Udupi: ಕೊಲ್ಲೂರು ದೇವಸ್ಥಾನದಲ್ಲಿ ಸಲಾಂ ಮಂಗಳಾರತಿ ರದ್ದು

By Sathish Kumar KH  |  First Published Dec 12, 2022, 6:36 PM IST

ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳಲ್ಲಿ ಸಲಾಂ ಮಂಗಳಾರತಿ ರದ್ದು ಮಾಡಿರುವುದನ್ನು ಕೊಲ್ಲೂರು ದೇವಳದ ಅರ್ಚಕರು ಸ್ವಾಗತಿಸಿದ್ದಾರೆ.


ಉಡುಪಿ (ಡಿ.12): ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳಲ್ಲಿ ಸಲಾಂ ಮಂಗಳಾರತಿ ರದ್ದು ಮಾಡಿರುವುದನ್ನು ಕೊಲ್ಲೂರು ದೇವಳದ ಅರ್ಚಕರು ಸ್ವಾಗತಿಸಿದ್ದಾರೆ. ಇತ್ತೀಚಿಗಷ್ಟೇ ಈ ಕುರಿತು ಸಭೆ ನಡೆಸಿದ್ದ ಧಾರ್ಮಿಕ ಪರಿಷತ್ ಇಲಾಖೆಗೆ ಒಳಪಟ್ಟ ರಾಜ್ಯದ ಯಾವುದೇ ದೇವಸ್ಥಾನಗಳಲ್ಲಿ, ಸಲಾಂ ಮಂಗಳಾರತಿ ಇರುವುದಿಲ್ಲ ಎಂದು ಹೇಳಿಕೆ ನೀಡಿದ್ದರು. 

ಟಿಪ್ಪು ಕಾಲದಿಂದ ಈ ಪೂಜಾ ಸಂಸ್ಕೃತಿ ನಡೆದು ಬಂದಿದೆ ಎಂದು ಹೇಳಲಾಗುತ್ತಿದ್ದು, ವಿದಾಯ ಹೇಳಲು ಧಾರ್ಮಿಕ ಪರಿಷತ್ತು ತೀರ್ಮಾನಿಸಿತ್ತು. ಕೊಲ್ಲೂರು ದೇವಾಲಯ ಸೇರಿದಂತೆ ಎಲ್ಲಾ ದೇವಾಲಯಗಳಲ್ಲಿ ಸಲಾಂ ಹೆಸರಿನ ಮಂಗಳಾರತಿ ರದ್ದು, ಮಾಡಬಹುದಾಗಿ ಪರಿಷತ್ತು ತಿಳಿಸಿತ್ತು.

Tap to resize

Latest Videos

undefined

ಸರ್ಕಾರದ ಆದೇಶವನ್ನು ಸ್ವಾಗತಿಸಿದ ಕೊಲ್ಲೂರು ದೇವಳ ಅರ್ಚಕ  ಸುಬ್ರಮಣ್ಯ ಅಡಿಗ, ಧಾರ್ಮಿಕ ಪರಿಷತ್ತು ತೆಗೆದುಕೊಂಡ ನಿರ್ಧಾರ ಅತ್ಯಂತ ಸ್ವಾಗತಾರ್ಹ ಎಂದಿದ್ದಾರೆ. ಕೊಲ್ಲೂರು ದೇವಸ್ಥಾನದಲ್ಲಿ ಸಲಾಂ ಮಂಗಳಾರತಿ ಎಂಬ ಪದ್ಧತಿ ನಾವು ನಡೆಸಿಲ್ಲ.ನಾವು ದೇವಸ್ಥಾನದಲ್ಲಿ ತ್ವರಿತ ಮಂಗಳಾರತಿ ಮಾಡುತ್ತಿದ್ದೆವು. ಜನರು ಇದನ್ನೇ ಆಡುಭಾಷೆಯಲ್ಲಿ ಸಲಾಂ ಎಂಬ ಹೆಸರಲ್ಲಿ ಕರೆಯುತ್ತಿದ್ದರು. ಜನರು ವಾಡಿಕೆಯಂತೆ ಕರೆಯುತ್ತಿದ್ದರೆ ವಿನಹ ಯಾವುದೇ ಆಚರಣೆ ಇರಲಿಲ್ಲ ಎಂದಿದ್ದಾರೆ. ಇನ್ನು ಮುಂದೆ ಸಂಧ್ಯಾರತಿ ಅಥವಾ ದೀವಟಿಕೆ ಮಂಗಳಾರತಿ ಇತ್ಯಾದಿ ಹೆಸರಿನಿಂದಲೇ ಸಂಭೋದಿಸಲು ಹೇಳಿದ್ದಾರೆ. ಜನರು ಕೂಡ ಈ ಬದಲಾವಣೆ ಗಮನಿಸಬೇಕು ಎಂದು ಮನವಿ ಮಾಡುತ್ತೇವೆ ಎಂದು ತಿಳಿಸಿದರು.

ದೇಗಲಗಳ ಸಲಾಂ ಆರತಿ ಹೆಸರು ಆರತಿ ನಮಸ್ಕಾರ ಎಂದು ಬದಲು: ಸಚಿವೆ ಶಶಿಕಲಾ ಜೊಲ್ಲೆ

ದೈನಿಕ ಪೂಜಾ ಕಾರ್ಯ ಅಬಾಧಿತ: ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ರೂಢಿಯಾಗಿ ಬಂದಿರುವ ದೀವಟಿಗೆ ಸಲಾಂ, ಸಲಾಂ ಆರತಿ ಹಾಗೂ ಸಲಾಂ ಮಂಗಳಾರತಿ ಎಂಬ ಪೂಜೆಗಳ ಹೆಸರನ್ನು ಸ್ಥಳೀಯ ಕನ್ನಡ ಭಾಷೆಗೆ ಬದಲಾಯಿಸಲು ನಿರ್ಧರಿಸಲಾಗಿದೆ. ಬದಲಾಗಿ ಈ ಪೂಜೆಗಳು ರದ್ದುಪಡಿಸುವ ಯಾವುದೇ ಚಿಂತನೆ ಇಲ್ಲ ಎಂದು ಮುಜುರಾಯಿ ಸಚಿವೆ ಶಶಿಕಲಾ ಜೊಲ್ಲೆ ಇತ್ತೀಚೆಗೆ ತಿಳಿಸಿದ್ದರು. ಕೊಲ್ಲೂರು, ಮೇಲುಕೋಟೆ, ಶೃಂಗೇರಿ, ಕುಕ್ಕೆ ಸುಬ್ರಮಣ್ಯ, ಪುತ್ತೂರು ಸೇರಿದಂತೆ ರಾಜ್ಯದ ಹಲವೆಡೆ ಶತಮಾನಗಳಿಂದ ನಡೆಸಿಕೊಂಡು ಬರಲಾಗಿದ್ದ ಸಲಾಂ ಹೆಸರಿನ ಪೂಜೆಗಳು ಟಿಪ್ಪು ಕಾಲದಲ್ಲಿ ಜಾರಿಯಾಗಿದ್ದು, ರಾಜ್ಯ ಸರ್ಕಾರದಿಂದ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿತ್ತು.

ಟಿಪ್ಪು ಕಾಲದ ಸಲಾಂ ಮಂಗಳಾರತಿ ಹೆಸರು ಬದಲು: ಧಾರ್ಮಿಕ ಪರಿಷತ್

ಧಾರ್ಮಿಕ ಪರಿಷತ್ತಿನೊಂದಿಗೆ ಚರ್ಚಿಸಿ ನಿರ್ಧಾರ: ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವೆ ಶಶಿಕಲಾ ಜೊಲ್ಲೆ, 'ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಕೆಲವು ದೇವಾಲಯಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ಸಂಧರ್ಭಗಳಲ್ಲಿ ದೀವಟಿಗೆ ಹಿಡಿದು ದೇವಾಲಯಕ್ಕೆ ಮತ್ತು ದೇವರಿಗೆ ಆರತಿಯಂತೆ ನಡೆಸುವ ಕಾರ್ಯಕ್ಕೆ ದೀವಟಿಗೆ ಸಲಾಂ, ಸಲಾಂ ಮಂಗಳಾರತಿ ಮತ್ತು ಸಲಾಂ ಆರತಿ ಎಂದು ಕೆಲವು ದೇವಾಲಯಗಳಲ್ಲಿ ಕರೆಯಲಾಗುತ್ತಿದೆ. ಇದನ್ನ ಬದಲಾಯಿಸಬೇಕು ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಕ್ತಾದಿಗಳಿಂದ ಸಾಕಷ್ಟುಒತ್ತಾಯ ಇರುವ ಬಗ್ಗೆ ಧಾರ್ಮಿಕ ಪರಿಷತ್ತಿನ ಸದಸ್ಯರು ಸಭೆಯ ಗಮನಕ್ಕೆ ತಂದರು. ಈ ಹಿನ್ನಲೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ವಿಸ್ತೃತ ಚರ್ಚೆಯನ್ನು ನಡೆಸಲಾಯಿತು. ಬೇರೆ ಭಾಷೆಯ ಪದಗಳನ್ನು ಬದಲಾಯಿಸಿ, ನಮ್ಮ ಭಾಷೆಯ ಪದವನ್ನು ಅಳವಡಿಸಿಲು ನಿರ್ಧರಿಸಲಾಯಿತು' ಎಂದು ಸ್ಪಷ್ಟಪಡಿಸಿದ್ದರು.

click me!