ಕರಾಳ ಕೊರೋನಾ; ಸರಿಗಮಪ ಸಿಂಗರ್, ಪೊಲೀಸ್ ಸುಬ್ರಮಣಿ ಪತ್ನಿ ಸಾವು

Published : May 10, 2021, 11:02 PM IST
ಕರಾಳ ಕೊರೋನಾ; ಸರಿಗಮಪ ಸಿಂಗರ್, ಪೊಲೀಸ್ ಸುಬ್ರಮಣಿ ಪತ್ನಿ ಸಾವು

ಸಾರಾಂಶ

* ಸರಿಗಮಪ ಶೋ ಖ್ಯಾತಿಯ ಪೊಲೀಸ್ ಕಾನ್ಸೇಟೆಬಲ್  ಸುಬ್ರಮಣಿ ಪತ್ನಿ ಕೊರೋನಾ ಸೋಂಕಿನಿಂದ ಸಾವು * ಬೆಂಗಳೂರು ಹೊರವಲಯದ ಹೊಸಕೋಟೆ ಯ ಖಾಸಗಿ ಆಸ್ಪತ್ರೆಯಲ್ಲಿ ಸಾವು * ಕಳೆದ ಒಂದು ವಾರದ ಹಿಂದೆ ಪಾಸಿಟಿವ್ ಪತ್ತೆಯಾಗಿತ್ತು, ಎರಡು ದಿನದ ಹಿಂದೆ ತೀವ್ರ ಉಸಿರಾಟದ ಸಮಸ್ಯೆ ಆಗಿತ್ತು * ವೆಂಟಿಲೇಟರ್ ಬೆಡ್ ಸಿಗದೆ ಪರದಾಡಿದ್ದ ಸಿಂಗರ್ ಸುಬ್ರಮಣಿ

ಬೆಂಗಳೂರು(ಮೇ  10)  ಸರಿಗಮಪ ಶೋ ಖ್ಯಾತಿಯ ಪೊಲೀಸ್ ಕಾನ್ಸೇಟೆಬಲ್  ಸುಬ್ರಮಣಿ ಪತ್ನಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ಹೊರವಲಯದ ಹೊಸಕೋಟೆ ಯ ಖಾಸಗಿ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾರೆ.

ಕಳೆದ ಒಂದು ವಾರದ ಹಿಂದೆ ಪಾಸಿಟಿವ್ ಪತ್ತೆಯಾಗಿತ್ತು. ಎರಡು ದಿನದ ಹಿಂದೆ ತೀವ್ರ ಉಸಿರಾಟದ ಸಮಸ್ಯೆ ಆಗಿತ್ತು. ವೆಂಟಿಲೇಟರ್ ಬೆಡ್ ಸಿಗದೆ ಪರದಾಡಿದ್ದ ಸಿಂಗರ್ ಸುಬ್ರಮಣಿ ಅವರಿಗೆ ಪತ್ನಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ವೆಂಟಿಲೇಟರ್ ಬೆಡ್ ಸಿಗದೆ ಕೊರೋನಾಕ್ಕೆ ಕೊನೆಯಾದ ಹಿರಿಯ ಜೀವ ರಾಜಾರಾಮ್

ಬೆಂಗಳೂರಿನ ಯಾವ ಆಸ್ಪತ್ರೆಯಲ್ಲೂ ವೆಂಟಿ ಲೇಟರ್ ಬೆಡ್ ಸಿಗಲಿಲ್ಲ. ಕೊನೆಗೆ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸೋಮವಾರ ಸಾವನ್ನಪ್ಪಿದ್ದಾರೆ. 

ವೆಂಟಿಲೇಟರ್  ಬೆಡ್ ಸಿಗದೆ ಕನ್ನಡದ ಹಿರಿಯ ಕಲಾವಿದ ರಾಜಾ ರಾಮ್ ಸಹ ಕೊನೆ ಉಸಿರು ಎಳೆದಿದ್ದರು. ಕೊರೋನಾ ಪರಿಸ್ಥಿತಿ ಕರಾಳವಾಗಿದ್ದು ನಿಮ್ಮ ಎಚ್ಚರಿಕೆ ನಿಮ್ಮ ಕೈಯಲ್ಲಿ..

 

PREV
click me!

Recommended Stories

ಬೆಂಗಳೂರು ಹೊಸವರ್ಷ ಸಂಭ್ರಮದಲ್ಲಿ ನಶೆ ಏರಿದ ಮಹಿಳೆಯರಿಗೆ ರಾತ್ರಿ ಇಡಿ ಉಚಿತ ಡ್ರಾಪ್
ಮಂಗಳೂರು ಕಂಬಳದಲ್ಲಿ ಹಿರಿಯ ತೀರ್ಪುಗಾರಗೆ ಅವಮಾನ, ಜಾಲತಾಣದಲ್ಲಿ ವ್ಯಾಪಕ ಅಕ್ರೋಶ