ಕಾಂಗ್ರೆಸ್‌ನ ಮಾಸ್ಟರ್ ಮೈಂಡ್ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿಕೆ ಶಿವಕುಮಾರ್ ಅವರ ಅಣತಿಯಂತೆ ಈ ಜಾಗಕ್ಕೆ ಹೋಗಿ ಬಂದಿದ್ದಾರೆ
ರಾಮನಗರ (ಅ.14): ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಕುಟುಂಬದವರೊಂದಿಗೆ ಕನಕಪುರ ತಾಲೂಕಿನ ಮರಳೇಗವಿ ಮಠಕ್ಕೆ ಮಂಗಳವಾರ ಭೇಟಿ ನೀಡಿ ಡಾ.ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.
ಬುಧವಾರ ಉಮೇದುವಾರಿಕೆ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಣತಿಯಂತೆ ಕುಸುಮಾರವರು ಮರಳೇಗವಿ ಮಠಕ್ಕೆ ಭೇಟಿ ನೀಡಿದರು. ಮರಳೇಗವಿ ಮಠ ಅತ್ಯಂತ ಶಕ್ತಿ ಶಾಲಿ ಮಠ. ಶ್ರೀಗಳ ಆಶೀರ್ವಚನ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಕುಸುಮಾ ಪ್ರತಿಕ್ರಿಯೆ ನೀಡಿದರು. ಕುಸುಮಾ ಅವರೊಂದಿಗೆ ತಂದೆ ಹನುಮಂತರಾಯಪ್ಪ ಹಾಗೂಕುಟುಂಬದವರು ಹಾಜರಿದ್ದರು.
ಡಿ.ಕೆ ರವಿ ತಾಯಿ ಹೇಳಿಕೆಗೆ ಕುಸುಮಾ ಮೊದಲ ರಿಯಾಕ್ಷನ್ .
ಪ್ರತಿ ಚುನಾವಣೆಯಲ್ಲಿ ಡಿಕೆ ಸಹೋದರರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯುವುದು ವಾಡಿಕೆ. ಅಲ್ಲದೇ ಬೆಂಗಳೂರಿನ ಸೆರಗಿನಲ್ಲಿರುವ ಮರಳೇಗವಿ ಮಠ ಬೆಂಗಳೂರಿನಲ್ಲಿ ನೆಲೆಸಿರುವ ಲಿಂಗಾಯತ ಸಮುದಾಯದಲ್ಲಿ ತನ್ನ ಪ್ರಭಾವ ಹೊಂದಿದೆ ಎನ್ನಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮಠಕ್ಕೆ ಭೇಟಿ ನೀಡುವ ಮೂಲಕ ಚುನಾವಣೆಯ ಗೆಲುವಿಗೆ ಗುರುಗಳ ಆಶೀರ್ವಾದ ಪಡೆದಿದ್ದಾರೆ.