡಿ 196 ಕಡೆ ದಾಳಿ ಮಾಡಿದರೆ, ಎರಡು ಕೇಸ್‌ನಲ್ಲಿ ಮಾತ್ರ ಶಿಕ್ಷೆ!

ಇಡಿ ದಾಳಿಯ ಬಗ್ಗೆ ಮೊನ್ನೆ ನಾನು ಅಂಕಿ ಅಂಶ ಕೊಟ್ಟೆ, ಇಲ್ಲಿವರೆಗೂ 196 ಕಡೆ ದಾಳಿ ಆಗಿದೆ ಎರಡು ಕೇಸ್ ಮಾತ್ರ ಶಿಕ್ಷೆ ಆಗಿದೆ. ಎಲ್ಲಾ 196 ದಾಳಿಗಳಿಗೂ ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದಾರೆ. ಶಿಕ್ಷೆ ಪ್ರಮಾಣ ಯಾಕೆ ಇಷ್ಟು ಕಮ್ಮಿ ಇದೆ. ಸತೀಶ್ ಜಾರಕಿಹೊಳಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಎಲ್ಲ ಸಾಬೀತು ಮಾಡಬಹುದು. ನಾವು ಎಲ್ಲಿ ಹೊಡಿಕೆ ಮಾಡಿಲ್ಲ, ಹೊಡಿಕೆ ಮಾಡಬೇಕು ಅಂತ ಇದ್ದೀವಿ ಅಂತ ಹೇಳಿದ್ದಾರೆ. ಅದರಲ್ಲಿ ತಪ್ಪು ಏನಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಹೂಡಿಕೆ ಮಾಡೋದು ತಪ್ಪಾ!

ಪ್ರಧಾನಿ ಮೋದಿ ಅವರು ಭಾರತೀಯ ಹೋಗಿ ಹೊರಗಡೆ ಬಂಡವಾಳ ಹಾಕಬೇಕು, ಇಲ್ಲಿ ಹೊಡಿಕೆ ಮಾಡಬೇಕು ಅಂತ ಮೋದಿ ಹೇಳ್ತಾರೆ. ಸತೀಶ್ ಜಾರಕಿಹೊಳಿ ಅವರು ಅದನ್ನೇ ಮಾಡ್ತಾ ಇರೋದು ಅಲ್ವಾ? ಹೂಡಿಕೆ ಮಾಡಿದರೆ ಅದು ಕಾನೂನು ಬಾಹಿರನಾ? ಕಾಂಗೋದಲ್ಲಿ ಇರಬಹುದು, ಕೆನಡಾದಲ್ಲಿ ಇರಬಹುದು. ಹೂಡಿಕೆ ಮಾಡೋದು ತಪ್ಪಾ! ಅದನ್ನ ಎಲ್ಲೂ ಹೇಳಿಲ್ಲ ಅಲ್ವಾ? ಇವರೇ ಮಾಡಬೇಕು ಅಂತ ಹೇಳಿದ್ದಾರೆ. ಅವರು ಹೂಡಿಕೆ ಮಾಡಿದ್ದಾರೆ ಅಂತ ಹೇಳಿದ್ದಾರೆ, ಇಡಿ ಅವರು ಕಥೆ ಕಟ್ಟುತ್ತಾರೆ. ಇಲ್ಲಿ ಲಂಚ ತೆಗೆದುಕೊಂಡು ಹೂಡಿಕೆ ಮಾಡಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ದಾಖಲೆ ಸಮೇತ ಕೊಡ್ತೀನಿ ನಾನು, ಹೂಡಿಕೆ ಮಾಡೋಕೆ ರೆಡಿಯಾಗ್ತಾ ಇದ್ದೆ ಅಂತ ಹೇಳಿದ್ದಾರೆ ಎಂದು ವಿವರಿಸಿದರು.

ರಾಜಕಾರಣ ಬೇರೆ ಕುಟುಂಬದ ವಿಷಯದಲ್ಲಿ ನಾವೆಲ್ಲ ಒಂದೇ

ಸತೀಶ್ ಜಾರಕಿಹೊಳಿ ಮನೆಯ ಮೇಲೆ ಇಡಿ ದಾಳಿ ನಡೆಸಿದ ಬಳಿಕ ಸಹೋದರನ ಮನೆಗೆ ಭೇಟಿ ನೀಡಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಮನೆಗೆ ನಾನು ಬಿಜೆಪಿ ಶಾಸಕನಾಗಿ ಭೇಟಿ ನೀಡಿಲ್ಲ. ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. 770 ಕೋಟಿ ರೂಪಾಯಿ ಹೂಡಿಕೆ ಮಾಡಿರುವ ವಿಚಾರ ಸತ್ಯಕ್ಕೆ ದೂರ. ವಿದೇಶದಲ್ಲಿ ಸಚಿವ ಸತೀಶ ಅವರ ಹೂಡಿಕೆ ಇಲ್ಲ, ಸಣ್ಣ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಲಾಗಿದೆ. ಜನರು ಸುಳ್ಳು ಸುದ್ದಿ ಹಬ್ಬಿಸಿ ರಾಜಕಾರಣದಲ್ಲಿ ನಮ್ಮ ಕುಟುಂಬದ ಹೆಸರು ಕೆಡಿಸಬೇಡಿ. ಗೋಕಾಕ್ ನಿವಾಸದಲ್ಲಿ ಒಟ್ಟು 1 ಕೋಟಿ 73 ಲಕ್ಷ ಹಣ ಸೀಜ್ ಮಾಡಲಾಗಿದೆ. 2 ಟ್ರಂಕ್ ತಂದಿದ್ದರೂ ಅದರಲ್ಲಿ ಒಂದೇ ಟ್ರಂಕಿನಲ್ಲಿ ಹಣ ಸೀಜ್ ಮಾಡಿ ಒಯಲಾಗಿದೆ. ಬೇರೆ ಕಡೆ ಹಣ ಸೀಜ್ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ಹಣಕ್ಕೆ ಲೆಕ್ಕ ಕೊಟ್ಟು ಹಣ ಬಿಡುಗಡೆ ಮಾಡಿಸುವ ಕಾರ್ಯ ಆಗುತ್ತದೆ. ದಾಳಿ ವಿರುದ್ಧ ಕಾನೂನು ಹೋರಾಟವನ್ನ ಸತೀಶ ಜಾರಕಿಹೊಳಿ ಮಾಡುತ್ತಾರೆ ಸ್ಪಷ್ಟಪಡಿಸಿದರು.

PREV
Read more Articles on
click me!

Recommended Stories

ಉತ್ತರ ಕರ್ನಾಟಕದ ಮಕ್ಕಳ ಪೈಲಟ್ ಕನಸಿಗೆ ರೆಕ್ಕೆ: ವಿಜಯಪುರ ವಿಮಾನ ನಿಲ್ದಾಣದಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಸ್ಥಾಪನೆ
ಕರಾವಳಿಯಲ್ಲಿ ಧಾರ್ಮಿಕ ಸೌಹಾರ್ದತೆಯ ಮೈಲಿಗಲ್ಲು: ಶ್ರೀ ದೇವಿಯಾಗಿ ರಂಗಸ್ಥಳದಲ್ಲಿ ಮಿಂಚಲಿರುವ ಮುಸ್ಲಿಂ ಹೆಣ್ಣುಮಗಳು ಆರ್ಷಿಯಾ ಖಾನ್