ಬೆಂಗಳೂರು ಪ್ಯಾಲೇಸ್ ರಸ್ತೆಯಿಂದ ಹೆಬ್ಬಾಳದವರೆಗೂ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

Published : Sep 12, 2026, 04:57 PM IST
Ganesh Festival Traffic Disrupts Bengaluru

ಸಾರಾಂಶ

ಬೆಂಗಳೂರು ಏರ್‌ಪೋರ್ಟ್ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಗಣೇಶ ಹಬ್ಬ ಹಿನ್ನಲೆಯಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳು ಸಂಚಾರ ದಟ್ಟಣೆಯಿಂದ ತುಂಬಿದೆ. ಪರಿಣಾಮ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.

ಬೆಂಗಳೂರು (ಸೆ.12) ಗಣೇಶ ಹಬ್ಬ ಹಿನ್ನಲೆಯಲ್ಲಿ ನಗರದ ಹಲೆವೆಡೆ ನಿನ್ನೆ ರಾತ್ರಿಯಿಂದಲೇ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಇದೀಗ ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್‌ ಸೃಷ್ಟಿಯಾಗಿದೆ. ಪ್ಯಾಲೇಸ್ ರಸ್ತೆಯಿಂದ ಹಿಡಿದು ಹೆಬ್ಬಾಳದವರೆಗೂ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣ, ಆಂಧ್ರ ಪ್ರದೇಶ ಸೇರಿದಂತೆ ಪ್ರಮುಖ ರಸ್ತೆಗಳ ಲಿಂಕ್ ಆಗಿರುವ ಕಾರಣ ಹಬ್ಬದ ಹಿನ್ನಲೆಯಲ್ಲಿ ಊರಿಗೆ ತೆರಳುವ ಜನ ಹೆಚ್ಚಿದ್ದಾರೆ. ಹೀಗಾಗಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.

ಕಳೆದ ಕೆಲ ಗಂಟೆಯಿಂದ ಸಿಲುಕಿದ ವಾಹನ ಸವಾರರು

ಪ್ಯಾಲೇಸ್ ರಸ್ತೆಯಿಂದ ಹೆಬ್ಬಾಳದವರೆಗೆ ವಾಹನ ಸಂಚಾರ ಬಂದ್ ಆಗಿದೆ. ಅಷ್ಟರ ಮಟ್ಟಿಗೆ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ವಾಹನ ಸವಾರರು ಕಳೆದ ಕೆಲ ಗಂಟೆಯಿಂದ ಏರ್‌ಪೋರ್ಟ್ ರಸ್ತೆಯಲ್ಲಿ ಸಿಲುಕಿಕೊಂಡಿದ್ದಾರೆ. ಪ್ಯಾಲೇಸ್ ರಸ್ತೆಯಿಂದ ಹೆಬ್ಬಾಳದವರೆಗಿನ ಸರಿಸುಮಾರು 4 ಕಿಲೋಮೀಟರ್ ದೂರ ಕ್ರಮಿಸಲು ಗಂಟೆ ಗಟ್ಟಲೆ ಹಿಡಿಯುತ್ತಿದೆ. ಭಾರಿ ಸಂಖ್ಯೆಯಲ್ಲಿ ವಾಹನಗಳು ಏರ್‌ಪೋರ್ಟ್ ರಸ್ತೆಯಲ್ಲಿ ಸಾಗುತ್ತಿದೆ. ವಿಮಾನ ನಿಲ್ದಾಣ ತಲುಪುದು ಹರಸಾಹಸವಾಗಿದೆ.

ಇಂದು ರಾತ್ರಿ ಮೆಜೆಸ್ಟಿಕ್ ಸುತ್ತ ಮುತ್ತ ಟ್ರಾಫಿಕ್

ಶುಕ್ರವಾರ ಸಂಜೆಯಿಂದ ಮೆಜೆಸ್ಟಿಕ್ ಸುತ್ತ ಮುತ್ತ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಎರಡನೇ ಶನಿವಾರ, ಭಾನುವಾರ, ಸೋಮವಾರ ಗಣೇಶ ಹಬ್ಬದ ಪ್ರಯುಕ್ತ ರಜೆ. ಹೀಗಾಗಿ ಬೆಂಗಳೂರಿನ ಬಹುತೇಕ ಮಂದಿ ಶುಕ್ರವಾರವೇ ಊರಿಗೆ ತೆರಳಿದ್ದಾರೆ. ಹೀಗಾಗಿ ಶುಕ್ರವಾರ ಮೆಜೆಸ್ಟಿಕ್ ಸುತ್ತ ಮುತ್ತ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಇಂದು ರಾತ್ರಿಯೂ ಟ್ರಾಫಿಕ್ ಜಾಮ್ ಸೃಷ್ಟಿಯಾಗಲಿದೆ.

ಮೂರು ದಿನ ರಜೆ ಹಿನ್ನೆಲೆ ತಮ್ಮ ತಮ್ಮ ಊರುಗಳಿಗೆ ಜನರು ಹೊರಟಿದ್ದಾರೆ. ಮೆಜೆಸ್ಟಿಕ್ ಸುತ್ತಮುತ್ತ ನಾಲ್ಕೈದು ಕಿಲೋ ಮೀಟರ್ ವರೆಗೆ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಖಾಸಗಿ ಬಸ್, ಕೆಎಸ್ ಆರ್ ಟಿ ಸಿ ಬಸ್ ಎಲ್ಲವೂ ಪ್ರಯಾಣಿಕರಿಂದ ಭರ್ತಿಯಾಗಿತ್ತು. ಇದರ ನಡುವೆ ಕೆಲ ಆ್ಯಂಬುಲೆನ್ಸ್ ಸಿಲುಕಿ ಪರದಾಡಿದೆ.

PREV
Read more Articles on
click me!

Recommended Stories

ಮುಂಗಾರು ವಿದಾಯ ಹೇಳ್ತಿದೆ .. ಮಾನ್ಸೂನ್‌ ಹಿಂತಿರುಗುವ ಪ್ರಕ್ರಿಯೆ ಹೇಗೆ ನಡೆಯುತ್ತೆ?
Bengaluru ಪರಪ್ಪನ ಅಗ್ರಹಾರದಲ್ಲಿ ಭಾರೀ ಸ್ಕ್ಯಾಮ್: ಸುಪ್ರೀಂ ಆದೇಶವೇ ನಕಲಿ, ಬಿಡುಗಡೆಯಾಗಿದ್ದ ಅಪರಾಧಿ ಮತ್ತೆ ಲಾಕ್!