ಮೈಸೂರು: ಸಂಕ್ರಾಂತಿ ಹಬ್ಬಕ್ಕೆ ಖರೀದಿ ಭರಾಟೆ..!

By Suvarna News  |  First Published Jan 15, 2020, 8:11 AM IST

ಮೈಸೂರಿನಲ್ಲಿ ಸಂಕ್ರಾಂತಿ ಹಬ್ಬರ ಖರೀದಿ ಭರಾಟೆ ಜೋರಾಗಿದೆ. ಹಬ್ಬದ ದಿನವೇ ಖರೀದಿಯೂ ಜೋರಾಗಿದ್ದು, ಹೂ, ಹಣ್ಣು ದುಬಾರಿಯಾಗಿದೆ.


ಮೈಸೂರು(ಜ.15): ಮೈಸೂರಿನಲ್ಲಿ ಸಂಕ್ರಾಂತಿ ಹಬ್ಬರ ಖರೀದಿ ಭರಾಟೆ ಜೋರಾಗಿದೆ. ಹಬ್ಬದ ದಿನವೇ ಖರೀದಿಯೂ ಜೋರಾಗಿದ್ದು, ಹೂ, ಹಣ್ಣು ದುಬಾರಿಯಾಗಿದೆ. ಮೈಸೂರು ಸುಗ್ಗಿ ಹಬ್ಬದ ಗುಂಗಿನಲ್ಲಿದ್ದು, ಸಂಕ್ರಾಂತಿ ಹಬ್ಬಕ್ಕೆ ಖರೀದಿ ಜೋರಾಗಿ ನಡೆಯುತ್ತಿದೆ.

ಹಬ್ಬದ ಪ್ರಮುಖ ಆಕರ್ಷಣೆ ಕಬ್ಬು ಹಾಗೂ ಎಳ್ಳು ಬೆಲ್ಲಕ್ಕೆ ಬೇಡಿಕೆ ಹೆಚ್ಚಾಗಿದೆ. ಸಂಕ್ರಾಂತಿ ಸಂಭ್ರಮಕ್ಕೆ ಭಾರವಾದ ಹೂ, ಹಣ್ಣುಗಳು ದುಬಾರಿಯಾಗಿದೆ. ದುಬಾರಿ ಬೆಲೆ ಇದ್ದರೂ ಹಬ್ಬದ ಪ್ರಯುಕ್ತ ಜನ ಉತ್ಸಾಹದಲ್ಲಿ ಖರೀದಿ ನಡೆಸಿದ್ದಾರೆ.

Tap to resize

Latest Videos

ಚುಕುಬುಕು ರೈಲಿನಲ್ಲೇ ಕುಳಿತು ಪಾಠ ಕೇಳಲಿದ್ದಾರೆ ಸರ್ಕಾರಿ ಶಾಲೆ ಮಕ್ಕಳು..!

ಮಲ್ಲಿಗೆ ಹೂ ಕೆಜಿ. 1000 ರೂಪಾಯಿ, ಮರ್ಲೆ ಹೂ ಕೆಜಿ. 800 ರೂಪಾಯಿ, ಕನಕಾಂಬರ ಕೆಜಿ 600 ರೂಪಾಯಿ, ಕಾಕಡ ಹೂ ಕೆಜಿ 500 ರೂಪಾಯಿ, ಮಾರು ಸೇವಂತಿಗೆ 60 ರೂಪಾಯಿ, ಚೆಂಡು ಹೂ ಕೆಜಿ 30 ರೂಪಾಯಿ, ದಾಳಿಂಬೆ 110 ರೂಪಾಯಿ, ಬಾಳೆಹಣ್ಣು ಕೆಜಿ 50 ರಿಂದ 80 ರೂಪಾಯಿ, ಕಬ್ಬಿನ ಗಣೆ, ಜೆಲ್ಲೆಗೆ 25 ರಿಂದ 30 ರೂಪಾಯಿ, ಸಿದ್ಧ ಎಳ್ಳು ಬೆಲ್ಲ, ಸಕ್ಕರೆ ಅಚ್ಚುಗಳ ಖರೀದಿಗೆ ಸಾರ್ವಜನಿಕರು ಮುಗಿ ಬಿದ್ದಿದ್ದಾರೆ. ಮೈಸೂರಿನ ದೇವರಾಜ ಮಾರುಕಟ್ಟೆ, ಅಗ್ರಹಾರ ಸೇರಿದಂತೆ ಹಲವೆಡೆ ಸುಗ್ಗಿ ವ್ಯಾಪಾರ ಅಬ್ಬರದಿಂದ ಸಾಗಿದೆ.

ನೋ ಹ್ಯುಮ್ಯಾನಿಟಿ: ‘ಫ್ರೀ ಕಾಶ್ಮೀರ’ ನಳಿನಿ ರಂಪಾಟ!

click me!