ಕಚೇರಿಯ ಹೊರಗುತ್ತಿಗೆ ನೌಕರರೊಬ್ಬರಿಗೆ ಕೊರೋನಾ ಸೋಂಕು ಪತ್ತೆ| ಕೊರೋನಾ ಸೋಂಕಿತನ ಪ್ರಥಮ ಸಂಪರ್ಕಕ್ಕೆ ಆರ್‌ಟಿಒ ಕಚೇರಿಯ 13 ಸಿಬ್ಬಂದಿ ಮತ್ತು ಕಚೇರಿಯ ಕೆಲಸಕ್ಕೆಂದು ಬಂದಿದ್ದ ಹೊರಗಿನ 10ಕ್ಕೂ ಹೆಚ್ಚು ಜನರನ್ನು ಹೊಸಪೇಟೆ ನಗರದ ಖಾಸಗಿ ಹೋಟಲ್‌ನಲ್ಲಿ ಕ್ವಾರಂಟೈನ್|
ಹೊಸಪೇಟೆ(ಜೂ.18): ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯ ಹೊರಗುತ್ತಿಗೆ ನೌಕರರೊಬ್ಬರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿರುವುದರಿಂದ ಆರ್‌ಟಿಒ ಇಡಿ ಕಚೇರಿಯನ್ನು ಬುಧವಾರ ಸೀಲ್‌ಡೌನ್ ಮಾಡಿದ್ದು, ಕಚೇರಿಯ ದೈನಂದಿನ ಕೆಲಸಗಳು ಎಲ್ಲವೂ ಸ್ಥಗಿತಗೊಂಡಿವೆ.
ಆರ್‌ಟಿಒ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಹೊರಗುತ್ತಿಗೆ ನೌಕರರೊಬ್ಬರಿಗೆ ಕಳೆದ 4-5 ದಿನಗಳಿಂದ ನೆಗಡಿ, ಕೆಮ್ಮು ಸೇರಿದಂತೆ ರೋಗದ ಲಕ್ಷಣಗಳು ಇರುವುದರಿಂದ ಗಂಟಲಿನ ದ್ರವ ಪಡೆದು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಅವರಿಗೆ ಸೋಂಕು ದೃಢವಾಗಿದ್ದು, ಸಂಡೂರಿನ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಳ್ಳಾರಿ ಜಲ್ಲೆಯಲ್ಲಿ ಕೊರೋನಾ ಮಹಾಸ್ಫೋಟ: ಬೆಚ್ಚಿಬಿದ್ದ ಜನತೆ
ಕೊರೋನಾ ಸೋಂಕಿತನ ಪ್ರಥಮ ಸಂಪರ್ಕಕ್ಕೆ ಆರ್‌ಟಿಒ ಕಚೇರಿಯ 13 ಸಿಬ್ಬಂದಿ ಮತ್ತು ಕಚೇರಿಯ ಕೆಲಸಕ್ಕೆಂದು ಬಂದಿದ್ದ ಹೊರಗಿನ 10ಕ್ಕೂ ಹೆಚ್ಚು ಜನರನ್ನು ಹೊಸಪೇಟೆ ನಗರದ ಖಾಸಗಿ ಹೋಟಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.