ಡಾ.ವಿಷ್ಣುವರ್ಧನ್ ಆಧ್ಯಾತ್ಮ ಗುರು ವಿದ್ಯಾವಾಚಸ್ಪತಿ ಗೋವಿಂದಾಚಾರ್ಯರು ಇನ್ನಿಲ್ಲ

By Suvarna NewsFirst Published Dec 13, 2020, 12:18 PM IST
Highlights

ಪ್ರವಚನಕಾರ, ಮಧ್ವ ಸಿದ್ಧಾಂತದ ಪ್ರತಿಪಾದಕ  ಹಾಗೂ ಪತ್ರಕರ್ತರಾಗಿಯೂ ಗುರುತಿಸಿಕೊಂಡಿದ್ದ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ನಿಧನರಾಗಿದ್ದಾರೆ. 

ಉಡುಪಿ (ಡಿ.13):  ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ವಯೋಸಹಜ ಅನಾರೋಗ್ಯದಿಂದ (85) ನಿಧನರಾಗಿದ್ದಾರೆ. 

 ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯರು ಉಡುಪಿಯ ಅಂಬಲಪಾಡಿ ನಿವಾಸದಲ್ಲಿಂದು ಕೊನೆಯುಸಿರೆಳೆದಿದ್ದಾರೆ.

ಪ್ರವಚನಕಾರ, ಮಧ್ವ ಸಿದ್ಧಾಂತದ ಪ್ರತಿಪಾದಕ ಹಾಗೂ ಪತ್ರಕರ್ತರಾಗಿಯೂ ಗುರುತಿಸಿಕೊಂಡಿದ್ದ ಅವರು ನಟ ಡಾ.ವಿಷ್ಣುವರ್ಧನ್ ಗೆ ಆಧ್ಯಾತ್ಮಿಕ ಗುರುಗಳಾಗಿದ್ದರು.  ಹಲವಾರು ಕೃತಿಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ್ದು, ಕನ್ನಡದ ಪ್ರಮುಖ ಮೂರು ಚಲನಚಿತ್ರಗಳಾದ ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಾಚಾರ್ಯಕ್ಕೆ ಸಂಭಾಷಣೆಯನ್ನು ಬರೆದಿದ್ದರು. 

ಇಂದೋರ್‌ ಐಐಟಿಯಲ್ಲಿ ಸಂಸ್ಕೃತ ಬೋಧನೆ: ಇದೊಂದು ಹೊಸ ಹೆಜ್ಜೆ ...

1936ರಲ್ಲಿ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ಜನಿಸಿದ್ದ ಗೋವಿಂದಾಚಾರ್ಯರು ಅಪಾರ ವಿದ್ವತ್ ಉಳ್ಳವರಾಗಿದ್ದರು. 

ತಮ್ಮ ಪ್ರವಚನಗಳ ಮೂಲಕವೇ ಹೆಸರು ಪಡೆದಿದ್ದ ಗೋವಿಂದಾಚಾರ್ಯರು ಮಾಧ್ವ ತತ್ವದಲ್ಲಿ ಅಮೋಘ ಪಾಂಡಿತ್ಯವನ್ನು ಸಾಧಿಸಿದ್ದರು. ಹಲವು ಚಾರಿತ್ರಿಕ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದ ಗೋವಿಂದಾಚಾರ್ಯರು ಉಪನಿಷತ್ತಿನ ಅಧ್ಯಾಯಗಳಿಗೆ ಟಿಪ್ಪಣಿ ಬರೆದಿದ್ದರು. 

ಬನ್ನಂಜೆ ಗೋವಿಂದಾಚಾರ್ಯರ ಸಂಸ್ಕೃತ ಅನುವಾದ

ಬಾಣಭಟ್ಟನ ಕಾದಂಬರಿ,
ಕಾಳೀದಾಸನ ಶಾಕುಂತಲಾ,
ಶೂದ್ರಕನ  ಮೃಚ್ಛಕಟಿಕ

ಟಿಪ್ಪಣಿಗಳು

ಶ್ರೀ ಶ್ರೀ ತ್ರಿವಿಕ್ರಮಾಚಾರ್ಯದಾಸರ ಆನ೦ದಮಾಲ
ತ್ರಿವಿಕ್ರಮ ಪ೦ಡಿತರ ವಾಯುಸ್ತುತಿ
ವಿಷ್ಣುಸ್ತುತಿ  

ಮಧ್ವಾಚಾರ್ಯರ ಮಹಾಭಾರತದ ತಾತ್ಪರ್ಯದ ಟೀಕಾ ಕೃತಿಯಾದ ಯಮಕ ಭಾರತ’ ಕೃತಿಗೆ ಟಿಪ್ಪಣಿಯನ್ನು ಬರೆದಿದ್ದಾರೆ.
ಭಾಗವತ ತಾತ್ಪರ್ಯ ಕೃತಿಗೂ ಟಿಪ್ಪಣಿ ಬರೆದಿದ್ದಾರೆ.  

ಅನುವಾದ

ಪುರುಷಸೂಕ್ತ,
ಶ್ರೀ ಮದ್ಭಗವದ್ಗೀತೆ
ಶ್ರೀ ಸೂಕ್ತ 
ಶಿವಸೂಕ್ತ
ನರಸಿಂಹ ಸ್ತುತಿ
ತಂತ್ರಸಾರ ಸಂಗ್ರಹ ಇತ್ಯಾದಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಮಧ್ವಾಚಾರ್ಯರ ಮಾಧ್ವರಾಮಾಯಣ ರಾಜರಾಜೇಶ್ವರಿ ಯತಿಗಳ ಮಂಗಲಾಷ್ಟಕ ಇತ್ಯಾದಿ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

  ಬನ್ನಂಜೆ ಗೋವಿಂದಾಚಾರ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ   ಸಂತಾಪ  

ವೇದ, ಪುರಾಣಗಳ ಕುರಿತ ಅವರ ಪ್ರವಚನಗಳು, ಕೃತಿಗಳು ಹಾಗೂ ಅಸಂಖ್ಯ ಬರಹಗಳು ಧಾರ್ಮಿಕ ಪ್ರಜ್ಞೆಯನ್ನು ಜಾಗೃತ ಗೊಳಿಸುವಂತಿದ್ದವು... 

ಅವರ ನಿಧನದಿಂದ ಸಾರಸ್ವತ ಲೋಕದ ಅಗಾಧ ಪ್ರತಿಭೆ ಯೊಂದನ್ನು ಕಳೆದುಕೊಂಡಂತಾಗಿದೆ.

ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಯನ್ನು ಕರುಣಿಸಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರು ಹಾಗೂ ಅಸಂಖ್ಯ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸು ವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ...

click me!