ನನ್ನನ್ನು ಪಕ್ಷಾಂತರಿ ಎನ್ನುವವರಿಗೆ ಇಲ್ಲಿದೆ ಉತ್ತರ. ನಾನಾಗಿಯೇ ಪಕ್ಷಾಂತರ ಮಾಡಿರಲಿಲ್ಲ. ನನ್ನನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹಾವೇರಿ (ನ.27): ರಾಜ್ಯದ 15 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆಗೆ ಬಿರುಸಿನ ಪ್ರಚಾರ ನಡೆಯುತ್ತಿದೆ. ಹಲವು ಕ್ಷೇತ್ರಗಳಲ್ಲಿ ನಾಯಕರು ಚುನಾವಣಾ ಅಖಾಡಕ್ಕೆ ಇಳಿದು ಪ್ರಚಾರದಲ್ಲಿ ತೊಡಗಿದ್ದಾರೆ.
ಇತ್ತ ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ವಿರುದ್ಧ ಕಣಕ್ಕೆ ಇಳಿದಿರುವ ಕಾಂಗ್ರೆಸಿನ ಬನ್ನಿಕೋಡ್ ಪರ ಪ್ರಚಾರ ಕಾರ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಿದರು.
undefined
ಇದೇ ವೇಳೆ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದು, ಕಳೆದ ಚುನಾವಣೆಯಲ್ಲಿ ನಾನು ಬಿ.ಸಿ.ಪಾಟೀಲ್ ಪರ ಪ್ರಚಾರ ಮಾಡಿಲ್ಲ ಎಂದಿದ್ದರೆ ಆತ ಗೆಲ್ಲುತ್ತಿರಲಿಲ್ಲ ಎಂದರು.
17ಜನರು ಬಿಜೆಪಿ ಒತ್ತಾಯದ ಮೇರೆ ರಾಜೀನಾಮೆ ನೀಡಿದ್ದಾರೆ. ಮತದಾರರ ಅನುಮತಿ ಇಲ್ಲದೇ ಮೋಸ ಮಾಡಿ ಅಧಿಕಾರಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್ ಸಹ ಇವರನ್ನು ಅನರ್ಹ ಮಾಡಿದೆ. ಹೀಗಾಗಿ ಬಿ.ಸಿ.ಪಾಟೀಲರನ್ನು ಶಾಸ್ವತವಾಗಿ ಮನೆಗೆ ಕಳಿಸಬೇಕು ಎಂದರು.
ನಾನು ಜೆಡಿಎಸ್ ನಿಂದ ಕಾಂಗ್ರೆಸಿಗೆ ಹೋದವನು. ಆದರೆ ನಾನಾಗಿ ಜೆಡಿಎಸ್ ಬಿಟ್ಟಿಲ್ಲ. ನನ್ನ ಜೆಡಿಎಸ್ ಉಚ್ಚಾಟನೆ ಮಾಡಿದೆ. ನಾನು ಒಂದು ವರ್ಷಗಳ ಕಾಲ ಅಹಿಂದ ಸಮಾವೇಶ ಮಾಡುತ್ತಿದ್ದೆ ಎಂದು ತಮ್ಮ ಹಳೆಯ ರಾಜಕೀಯ ವಿಚಾರವನ್ನು ಸಿದ್ದರಾಮಯ್ಯ ಬಿಚ್ಚಿಟ್ಟರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಜಕಾರಣ ಅಂದರೆ ಪೋಲಿಸ್ ಕೆಲಸ ಎಂದು ಬಿ.ಸಿ ಪಾಟೀಲ್ ತಿಳಿದುಕೊಂಡಿದ್ದಾರೆ. ಬಿ.ಸಿ. ಪಾಟೀಲ್ ಪೋಲಿಸ್ ಬುದ್ದಿ ಹೋಗಿಲ್ಲ. ಅಧಿಕಾರಕ್ಕಾಗಿ ಪಕ್ಷ ಬಿಟ್ಟಿಲ್ಲ. ಹಣಕ್ಕಾಗಿ ಪಕ್ಷ ಬಿಟ್ಟಿಲ್ಲ ಎಂದರೆ ಮತ್ಯಾಕೆ ಅವರು ಪಕ್ಷ ಬಿಟ್ಟರು ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು ಡಿಸೆಂಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ.