ಬೆಂಗಳೂರಿನಲ್ಲಿ ಕಾಮುಕರಿಗೆ ಉಳಿಗಾಲವಿಲ್ಲ..ಇವು ಮಾಮೂಲಿ ಸಿಸಿ ಕ್ಯಾಮರಾ ಅಲ್ಲ!

By Web Desk  |  First Published Nov 27, 2019, 5:53 PM IST

ಮಹಿಳಾ ಪೀಡಕರ ಮೇಲೆ ಖಾಕಿಗಳ ಡಿಜಿಟಲ್ ಕಣ್ಣು../  ನಗರದಲ್ಲಿ ಫೇಸ್ ರೆಕಗ್ನೇಷನ್ ಸಿಸ್ಟೇಮ್ ಕ್ಯಾಮರಾ ಅಳವಡಿಕೆ../ ಕಿರಾತಕ ಡೀಟೈಲ್ಸ್ ಕೊಡಲಿವೆ ವಿಶೇಷ ಸಿಸಿಕ್ಯಾಮರಗಳು/ ಪೊಲೀಸರು ಕೂತಲ್ಲೆ ಪಡೆಯಲಿದ್ದಾರೆ ಅಪರಾಧಿಗಳ ಡಿಟೈಲ್ಸ್/ 1000ಕ್ಕೂ ಹೆಚ್ಚು ಫೇಸ್ ರೆಕಗ್ನೇಷನ್  ಕ್ಯಾಮರಾ/ ಪೊಲೀಸ್ ರೆಕಾರ್ಟ್ ನಲ್ಲಿ ಇದ್ದರೆ ಡೀಟೈಲ್ಸ್ ನೀಡಲಿವೆ ಸಿಸಿ ಕ್ಯಾಮರಾಗಳು/ ಬರೊಬ್ಬರಿ 619 ಕೋಟಿ ರೂ. ಅನುದಾನ/ ಸೇಫ್ ಸಿಟಿ ಪ್ರಾಜೇಕ್ಟ್ ಅಡಿ ಸಿಸಿಕ್ಯಾಮರಾ ಕ್ಯಾಮರಾ ಅಳವಡಿಕೆ


ಬೆಂಗಳೂರು (ನ 27)  ಮಹಿಳೆಯರ ಜತೆ ಅನುಚಿತವಾಗಿ ವರ್ತಿಸಿದರೆ ಕಿರಾತಕರು ಇನ್ನು ಕೆಲವೇ ನಿಮಷದಲ್ಲಿ ಕಂಬಿ ಹಿಂದೆ ಇರುತ್ತಾರೆ. ಬೆಂಗಳೂರು ಪೊಲೀಸರು ಅಂಥದ್ದೊಂದು ದಿಟ್ಟ ಕ್ರಮ ತೆಗೆದುಕೊಂಡಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರೂ ಇನ್ನುಂದೆ ಮಹಿಳೆಯರಿಗೆ ಪುಲ್ ಸೇಫ್. ಇದನ್ನ ನಾವು ಹೇಳ್ತಿರೋದಲ್ಲ, ಬೆಂಗಳೂರು ಪೊಲೀಸ್ ಹೇಳ್ತಾ ಇರೋದು. ಇದಕ್ಕಾಗಿ ಬೆಂಗಳೂರು ಪೊಲೀಸ್ರು ನಗರದಲ್ಲಿ ಡಿಜಿಟಲ್ ಕಣ್ಣುಗಳ ಮೂಲಕ ಕಿರಾತಕರ ಚಲನವಲಗಳ ಮೇಲೆ ನಿಗಾ ಇಟ್ಟಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ಅಡಿಯಲ್ಲಿ ಬೆಂಗಳೂರು ಸೇಫ್ ಸಿಟಿ ಪ್ರಾಜೆಕ್ಟ್ ಪ್ರಾರಂಭವಾಗಿದ್ದು, ಬರೋಬ್ಬರಿ 619 ಕೋಟಿ ರೂಪಾಯಿಯಲ್ಲಿ ನಗರದ ರಕ್ಷಣೆಗೆ ಪೊಲೀಸ್ ಇಲಾಖೆ ಮುಂದಾಗಿದೆ. ಈಗಾಗಲೇ ನಗರದಾದ್ಯಂತ 5000 ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳು ಕೆಲಸ ಮಾಡುತ್ತಿದ್ದು, ಅದಕ್ಕೆ ಮತ್ತೆ 7500 ಕ್ಯಾಮರಾಗಳ ಸೇರ್ಪಡೆಯಾಗುತ್ತಿದೆ.

Latest Videos

undefined

ಮಹಿಳೆಯರ ರಕ್ಷಣೆಗೆ ಹೆಚ್ಚಿನ ಆದ್ಯತೆ.!
ಈ ಪ್ರಾಜೆಕ್ಟ್ ನಲ್ಲಿ ಹೆಚ್ಚು ಮಹಿಳೆಯರ ರಕ್ಷಣೆಗೆ ಒತ್ತು ನೀಡಲಾಗಿದೆ. ಅದಕ್ಕಾಗಿ ಮಹಿಳಾ ಕಾಲೇಜ್ ಗಳು, ಮಹಿಳಾ ಹಾಸ್ಟೆಲ್, ಶಾಂಪಿಂಗ್ ಮಾಲ್, ಬಸ್ ಸ್ಟಾಪ್ ಗಳು ಸೇರಿದಂತೆ ನಗರದ ಎಲ್ಲೆಲ್ಲಿ ಮಹಿಳೆಯರು ಇರುತ್ತಾರೋ ಆ ಪ್ರದೇಶಗಳನ್ನು ಪತ್ತೆ ಮಾಡಿ ಮತ್ತು ಎಲ್ಲಿಗೆ ಕ್ಯಾಮೆರಾ ಬೇಕು ಎನ್ನುವುದನ್ನ ಪೊಲೀಸ್ ಲೀಸ್ಟ್ ಮಾಡಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಯಾವ ಪ್ರದೇಶಕ್ಕೆ ಯಾವ ಮಾದರಿ ಕ್ಯಾಮೆರಾ ಬೇಕು ಎನ್ನುವುದನ್ನು ಪ್ಲಾನ್ ಮಾಡಿ ಹಾಕಲಾಗುತ್ತಿದೆ.

ಆತ್ಯಾಧುನಿಕ ಕ್ಯಾಮರಾಗಳ ಬಳಕೆ.!

ಇನ್ನೂ ಈ ಬಾರಿ ಆತ್ಯಾಧುನಿಕ ತಂತ್ರಜ್ಞಾನವಿರುವ ಕ್ಯಾಮರಾಗಳನ್ನು ನಗರದದ್ಯಾಂತ ಹಾಕಲಾಗುತ್ತಿದೆ. 4000 ಸಾವಿರ ಫೀಕ್ಸೆಡ್ ಕ್ಯಾಮೆರಾ, ಪಿಟಿಜೆಡ್ ಕ್ಯಾಮೆರಾ 1500, ಎಎನ್​ಪಿಆರ್ ಕ್ಯಾಮೆರಾ 1000, ಎಫ್ಆರ್​ಎಸ್ ಕ್ಯಾಮೆರಾ 1000 ಬಳಕೆ ಮಾಡಲಾಗುತ್ತಿದೆ. ಇವುಗಳಲ್ಲಿ ಟಿಲ್ಟ್, ಜೂಮ್, ಪ್ಯಾನ್ ಹಾಗೂ ಕತ್ತಲಲ್ಲೂ ದೃಶ್ಯಗಳನ್ನು ಸೆರೆಹಿಡಿಯುವ ತಂತ್ರಜ್ಞಾನವನ್ನು ಬಳಸಲಾಗಿದೆ.

ಅಂಕಲ್ ಜತೆಯೇ ಬೆಸ್ಟ್‌ಕ್ಲಬ್ಬಿನಲ್ಲಿ ಒಂದಾಗಿದ್ದಳು, ಕೊಲೆಗೆ ಭರ್ಜರಿ ಪ್ಲ್ಯಾನ್ ಸಿದ್ಧಮಾಡಿದ್ಳು!
 

ಫೇಸ್ ಮ್ಯಾಚಿಂಗ್ ಮೂಲಕ ಆರೋಪಿಗಳ ಮೇಲೆ ನಿಗಾ.

ಇನ್ನೂ ಇದರಲ್ಲಿ ವಿಶೇಷ ಅಂದ್ರೆ FRS ಕ್ಯಾಮೆರಾದಲ್ಲಿ ನಗರದ ಎಲ್ಲಾ ರೌಡಿಗಳು, ಎಂಓಬಿಗಳು, ಕುಖ್ಯಾತ ಆರೋಪಿಗಳನ್ನು ಪೊಲೀಸರು ಕುಳಿತಲ್ಲೇ ಪತ್ತೆ ಮಾಡುವ ತಂತ್ರಜ್ಞಾನವನ್ನು ಬಳಕೆ ಮಾಡಿದ್ದಾರೆ. ಇದರ ಪ್ರಕಾರ ಪೊಲೀಸರು ತಮ್ಮ ಬಳಿ ಇರುವ ಆರೋಪಿಗಳ ಡಾಟಾವನ್ನು ಸರ್ವರ್ ಮೂಲಕ ಈ ಕ್ಯಾಮೆರಾದಲ್ಲಿ ಮಾನಿಟರಿಂಗ್ ಮಾಡುತ್ತಾರೆ. ಪ್ರತಿ ವ್ಯಕ್ತಿಯ ಮುಖದ 300 ಪಾಯಿಂಟ್ಸ್ ಆಧಾರದ ಮೇಲೆ ಡಾಟಾ ಕಲೆಕ್ಟ್ ಮಾಡಿರುತ್ತಾರೆ. ಆದರ ಪ್ರಕಾರ ಆ ವ್ಯಕ್ತಿ ನಗರದ ಯಾವ ಮೂಲೆಯಲ್ಲಿ ಓಡಾಡಿದ್ರೂ ಆತ ಎಲ್ಲಿದ್ದಾನೆ ಎನ್ನುವುದು ಪೊಲೀಸರಿಗೆ ಕುಳಿತಲ್ಲೆ ಸಿಕ್ಕಿ ಬಿಡುತ್ತೆ. ಇದಕ್ಕಾಗಿ ಪೊಲೀಸರು ಮನೆಗಳ್ಳರು, ರೌಡಿಗಳು, ಕಾಮುಕರು, ಪೋಲಿಗಳು ಸೇರಿ ಎಲ್ಲಾ ಕಿರಾತಕರ ಡಾಟಾವನ್ನು ಈಗಾಗಲೇ ಕಲೇಕ್ಟ್ ಮಾಡಿದ್ದಾರೆ.

ಎಎನ್​ಪಿಆರ್ ಕ್ಯಾಮರಾ ಮೂಲಕ ಆರೋಪಿಗಳ ಓಡಾಟ ಪತ್ತೆ.!

ಈ ಪ್ರಾಜೆಕ್ಟ್ ಮತ್ತೊಂದು ವಿಶೇಷ ಅಂದ್ರೆ ಎಎನ್​ಪಿಆರ್ ಕ್ಯಾಮೆರಾ ಬಳಕೆ. ಇದು ವಿದೇಶಗಳಲ್ಲಿ ಬಳಸು ವಿಶೇಷ ಕ್ಯಾಮೆರಾ. ಇದಕ್ಕೆ ಪೊಲೀಸ್ರು ಒಂದು ವಾಹನದ ನಂಬರ್ ನೀಡಿದ್ರೆ, ಆ ಡಾಟಾ ಪಡೆದುಕೊಳ್ಳುವ ಕ್ಯಾಮೆರಾ ನಗರದಲ್ಲಿ ಯಾವ ಕಡೆ ಈ ವಾಹನ ಓಡಾಡುತ್ತಿದೆ ಎನ್ನುವುದನ್ನು ನಂಬರ್ ಪ್ಲೇಟ್ ರೆಕಗ್ನೇಷನ್ ಮೂಲಕ ಪತ್ತೆ ಮಾಡಿ ಮಾಹಿತಿ ನೀಡುತ್ತೆ. ಇದಕ್ಕಾಗಿ ಪೊಲೀಸ್ರು ಎಲ್ಲಾ ಕ್ರಿಮಿನಲ್ ಗಳ ವಾಹನದ ಮಾಹಿತಿಯನ್ನು ಈಗಾಗಲೇ ಡಾಟಾ ಸರ್ವರ್ಗೆ ನೀಡಿದ್ದು, ಆರೋಪಿಗಳು ಎಲ್ಲಿ ಓಡಾಡುತ್ತಿದ್ದಾರೆ ಎನ್ನುವುದನ್ನು ಸಹ ಇದು ಆಗಾಗ ಕಮಾಂಡ್ ಸೆಂಟರ್ಗೆ ನೀಡುತ್ತಿರುತ್ತೆ. ಅಷ್ಟೆ ಅಲ್ಲಾ ಯಾವುದೇ ಕ್ರೈಂ ನಡೆದಾಗ, ಕೆಲವರು ವಾಹನ ನಂಬರ್ ನೋಡಿ ಮಾಹಿತಿ ಸಿಕ್ಕಾಗ ಆ ಡಾಟಾವನ್ನು ಸರ್ವರ್ ಮೂಲಕ ಈ ಕ್ಯಾಮೆರಾಗೆ ನೀಡಿದ್ರೆ ವಾಹನ ಎಲ್ಲಿ ಹೋದ್ರೂ ಸಹ ಪತ್ತೆ ಮಾಡುತ್ತೆ. 

ಮಹಿಳೆಯರ ದಟ್ಟಣೆ ಪ್ರದೇಶದಲ್ಲಿ ಪಿಟಿಜೆಡ್ ಕ್ಯಾಮೆರಾ ಬಳಕೆ.!

ಇನ್ನೂ ಮಹಿಳೆಯರು ಹೆಚ್ಚಾಗಿ ಇರುವ ಕಾಲೇಜ್, ಬಸ್ ಸ್ಟಾಪ್, ಸಮಾವೇಶ ನಡೆಯುವ ಸ್ಥಳಗಳಲ್ಲಿ ಈ ತಂತ್ರಜ್ಞಾನದ ಕ್ಯಾಮೆರಾಗಳನ್ನ ಬಳಕೆ ಮಾಡಲು ಇಲಾಖೆ ಮುಂದಾಗಿದೆ. ಇದರ ಮೂಲಕ ಪೊಲೀಸರು ಕುಳಿತಲ್ಲೇ ಮಹಿಳೆಯರ ಹಿಂದೆ ಬಿದ್ದ ಕಾಮುಕರ ಪತ್ತೆ ಮಾಡುತ್ತಾರೆ. ಕಾಲೇಜ್ ಬಳಿ ಓಡಾಡುವ, ಗುಂಪು ಕಟ್ಟಿಕೊಂಡು ಕಿರಿಕಿರಿ ಮಾಡುವ ಪುಂಡರನ್ನು ಇಲ್ಲಿಂದಲೇ ಜೂಮ್ ಮಾಡಿ ಅವರ ಚಲನವಲನಗಳನ್ನು ಪತ್ತೆ ಮಾಡುತ್ತಾರೆ. ಅದನ್ನು ಹೊಯ್ಸಳಗಳಿಗೆ ರವಾನೆ ಮಾಡಿ ಅವರನ್ನು ಬಂಧಿಸಲು ಪ್ಲಾನ್ ಮಾಡಿಕೊಂಡಿದ್ದಾರೆ.

ಮಹಿಳೆಯರ ರಕ್ಷಣೆಗೆ 3 ವಿಶೇಷ ಕ್ಯಾಮೆರಾ ಬಳಕೆ.!
ಇಷ್ಟು ಕ್ಯಾಮೆರಾಗಳ ಜೊತೆಗೆ ಮಹಿಳೆಯರ ಸುರಕ್ಷತೆಗಾಗಿಯೇ ಮೂರು ವಿಶೇಷ ಕ್ಯಾಮೆರಾ ಬಳಸಲಾಗುತ್ತಿದೆ. ಸಮಾವೇಶದ ವೇಳೆ ರಕ್ಷಣೆಗೆ ಡ್ರೋನ್ ಕ್ಯಾಮೆರಾ, ಸಮಾವೇಶ ನಡೆಯುವ ಪ್ರದೇಶದಲ್ಲಿ ಗಸ್ತು ಮಾಡುವ ಮಹಿಳಾ ಪೊಲೀಸರಿಗೆ ಬಾಡಿ ವೇರ್ ಕ್ಯಾಮೆರಾ, ಹಾಗೂ ನಿರ್ಜನ ಪ್ರದೇಶದಲ್ಲಿ ಸೇಫ್ಟಿ ಐ ಲ್ಯಾಂಡ್ ಕ್ಯಾಮೆರಾಗಳನ್ನು ಬಳಕೆ ಇಲಾಖೆ ಈ ಪ್ರಾಜೇಕ್ಟ್ ನಲ್ಲಿ ಮುಂದಾಗಿದೆ.

ಸೇಫ್ಟಿ ಐ ಲ್ಯಾಂಡ್ ಕ್ಯಾಮೆರಾ ವಿಶೇಷತೆ.!
Saftey I Land Camera ಇದನ್ನು ಪೊಲೀಸರು ನಿರ್ಜನ ಪ್ರದೇಶ ಇರುವ ಕಡೆ ಹಾಕಲಿದ್ದಾರೆ. ಕೆಲವೆಡೆ ಮಹಿಳೆಯರು ತಕ್ಷಣ ರಕ್ಷಣೆ ಬೇಕಾದಾಗ ಈ ಕ್ಯಾಮೆರಾ ಬಟನ್ ಪ್ರೇಸ್ ಮಾಡಿ ತಕ್ಷಣ ಕ್ಯಾಮೆರಾ ಆನ್ ಆಗಲಿದೆ. ಅಲ್ಲಿ ಮಹಿಳೆ ತನ್ನ ಪ್ರಾಬ್ಲಂ ಹೇಳಿಕೊಂಡ್ರೆ ತಕ್ಷಣ ಆ ಮಾಹಿತಿಗೆ ಸ್ಪಂದಿಸುವ ಪೊಲೀಸ್ರು ಅಲ್ಲಿಗೆ ಬಂದು ರಕ್ಷಣೆ ಮಾಡಲಿದ್ದಾರೆ.

126 ಕಡೆ ಕ್ಯಾಮೆರಾ ವಿವಿಂಗ್ ಕಮಾಂಡ್ ಸೆಂಟರ್.!
ಇತ್ತಾ ಈ ಎಲ್ಲಾ ಕ್ಯಾಮೆರಾಗಳ ಮೇಲೆ ನಿಗಾ ಇಡಲು 126 ಕಡೆ ಕಮಾಂಡ್ ಸೆಂಟರ್ ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಜೊತೆಗೆ ಆಯಾ ವ್ಯಾಪ್ತಿಯ ಪೊಲೀಸ್ ಸ್ಟೇಷನ್, ಡಿಸಿಪಿ ಆಫೀಸ್, ಹೆಚ್ಚುವರಿ ಆಯುಕ್ತರ ಆಫೀಸ್ ಹಾಗೂ ಮೈನ್ ಕಮಾಂಡ್ ಸೆಂಟರ್ ನಲ್ಲಿ ಈ ಡಾಟಾವನ್ನು ವಿಕ್ಷಣೆ ಮಾಡಲಾಗುತ್ತೆ.

ಈ ಮೂಲಕ ನಗರದಲ್ಲಿ ಮಹಿಳೆಯರ ರಕ್ಷಣೆ, ಕಿರಾತರಕ ಚಲನವಲನದ ಮೇಲೆ ನಿಗಾ, ಹಾಗೂ ಕ್ರೈಂ ಕಂಟ್ರೋಲ್ ಮಾಡಲು ಪೊಲೀಸ್ರು ಈ ಪ್ರಾಜೆಕ್ಟ್ ಶುರುಮಾಡಿದ್ದಾರೆ. ಸದ್ಯ ಇದಕ್ಕೆ ಕೇಂದ್ರ ಸರ್ಕಾರ ಶೇಕಡಾ 60% ಮತ್ತು ರಾಜ್ಯ ಸರ್ಕಾರ 40% ಅನುದಾನ ನೀಡಲಿದ್ದು, ಮೊದಲು ಹಂತದಲ್ಲಿ 278 ಕೋಟಿ ಬಿಡುಗಡೆಯಾಗಿದ್ದು, ಇಲಾಖೆ ಟೆಂಡರ್ ಕರೆದು ಪ್ರಾಜೆಕ್ಟ್ ಚಾಲನೆಗೆ ಮುಂದಾಗಿದೆ. ಇದರ ಜವಾಬ್ದಾರಿಯನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತು ಆಡಳಿತ ವಿಭಾಗದ ಆಯುಕ್ತ ಹೇಮಂತ್ ನಿಂಬಾಳ್ಕರ್ ವಹಿಸಿಕೊಂಡಿದ್ದಾರೆ.

click me!