ಸಂಭ್ರಮದ ದಸರಾಗೆ ಸಾಹಿತಿ ಭೈರಪ್ಪ ಚಾಲನೆ

By Kannadaprabha NewsFirst Published Sep 29, 2019, 2:17 PM IST
Highlights

ನಾಡಹಬ್ಬ ದಸರಾಕ್ಕೆ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಚಾಲನೆ ನೀಡಿದ್ದಾರೆ. ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆ ಮಾಡಿದ್ದು, ಅರಮನೆ ನಗರಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸ್ತಿದೆ. ದಸರಾಗೆ ಚಾಲನೆ ನೀಡಿ ಮಾತನಾಡಿದ ಭೈರಪ್ಪ ಅವರು ಏನೇನು ಹೇಳಿದ್ರು, ಹೇಗಿತ್ತು ದಸರಾಗೆ ಚಾಲನೆ ಸಿಕ್ಕ ಆ ಕ್ಷಣ ಎಂದು ತಿಳಿಯಲು ಈ ಸುದ್ದಿ ಓದಿ.

ಮೈಸೂರು(ಸೆ.29): ದೇವರಲ್ಲಿ ನಂಬಿಕೆ ಇಲ್ಲದಿದ್ರೆ ವಿಚಾರವಂತರು ಅಂತಾರೆ. ದೇವರ ಮೇಲೆ ನಂಬಿಕೆ ಇಲ್ಲದಿದ್ದರೆ ಮಾತ್ರ ಪ್ರಗತಿಪರರು ಅನ್ನೋ ಅಭಿಪ್ರಾಯ ಹಲವರಿಗಿದೆ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿದ್ದಾರೆ.

ಮೈಸೂರಿನಲ್ಲಿ ನಾಡ ಹಬ್ಬ ದಸಾರಗೆ ಚಾಲನೆ ನೀಡಿ ಮಾತನಾಡಿ, ಈಗಲೂ ನಾನು ಚಾಮುಂಡಿ ಬೆಟ್ಟ ಹತ್ತುತ್ತೇನೆ ನನಗೂ ದೇವರಲ್ಲಿ ನಂಬಿಕೆ ಇದೆ. ಸಾಹಿತಗಳಾದವರು ದೇವರನ್ನು ನಂಬಕೂಡದು ಅನ್ನೋ ಅಭಿಪ್ರಾಯವಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ಮೆಟ್ಟಿಲು ಹತ್ತಿ ದೇವಿಯ ದರ್ಶನ ಮಾಡುತ್ತಿದ್ದೆ. ದೇವರ ಮೇಲೆ ನಂಬಿಕೆ ಇಲ್ಲದಿದ್ದರೆ ಮಾತ್ರ ಪ್ರಗತಿಪರರು ಅನ್ನೋ ಅಭಿಪ್ರಾಯ ಹಲವರಲ್ಲಿದೆ. ಪ್ರಪಂಚದಲ್ಲಿ ದೇವರು ಅನ್ನೋದು ಇದೆಯೇ? ಅನ್ನೋ ಪ್ರಶ್ನೆ ಇದಕ್ಕೆ ವಿಚಾರವಂತರು ಪ್ರಪಂಚ ನಮಗೆ ಗೊತ್ತು.ದೇವರು ಇಲ್ಲ ಅಂತಾರೆ ಪ್ರಪಂಚವೆಂದರೆ ಕೇವಲ ಭೂಮಿ ಅಲ್ಲ. ಅದರ ವಿಸ್ತಾರ ನಮಗೆ ಗೊತ್ತಿಲ್ಲ ಎಂದಿದ್ದಾರೆ.

ವಿದ್ಯುತ್ ದೀಪಾಲಂಕಾರ:

ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಸಾಂಸ್ಕೃತಿಕ ನಗರಿಯ ರಾಜಬೀದಿಗಳು, ಪಾರಂಪರಿಕ ಕಟ್ಟಡಗಳು, ವೃತ್ತಗಳು ಶರನ್ನವರಾತ್ರಿಗೆ ರಂಗು ತುಂಬಿವೆ. ಸಾಂಸ್ಕೃತಿಕ ಸೊಬಗು ಬೆಳಕಿನ ರೂಪದಲ್ಲಿ ಪ್ರಜ್ವಲಿಸುತ್ತಿದ್ದು, ಪ್ರವಾಸಿಗರ ಸ್ವಾಗತಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗಿದೆ. ದೇವಿಗೆ ಅಗ್ರಪೂಜೆ ಸಲ್ಲಿಸಿದ ಬಳಿಕ ಬೆಳಗ್ಗೆ 9.39ರಿಂದ 10.25ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡಹಬ್ಬಕ್ಕೆ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಚಾಲನೆ ನೀಡಿದ್ದಾರೆ. 10 ದಿನಗಳ ಕಾಲ ಹಬ್ಬದ ಸಂಭ್ರಮ ಮೇಳೈಸಲಿದೆ.

ನಾಡಹಬ್ಬ ದಸರಾಗೆ ಚಾಲನೆ: ಭೈರಪ್ಪ ಭಾ಼ಷಣದ ಮಾತುಗಳಿವು

ರಾಜಮನೆತನದಿಂದ ಧಾರ್ವಿುಕ ದಸರಾ ಆಚರಣೆಗೆ ಮೈಸೂರು ಅರಮನೆ ಸನ್ನದ್ಧಗೊಂಡಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಾರಥ್ಯದಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿವೆ. ಖಾಸಗಿ ದರ್ಬಾರ್, ಆಯುಧಪೂಜೆ, ವಿಜಯದಶಮಿ ಮೊದಲಾದ ಕೈಂಕರ್ಯಗಳು ಸಂಪ್ರದಾಯದಂತೆ ವಿಧಿವತ್ತಾಗಿ ನೆರವೇರಲಿವೆ. ವಿಜಯದಶಮಿ ದಿನದಂದು ಅರಮನೆ ಅಂಗಳದ ಮಟ್ಟಿಮಣ್ಣಿನಲ್ಲಿ ವಜ್ರಮುಷ್ಟಿ ಕಾಳಗ ನಡೆಯಲಿದ್ದು, ನಾಲ್ವರು ಜಟ್ಟಿಗಳು ಸೆಣಸಾಟಕ್ಕೆ ಸಿದ್ಧರಾಗುತ್ತಿದ್ದಾರೆ.

ಮನರಂಜನೆಯ ಹಬ್ಬದೂಟ:

ರೋಚಕ ಅನುಭವ ಉಣಬಡಿಸುವ ದಸರಾ ಕುಸ್ತಿ ಪಂದ್ಯಾವಳಿ ಸೆ.29ರಿಂದ ಆರು ದಿನ ಜರುಗಲಿದ್ದು, ಮೊದಲ ಬಾರಿ ಎಲ್ಇಡಿ ಪರದೆ ಮೂಲಕ ಪಂದ್ಯಾವಳಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಅ.2ರಿಂದ 6ರ ವರೆಗೆ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ವಿಸ್ಮಿತ, ವಿಕಾಸ, ವಿನೋದ, ವಿಶಿಷ್ಟ ಹಾಗೂ ವಿಖ್ಯಾತ ಹೆಸರಲ್ಲಿ ‘ಪಂಚ ಕವಿಗೋಷ್ಠಿ’ ಆಯೋಜಿಸಲಾಗಿದೆ. ಕವಿ ಡಾ.ದೊಡ್ಡರಂಗೇಗೌಡ ಉದ್ಘಾಟಿಸಲಿದ್ದಾರೆ. ಹೆಸರಾಂತ ಕವಿಗಳು, ಉದಯೋನ್ಮುಖರೊಂದಿಗೆ ಪೌರ ಕಾರ್ವಿುಕರು, ಕೂಲಿ ಕಾರ್ವಿುಕರೂ ಕವನ ವಾಚನ ಮಾಡಲಿದ್ದಾರೆ. ಮಹಿಳಾ ಮತ್ತು ಮಕ್ಕಳ ದಸರಾ ಪ್ರತ್ಯೇಕವಾಗಿ ನಡೆಯಲಿವೆ.

ಎಂಟು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಲರವ:

ಸಾಂಸ್ಕೃತಿಕ ಕಲರವ ಅನಾವರಣಕ್ಕೆ 8 ವೇದಿಕೆಗಳು ಸಜ್ಜಾಗಿವೆ. ಪ್ರಮುಖ ವೇದಿಕೆಯಾದ ಅರಮನೆ ಅಂಗಳದಲ್ಲಿ ಖ್ಯಾತ ಗಾಯಕ ಪಂಕಜ್ ಉದಾಸ್ ಅವರಿಂದ ಗಜಲ್ ಗಾಯನ, ವಿಜಯ್ಪ್ರಕಾಶ್ ಅವರಿಂದ ಗಾನ ಸಂಭ್ರಮ, ಸಂಗೀತ ಕಟ್ಟಿ ಅವರಿಂದ ಸಂಗೀತ ಸುಧೆ ಹರಿಯಲಿದೆ.

ಸಿಂಹಾಸನ ವೀಕ್ಷಣೆಗೆ ಪ್ರತ್ಯೇಕ ಟಿಕೆಟ್!

ಅರಮನೆಯಲ್ಲಿರುವ ರತ್ನಖಚಿತ ಸಿಂಹಾಸನ ವೀಕ್ಷಣೆಗೆ ಪ್ರತ್ಯೇಕ ಟಿಕೆಟ್ ದರ ನಿಗದಿ ಮಾಡಲಾಗಿದ್ದು, ಪ್ರವಾಸಿಗರಿಂದ 50 ರೂ. ಸಂಗ್ರಹಿಸಲಾಗುತ್ತಿದೆ. 20ರಿಂದ 25 ದಿನ ಮಾತ್ರ ವೀಕ್ಷಣೆಗೆ ಲಭ್ಯ ಇರಲಿದೆ. ಇಷ್ಟು ವರ್ಷ ಅರಮನೆ ಪ್ರವೇಶ ಟಿಕೆಟ್ ಪಡೆದ ಪ್ರವಾಸಿಗರು ನವರಾತ್ರಿ ವೇಳೆ ಇದನ್ನು ಮುಕ್ತವಾಗಿ ನೋಡಬಹುದಿತ್ತು. ಈಗ 50 ರೂ. ನೀಡಬೇಕಿದೆ. ‘ಸಿಂಹಾಸನ ವೀಕ್ಷಣೆಗಾಗಿ ಟಿಕೆಟ್ ನಿಗದಿ ಮಾಡಲಾಗಿದೆ.

ಮಹಿಷಾ ದಸರಾ ರದ್ದು: ಮೋದಿ, ಪ್ರತಾಪ್ ಸಿಂಹ ವಿರುದ್ಧ ಗುಡುಗಿದ ಭಗವಾನ್

click me!