ಹಂಪಿ ಉತ್ಸವದಲ್ಲಿ ಕಾಟೇರನ ಭರ್ಜರಿ ಹವಾ: ಡಿ ಬಾಸ್ ಗುಂಗಿನಲ್ಲಿ ತೇಲಾಡಿದ ಅಭಿಮಾನಿಗಳು..!

Published : Feb 04, 2024, 03:00 AM IST
ಹಂಪಿ ಉತ್ಸವದಲ್ಲಿ ಕಾಟೇರನ ಭರ್ಜರಿ ಹವಾ: ಡಿ ಬಾಸ್ ಗುಂಗಿನಲ್ಲಿ ತೇಲಾಡಿದ ಅಭಿಮಾನಿಗಳು..!

ಸಾರಾಂಶ

2018ರಲ್ಲಿ ಹಂಪಿ ಉತ್ಸವಕ್ಕೆ ಆಗಮಿಸಿದ್ದೆ. ಇದೀಗ 2024 ರಲ್ಲಿ ಮೊತ್ತೊಮ್ಮೆ ಆಗಮಿಸಿರುವುದು ನನ್ನ ಸುದೈವ ಎಂದು ದರ್ಶನ ಹೇಳಿದರು. ಕನ್ನಡ ನಾಡಿನ ಚರಿತ್ರೆಯಲ್ಲಿ ಕೃಷ್ಣ ದೇವರಾಯ, ಸಂಗೊಳ್ಳಿ ರಾಯಣ್ಣ ಹಾಗೂ ಮದಕರಿ ನಾಯಕರ ಹೆಸರು ಎಂದಿಗೂ ಚಿರಸ್ಥಾಯಿಯಾಗಿದೆ. ಕೃಷ್ಣದೇವರಾಯರು ನಮ್ಮೆಲ್ಲರಿಗೂ ಪ್ರೇರಣೆ. ಅವರ ಕಾರಣದಿಂದಲೇ ಇಂದು ನಾವೆಲ್ಲರೂ ಹಂಪಿಯಲ್ಲಿ ಉತ್ಸವ ಆಚರಿಸುತ್ತಿದ್ದೇವೆ. ಕೃಷ್ಣದೇವರಾಯರ ಆತ್ಮ ನಮ್ಮೆಲ್ಲರೊಂದಿಗಿದೆ ಎಂದ ದರ್ಶನ್‌ 

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ವಿಜಯನಗರ(ಹಂಪಿ)(ಫೆ.04):  ಹಂಪಿ ಉತ್ಸವದ ವೇದಿಕೆಯಲ್ಲಿ ಕಾಟೇರನ ಸದ್ದು‌ ಜೋರಾಗಿತ್ತು.. ಡಿ ಬಾಸ್ ಘೋಷಣೆ ಮಧ್ಯೆ ಭರ್ಜರಿ ಎಂಟ್ರಿ ಕೊಟ್ಟ ನಟ ದರ್ಶನ್‌ ಎರಡನೇ ದಿನ ಹಂಪಿ ಉತ್ಸವದ ವೇದಿಕೆ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಒಂದು ಕಡೆ ಉದ್ಘಾಟನೆ ಮತ್ತೊಂದು ಕಡೆ ದರ್ಶನ್ ಅವರಿಗೆ ಹಂಪಿಯ ಉಗ್ರ ನರಸಿಂಹನ ಸ್ಮರಣಿಕೆ ನೀಡುತ್ತಿದ್ದರೆ, ಮತ್ತೊಂದು ಕಡೆ ಉತ್ಸವಕ್ಕೆ ಬಂದ ಜನಸ್ತೋಮ ದರ್ಶನ್ ನೋಡಿ 'ಡಿ ಬಾಸ್' ಡಿ ಬಾಸ್ ಎಂದು ಕೂಗಿ ಸಂತಸ ವ್ಯಕ್ತಪಡಿಸಿದರು. 

ಹಂಪಿ‌ ಉತ್ಸವದ ಮೆಲುಕು ಹಾಕಿದ ದರ್ಶನ್

2018ರಲ್ಲಿ ಹಂಪಿ ಉತ್ಸವಕ್ಕೆ ಆಗಮಿಸಿದ್ದೆ. ಇದೀಗ 2024 ರಲ್ಲಿ ಮೊತ್ತೊಮ್ಮೆ ಆಗಮಿಸಿರುವುದು ನನ್ನ ಸುದೈವ ಎಂದು ದರ್ಶನ ಹೇಳಿದರು. ಕನ್ನಡ ನಾಡಿನ ಚರಿತ್ರೆಯಲ್ಲಿ ಕೃಷ್ಣ ದೇವರಾಯ, ಸಂಗೊಳ್ಳಿ ರಾಯಣ್ಣ ಹಾಗೂ ಮದಕರಿ ನಾಯಕರ ಹೆಸರು ಎಂದಿಗೂ ಚಿರಸ್ಥಾಯಿಯಾಗಿದೆ. ಕೃಷ್ಣದೇವರಾಯರು ನಮ್ಮೆಲ್ಲರಿಗೂ ಪ್ರೇರಣೆ. ಅವರ ಕಾರಣದಿಂದಲೇ ಇಂದು ನಾವೆಲ್ಲರೂ ಹಂಪಿಯಲ್ಲಿ ಉತ್ಸವ ಆಚರಿಸುತ್ತಿದ್ದೇವೆ. ಕೃಷ್ಣದೇವರಾಯರ ಆತ್ಮ ನಮ್ಮೆಲ್ಲರೊಂದಿಗಿದೆ ಎಂದರು. ಸಚಿವ ಜಮೀರ್ ಅಹ್ಮದ್ ಒಳ್ಳೆಯ ವ್ಯಕ್ತಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಬಡವರಿಗೆ ನೆರವು ನೀಡಿದ್ದಾರೆ. ಬಡ ಮಕ್ಕಳ ಶಿಕ್ಷಣ ಸಹಾಯ ಒದಗಿಸಿದ್ದಾರೆ. ಅವರ ಮೇಲಿನ ಅಭಿಮಾನದಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಮೈಸೂರಿನ ದಸರಾ ಮಾದರಿಯಲ್ಲಿ ಹಂಪಿ ಉತ್ಸವವು ಜನ ಮನ ಸೂರೆಗೊಂಡಿದೆ. ಇದೇ ಮಾದರಿಯಲ್ಲಿ ಉತ್ತರ ಕರ್ನಾಟಕ ಭಾಗದ ಉತ್ಸವಗಳು ಪ್ರಸಿದ್ಧಿ ಗಳಿಸಲಿ ಎಂದರು. 

ಹಂಪಿ ಉತ್ಸವದಲ್ಲಿ ಡಾನ್ಸ್ ಮಾಡ್ತಾರೆ 'ಶೇಕ್ ಇಟ್ ಪುಷ್ಪಾವತಿ' ನಟಿ ನಿಮಿಕಾ ರತ್ನಾಕರ್..!

ಸಿನಿಮಾ ಡೈಲಾಗ್ ಹೊಡೆದು ರಂಜಿಸಿದ ದರ್ಶನ್

ಎತ್ತಿದ್ರೆ ಗದೆ ಬಿದ್ರೇ ಒದೆ ಎಂದು ಸಿನಿಮಾ ಡೈಲಾಗ್ ಹೇಳಿದ ದರ್ಶನ್ , ಮಂಚು ಎರಡು ಬಾರಿ ಕೆಂಪಾಗ್ತದೆ ಒಮ್ಮೆ ಬೆಂಕಿಲಿ‌ ಬೆಂದಾಗ  ಇನ್ನೊಮ್ಮೆ.. ... ...  ಎಂದು ಎನ್ನುವ ಮೂಲಕ ಎಂದು ಕಾಟೇರಾ ಸಿನಿಮಾ ಡೈಲಾಗ್ ಹೊಡೆದು ಜನರನ್ನು ರಂಜಿಸಿದ್ರು. ನಂತರ ದೊಡ್ಡದೊಂದು ಹಾರ ಹಾಕುವ ಮೂಲಕ‌ ಬಿಳ್ಕೊಡಿಗೆ  ನೀಡಲಾಯ್ತು.

ದರ್ಶನ ಹಾಡಿ ಹೊಗಳಿದ ಜಮೀರ್

ದರ್ಶನ್ ಗೂ ಮೊದಲು ವೇದಿಕೆಯಲ್ಲಿ ಮಾತನಾಡಿದ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ವಿಜಯನಗರ ಜಿಲ್ಲಾ ಉಸ್ತುವಾರಿ ವಹಿಸಿಕೊಂಡು ಹಂಪಿ ಉತ್ಸವ ಆಯೋಜಿಸುವ ಸದಾವಕಾಶ ದೊರಕಿದೆ. ಇದರಿಂದ ಸಂತೋಷ ಹಾಗೂ ಖುಷಿ ಆಗುತ್ತಿದೆ ಎಂದರು.

ಇನ್ನೂ ಡಿ ಬಾಸ್ ಬಂದಿದ್ದಕ್ಕೆ ನನಗೆ ಹೆಚ್ವು ಖುಷಿಯಾಯ್ತು. ದರ್ಶನ ಫ್ರೆಂಡ್ ಶಿಪ್ ಅಂದರೆ ಪ್ರಾಣ ಕೊಡದಕ್ಕೂ ಸಿದ್ದ ಎಂದರು. ಕಾಟೇರ ಸಿನಿಮಾ ಯಾರು ನೋಡಿಲ್ಲ ನೋಡಿ ನಾನು ಮಂತ್ರಿಯಾಗಿ  ಟಾಕೀಸ್ ಗೆ ಹೋಗಿ ಸಿನಿಮಾ ನೋಡಿದ್ದೇನೆ, ಅಷ್ಟು ಅದ್ಬುತವಾಗಿದೆ. ಕಾಟೇರಾ ಸಿನಿಮಾ ಕಥೆ ಬರೆದ ಜಡೇಶ್ ಅವರು ಬಾಳ ಬಡವರು ನಮ್ಮ ಜಿಲ್ಲೆಯ ಕಂಪ್ಲಿ ತಾಲೂಕಿನವರು.ಡಿ ಬಾಸ್ ಈ ಕಾರ್ಯಕ್ರಮ ಕ್ಕೆ ಆಗಮಿಸಿದ ಋಣನಾ ಒಂದು ದಿನ ತೀರುಸುವೆ ಬಾಸ್ ಎಂದರು.

ಇಡೀ ಹಂಪಿ ಹೆಲಿಕಾಫ್ಟರ್‌ನಲ್ಲಿ ಸುತ್ತಬಹುದೀಗ ; ಬೆಲೆ ಎಷ್ಟು ಇಲ್ಲಿದೆ ನೋಡಿ!

ಜಮೀರ್ ಡೈಲಾಗ್ ಟ್ರೋಲ್

ವೇದಿಕೆಗೆ ದರ್ಶನ್ ಬರೋದು ತಡವಾಗ್ತಿದ್ದಂತೆ ನಿರೂಪಕರು ಟೈ ತಳ್ಳುವ ಕೆಲಸ ಮಾಡಿದರು. 

ಜಮೀರ್ ಅವರ ಟ್ರೊಲ್ ಡೈಲಾಗ್ 

ಕಂಗ್ರಾಚುಲೇಷನ್ ಮತ್ತು ಅಬ್ಬಬ್ಬ ಲಾಟರಿ ಹೊಡೆದ್ರಿ‌ ಬ್ರದರ್..ಎಂದು ಹೇಳಿದ ನಿರೂಪಕರು ಜನರನ್ನು ರಂಜಿಸಿದ್ರು.  ಬಳಿಕ ನಿರೂಪಕ ಒತ್ತಾಯಕ್ಕೆ  ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟುಬೇಕು ಎನ್ನುವ ಹಾಡು ಹಾಡಿದರು. 

PREV
click me!

Recommended Stories

ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ!
ದತ್ತಪೀಠ ವಿಚಾರದಲ್ಲಿ ರಾಜ್ಯ ಸರ್ಕಾರ ನ್ಯಾಯ ಒದಗಿಸಲಿ: ಸಿ.ಟಿ.ರವಿ ಆಗ್ರಹ