ಸಖಿ ಫೌಂಡೇಶನ್ ಮತ್ತು ಸೂರ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮಹಿಳೆಯರಿಗಾಗಿ ವಿವಿಧ ಮನರಂಜನಾ ಕಾರ್ಯಕ್ರಮಗಳು ಹಾಗೂ ಗೋಲ್ ಗೊಪ್ಪ ತಿನ್ನುವ ಸ್ಪರ್ಧೆಯನ್ನು ಅ. 18 ರಂದು ಏರ್ಪಡಿಸಿದೆ. ಅಂದು ಮಧ್ಯಾಹ್ನ 2.30 ರಿಂದ ಗೀತಾ ಆರ್ಸೀತಾ, ಪಕ್ಕಾ 420, ಬಿಂದಿ ಲಗಾವ್ ಬಲೂನ್ ಚಡಾವ್ ಹಾಗೂ ಗೋಲ್ಗೊಪ್ಪ ತಿನ್ನುವ ಸ್ಪರ್ಧೆ ನಡೆಯಲಿದೆ.
ಮೈಸೂರು : ಸಖಿ ಫೌಂಡೇಶನ್ ಮತ್ತು ಸೂರ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮಹಿಳೆಯರಿಗಾಗಿ ವಿವಿಧ ಮನರಂಜನಾ ಕಾರ್ಯಕ್ರಮಗಳು ಹಾಗೂ ಗೋಲ್ ಗೊಪ್ಪ ತಿನ್ನುವ ಸ್ಪರ್ಧೆಯನ್ನು ಅ. 18 ರಂದು ಏರ್ಪಡಿಸಿದೆ. ಅಂದು ಮಧ್ಯಾಹ್ನ 2.30 ರಿಂದ ಗೀತಾ ಆರ್ಸೀತಾ, ಪಕ್ಕಾ 420, ಬಿಂದಿ ಲಗಾವ್ ಬಲೂನ್ ಚಡಾವ್ ಹಾಗೂ ಗೋಲ್ಗೊಪ್ಪ ತಿನ್ನುವ ಸ್ಪರ್ಧೆ ನಡೆಯಲಿದೆ.
ಈ ಎಲ್ಲ ಆಟೋಟಗಳು ರಾಮಕೃಷ್ಣನಗರ ವೃತ್ತದ ಸಮೀಪವಿರುವ ಜಯಲಕ್ಷ್ಮೀದೇವಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಲಿದೆ. ಮಾಹಿತಿಗಾಗಿ ಹಾಗೂ ಹೆಸರು ನೋಂದಾಮಿಗಾಗಿ ಮೊ. 9964790442, 8310306882 ಸಂಪರ್ಕಿಸಬಹುದು.
undefined
ಅ.15 ರಿಂದ 23 ರವರೆಗೆ ಅರಮನೆ ಮುಂಭಾಗ ಸಾಂಸ್ಕೃತಿಕ ಕಾರ್ಯಕ್ರಮ
ಮೈಸೂರು : ದಸರಾ ಅಂಗವಾಗಿ ಸಾಂಸ್ಕೃತಿಕ ಉಪ ಸಮಿತಿ ವತಿಯಿಂದ ಅ.15 ರಿಂದ 23 ರವರೆಗೆ ಅರಮನೆ ಮುಂಭಾಗದ ವೇದಿಕೆ ಸೇರಿದಂತೆ ನಗರದೆಲ್ಲೆಡೆ 10 ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಕೆ.ಎಂ. ಗಾಯತ್ರಿ ತಿಳಿಸಿದರು.
ಮೈಸೂರುನ ಅರಮನೆ ಮಂಡಳಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.15ರ ಸಂಜೆ 6ಕ್ಕೆ ಅರಮನೆ ಮುಂಭಾಗದ ವೇದಿಕೆಯಲ್ಲಿ ದಸರಾ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಅರಮನೆ ವೇದಿಕೆ ಕಾರ್ಯಕ್ರಮದ ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು, ಈ ಬಾರಿ ಸಾಕಷ್ಟು ಅರ್ಜಿಗಳು ಬಂದಿರುವ ಕಾರಣ ಉತ್ತಮ ತಂಡಗಳನ್ನು ಆಯ್ಕೆ ಮಾಡಿ ಎರಡು ದಿನಗಳಲ್ಲಿ ಉಳಿದ ವೇದಿಕೆ ಕಾರ್ಯಕ್ರಮಗಳ ಕಲಾವಿದರ ಆಯ್ಕೆ ನಡೆಯಲಿದೆ ಎಂದರು.
ನಾಟಕಕ್ಕೆ 468, ಸಂಗೀತ 920, ಜನಪದ 340, ನೃತ್ಯ 692, ಹರಿಕಥೆ 18, ಸೋಬಾನೆ ಪದ 37, ವಾದ್ಯಸಂಗೀತ 265, ತೊಗಲುಗೊಂಬೆ 10, ಜಾದೂ 5, ನಿರೂಪಣೆ 48 ಸೇರಿದಂತೆ ಒಟ್ಟು 2803 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅವರು ತಿಳಿಸಿದರು.
252 ಕಲಾತಂಡಗಳಿಗೆ ಅವಕಾಶ
ನವರಾತ್ರಿಯವಲ್ಲಿ 9 ದಿನ ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ, ನಾದಬ್ರಹ್ಮಸಂಗೀತ ಸಭಾ, ಚಿಕ್ಕಗಡಿಯಾರ ಮತ್ತು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಆವರಣದಲ್ಲಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ನೃತ್ಯರೂಪಕ, ಭರತನಾಟ್ಯ, ಸುಗಮ ಸಂಗೀತ, ನಾದಸ್ವರ, ಸ್ಯಾಕ್ಸೋಫೋನ್, ವೀಣಾವಾದನ, ಸೋಬಾನೆ ಪದಗಳು, ಭಕ್ತಿಗೀತೆಗಳು, ಸಾಂಪ್ರದಾಯಿಕ ಗೀತೆಗಳು, ತತ್ತ್ವ ಪದಗಳು, ಹರಿಕಥೆ, ಜನಪದ ಗಾಯನ, ವಾದ್ಯ, ಸೂತ್ರ ಸಲಾಕೆ, ಗೊಂಬೆಯಾಟ, ಯಕ್ಷಗಾನ, ಗೊಂದಳಿ ಪದ, ಡೊಳ್ಳಿನ ಹಾಡು, ಕೋಲಾಟ, ಜಡೆ ಕೋಲಾಟ, ಚಿಟ್ಟಿಮೇಳ, ಕೊಡಗಿನ ಸುಗ್ಗಿ ಕುಣಿತ ಹಾಗೂ ಇತರೆ ಕಾರ್ಯಕ್ರಮಗಳು ಜರುಗಲಿವೆ. ಒಟ್ಟು 252 ಕಲಾತಂಡಗಳ ಸುಮಾರು 4000 ಹೆಚ್ಚು ಕಲಾವಿದರಿಗೆ ಅವಕಾಶ ದೊರೆಯಲಿದೆ ಎಂದು ಅವರು ವಿವರಿಸಿದರು.