ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ನಡವಳಿಕೆಯಿಂದ ಬೇಸತ್ತು ಹಾಗೂ ಜೆಡಿಎಸ್ ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಜೆಡಿಎಸ್ ಪಕ್ಷಕ್ಕೆ ಸೇರುತ್ತಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ತಾಲೂಕು ಅಧ್ಯಕ್ಷರಾಗಿದ್ದ ಸಲೀಂ ಪಾಷಾ ತಿಳಿಸಿದರು.
ಗುಬ್ಬಿ : ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ನಡವಳಿಕೆಯಿಂದ ಬೇಸತ್ತು ಹಾಗೂ ಜೆಡಿಎಸ್ ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಜೆಡಿಎಸ್ ಪಕ್ಷಕ್ಕೆ ಸೇರುತ್ತಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ತಾಲೂಕು ಅಧ್ಯಕ್ಷರಾಗಿದ್ದ ಸಲೀಂ ಪಾಷಾ ತಿಳಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡ ಸಲೀಂಪಾಷಾ ಜೆಡಿಎಸ್ ಸೇರ್ಪಡೆಯಾಗಿ ಮಾತನಾಡಿದರು. ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಚುನಾವಣೆಯಲ್ಲಿ 20 ವರ್ಷದಿಂದ ಆಡಳಿತ ಮಾಡಿರುವ ಶಾಸಕರು ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿರುವುದರಿಂದ ಅಭಿವೃದ್ಧಿಯನ್ನೇ ಮಾಡದ ಶಾಸಕರ ಪರವಾಗಿ ದುಡಿಯಲು ಮನಸ್ಸಿಲ್ಲ. ಜೆಡಿಎಸ್ ಪಕ್ಷವು ಮುಸ್ಲಿಮರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದು ಕಾಂಗ್ರೆಸ್‌ನಲ್ಲಿ ಯಾವುದೇ ಅಧಿಕಾರವನ್ನು ಮುಸ್ಲಿಮರಿಗೆ ನೀಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕಾಗಿ ಕಿತ್ತಾಟವಿದೆ ಬಿಟ್ಟರೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ. ಇದುವರೆಗೂ ಮುಸ್ಲಿಮರಿಗೆ ಯಾವುದೇ ಅಧಿಕಾರ ಕೊಡದೆ ಕೇವಲ ವೋಟ್ ಬ್ಯಾಂಕ್ ಮಾಡಿದ್ದಾರೆ. ಆದರೆ ಜೆಡಿಎಸ್ ಪಕ್ಷವು ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಒಲವು ತೋರಿ ಅವರ ಪರವಾಗಿ ನಿಂತಿದೆ ಎಂದು ತಿಳಿಸಿದರು.
ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಮಾತನಾಡಿ, 20 ವರ್ಷದಿಂದ ಅಧಿಕಾರ ಮಾಡಿರುವ ಶಾಸಕರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅಭಿವೃದ್ಧಿ ಮಾಡಿದ್ದರೆ ಕುಕ್ಕರ್ ಕೊಡುವ ಅವಶ್ಯಕತೆ ಇರಲಿಲ್ಲ. ತಾಲೂಕಿನಲ್ಲಿ ಎಲ್ಲೇ ಹೋದರು ಸಹ ಸಮಸ್ಯೆಗಳ ಸರಮಾಲೆ ಎಂದು ಕಾಣುತ್ತಿದೆ. ಹಾಗಾಗಿ ಮುಂದಿನ ತಿಂಗಳಿನಲ್ಲಿ ಅತ್ಯಧಿಕ ಮುಖಂಡರು, ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದು ತಿಳಿಸಿದರು.
ಕಾಂಗ್ರೆಸ್‌ನಿಂದ ಬೆಂಗ್ಳೂರು ಹಾಳು: ಸಿಎಂ ಬೊಮ್ಮಾಯಿ
ಇದೇ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಚಿಕ್ಕವೀರಯ್ಯ, ಜೆಡಿಎಸ್ ಮುಖಂಡ ವಿಜಯ್ ಕುಮಾರ್, ಡಿ.ರಘು ಲಕ್ಷ್ಮೀಕಾಂತ, ರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.
ಬೇರೆ ಪಕ್ಷ ನಾಯಕರಿಗೆ ಗಾಳ ಹಾಕಲ್ಲ
ಬಾಗಲಕೋಟೆ (ಜ.24): ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಂತೆ ಬೇರೆ ಪಕ್ಷಗಳ ನಾಯಕರಿಗೆ ನಾವು ಗಾಳ ಹಾಕುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಆಡಗಲ್ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಜೆಡಿಎಸ್ ಈಗಾಗಲೇ 93 ಜನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಇನ್ನೂ ಈ ಕೆಲಸ ಸಾಧ್ಯವಾಗಿಲ್ಲ ಎಂದರು. ಮುಂದಿನ 15 ದಿನಗಳಲ್ಲಿ ಇನ್ನೂ 50 ರಿಂದ 60 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಲಾಗುವುದು ಎಂದರು, ಚುನಾವಣೆಗೆ ಮುನ್ನ ಗಾಳ ಹಾಕಿ ಕರೆತರಲು ಅಮಿತ್ ಶಾ ಸೂಚಿಸಿದ್ದಾರಂತೆ. ಆಪರೇಷನ್ ದಿಂದ ನನಗೆ ಯಾವುದೇ ಸಮಸ್ಯೆ ಇಲ್ಲ.ಯಾರೇ ಹೋದರೂ ತಲೆಕೆಡಿಸಿಕೊಳ್ಳೋದಿಲ್ಲ.ಕಾಲ ಪ್ರತಿಯೊಂದಕ್ಕೂ ಉತ್ತರ ಕೊಡುತ್ತದೆ ಎಂದು ಹೇಳಿದರು.
ಭವಾನಿ ರೇವಣ್ಣಗೆ ಟಿಕೆಟ್ ಪಕ್ಷದಲ್ಲಿ ಚರ್ಚಿಸಿ ತೀರ್ಮಾನ:
ಭವಾನಿ ರೇವಣ್ಣ ಹಾಸನದಿಂದ ಸ್ಪರ್ಧೆ ಮಾಡುವ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು ಸ್ಪರ್ಧೆ ಮಾಡೋ ಆಸೆ ಇದೆ, ಇರೋದು ತಪ್ಪಾ ಎಂದರಲ್ಲದೆ, ಈ ದೇಶದ ವ್ಯವಸ್ಥೆಯಲ್ಲಿ ಚುನಾವಣೆಗೆ ನಿಲ್ಲುವ ಹಕ್ಕು ಎಲ್ಲರಿಗೂ ಇದೆ, ಆದರೆ ಭವಿಷ್ಯದಲ್ಲಿ ರಾಜ್ಯದ ಜನತೆಗೆ ನೀಡುವ ಸಂದೇಶ ಮತ್ತು ಪಕ್ಷ ಸಂಘಟನೆ ದೃಷ್ಟಿಯಿಂದ ಅದನ್ನು ಪಕ್ಷದಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.
ರಾಷ್ಟ್ರೀಯ ಪಕ್ಷಗಳು ಸೋತೆತ್ತಿನ ಬಾಲ ಹಿಡಿದು ಬಂದವರು:
ಸಿಎಂ ಇದ್ದಾಗ ಕುಮಾರಸ್ವಾಮಿ ಪಂಚರತ್ನ ಯಾಕೆ ಮಾಡಲಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಎಚ್ಡಿಕೆ, ಜೆಡಿಎಸ್ ಪಕ್ಷ ಗೆದ್ದೆತ್ತಿನ ಬಾಲ ಹಿಡಿಯೋರು ಅಂತಾ ಅವರೇ ಹೇಳಿದ್ದಾರೆ. ನಾನು ಗೆದ್ದೆತ್ತಿನ ಬಾಲ ಹಿಡಿದಿಲ್ಲ, ಎರಡೂ ರಾಷ್ಟ್ರೀಯ ಪಕ್ಷಗಳು ಸೋತೆತ್ತಿನ ಬಾಲ ಹಿಡಿದು ಬಂದವರು ಎಂದು ವಾಗ್ದಾಳಿ ನಡೆಸಿದರು. ಸಚಿವ ಗೋವಿಂದ ಕಾರಜೋಳ ಕೈ ಮುಗಿದು ದೇವೇಗೌಡರ ಬಳಿ ಸರ್ಕಾರ ಮಾಡೋಣ ಅಂತಾ ದುಂಬಾಲು ಬಿದ್ದರು. ನಾನು ಯಾರ ದುಂಬಾಲು ಬಿದ್ದಿಲ್ಲ. ಆಗ ಎಂಪಿ ಪ್ರಕಾಶ್ ಅವರಿಗೆ ಸಿಎಂ ಆಗೋಕೆ ಹೇಳಿದ್ದೆ, ಆದರೆ ಅವರು ಒಪ್ಪಲಿಲ್ಲ ಎಂದರು. 2013 ರಲ್ಲಿ ನೀವೆ ಸರ್ಕಾರ ಮಾಡಿದಿರಿ, ಆಗ ಸುವರ್ಣ ಗ್ರಾಮ ಕಿತ್ತು ಹಾಕಿದಿರಿ ಎಂದು ದೂರಿದರು.
ASSEMBLY ELECTION: ಬಿಜೆಪಿ ಆಪರೇಷನ್‌ಗೆ ಯಾರೇ ಹೋದರೂ ಜೆಡಿಎಸ್‌ಗೆ ಸಮಸ್ಯೆಯಿಲ್ಲ: ಕುಮಾರಸ್ವಾಮಿ
ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಇದ್ದಾಗ ನನ್ನನ್ನು ಗುಮಾಸ್ತನಂತೆ ನೋಡಿಕೊಂಡರು. ಹಿಂದೆ ನೀವೇಕೆ ಪಂಚರತ್ನ ಯಾತ್ರೆ ಯಾಕೆ ಮಾಡಲಿಲ್ಲ ಅಂತಾ ಹೇಳ್ತಾರೆ, ಯಾವ ಅನ್ ಡಿಕಂಡಿಷನ್ ಸಪೋರ್ಟ್ ಇತ್ತು ಇವರದ್ದು. ನೀವೇ ಸಿಎಂ ಆಗಬೇಕು ಅಂತಾ ಅಂದಿದ್ದಿರಲ್ಲ, ಇನ್ನೂ ಬದುಕಿದ್ದೀರಿ ಎಲ್ಲರೂ ನಿಜ ಹೇಳಿ ಎಂದರು. ನಾಚಿಕೆ ಆಗಲ್ವ ಸುಳ್ಳು ಹೇಳೋಕೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸಿಎಂ ಇದ್ದಾಗ ನನ್ನನ್ನು ಗುಮಾಸ್ತನಂತೆ ಮಾಡಿದರು. ನಾನವಾಗ ವಿಷಕಂಠನಂತೆ ಇದ್ದೆ. ಇಲಾಖೆಗಳ ರಿವೀವ್ ಮಾಡೋ ಹಾಗಿರಲಿಲ್ಲ ಎನ್ನುವ ಸತ್ಯ ಬಿಚ್ಚಿಟ್ಟರು.