ವಿಜಯನಗರ ಬಡಾವಣೆಯ ಜನರಿಗೆ ಉಚಿತವಾಗಿ ಆಮ್ಲಜನಕ ಪೂರೈಕೆ| ಈವರೆಗೆ ಐವರಿಗೆ ಸಕಾಲದಲ್ಲಿ ಉಚಿತವಾಗಿ ಆಮ್ಲಜನಕ ಪೂರೈಸುವ ಮೂಲಕ ನೆರವಾದ ರಾಕ ಚಾರಿಟೇಬಲ್ ಟ್ರಸ್ಟ್| ರಾಕ ಜೊತೆ ಕೈಜೋಡಿಸಿದ ಆಮ್ಲಜನಕ ಉತ್ಪಾದಿಸುತ್ತಿರುವ ಬೆಂಟ್ಲಿ ರನ್ನಿಂಗ್ ಪ್ರೈ. ಲಿ. ಟ್ರಸ್ಟ್|
ಬೆಂಗಳೂರು(ಏ.29): ವಿಜಯನಗರ ಪರಿಸರದಲ್ಲಿ ಕೊರೋನಾ ಸೋಂಕಿಗೆ ಒಳಗಾಗಿ ಆಮ್ಲಜನಕದ ಸಮಸ್ಯೆ ಎದುರಿಸುತ್ತಿರುವ ಬಡ ರೋಗಿಗಳ ನೆರವಿಗೆ ನಗರದ ಆರ್.ವಿ. ರಾಕ ಚಾರಿಟೇಬಲ್ ಟ್ರಸ್ಟ್ ಮುಂದಾಗಿದೆ.
ಟ್ರಸ್ಟ್ ಮಂಗಳವಾರದಿಂದ ವಿಜಯನಗರ ಬಡಾವಣೆಯ ಜನರಿಗೆ ಉಚಿತವಾಗಿ ಆಮ್ಲಜನಕ ಪೂರೈಕೆ ಮಾಡುತ್ತಿದೆ. ಈವರೆಗೆ ಐವರಿಗೆ ಸಕಾಲದಲ್ಲಿ ಉಚಿತವಾಗಿ ಆಮ್ಲಜನಕ ಪೂರೈಸುವ ಮೂಲಕ ನೆರವಾಗಿದೆ. ಆಸ್ಪತ್ರೆಯಲ್ಲಿ ಹಾಸಿಗೆ ದೊರೆಯದೆ ಮನೆಯಲ್ಲಿರುವ ಅದರಲ್ಲೂ ಆಮ್ಲಜನಕದ ಅಗತ್ಯ ಇರುವ ಸೋಂಕಿತರಿಗೆ 140 ಲೀಟರ್‌ನ ಬೃಹತ್ ಆಮ್ಲಜನಕ ಸಿಲಿಂಡರ್ ಅನ್ನು ಮನೆಗೆ ಒದಗಿಸುತ್ತಿದೆ.
ಕೊರೋನಾ ವಿರುದ್ಧ ಹೋರಾಟ: ರಕ್ಷಾ ಫೌಂಡೇಷನ್‌ನಿಂದ ಫ್ರೀ ಆಕ್ಸಿಜನ್
ಬಿಡದಿಯಲ್ಲಿ ಆಮ್ಲಜನಕ ಉತ್ಪಾದಿಸುತ್ತಿರುವ ಬೆಂಟ್ಲಿ ರನ್ನಿಂಗ್ ಪ್ರೈ. ಲಿ. ಟ್ರಸ್ಟ್ ಇದರೊಂದಿಗೆ ಕೈಜೋಡಿಸಿದೆ. ವಿಜಯನಗರ ಬಡಾವಣೆಯ ನಿವಾಸಿಗಳು ಆಮ್ಲಜನಕಕ್ಕಾಗಿ ವಿಳಾಸ: ಆರ್.ವಿ. ರಾಕ ಚಾರಿಟೇಬಲ್ ಟ್ರಸ್ಟ್, 1ನೇ ಕ್ರಾಸ್, ಮ್ಯಾಕ್ ಡೊನಾಲ್ಡ್ ಎದುರು, ಹಂಪಿನಗರ. ಮೊ. 81970 12513 ಅನ್ನು ಸಂಪರ್ಕಿಸಬಹುದು.