ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಹೊಸದಾಗಿ ಎಂಟ್ರಿಯಾಗಿರುವ ಕರಡಿ ಮರಿಗಳ ಚಿನ್ನಾಟ ಮತ್ತು ಆಕರ್ಷಕ ಹುಲಿಗಳು ಪ್ರಾಣಿಪ್ರಿಯರ ಜನಮನ ಸೆಳೆಯುತ್ತಿವೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜೂ.17) : ಕೋಟೆನಾಡು ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯ ಅಂದ್ರೆ ಅಲ್ಲೇನು ಅಂತ ವಿಶೇಷತೆಯಿಲ್ಲ ಅಂತ ಮೂಗು ಮುರಿಯುತಿದ್ದವರೇ ಹೆಚ್ಚು. ಆದ್ರೆ ಆ ಸಂಗ್ರಹಾಲಯಕ್ಕೆ ಹೊಸದಾಗಿ ಎಂಟ್ರಿಯಾಗಿರುವ ಕರಡಿ ಮರಿಗಳ ಚಿನ್ನಾಟ ಮತ್ತು ಆಕರ್ಷಕ ಹುಲಿಗಳು ಪ್ರಾಣಿಪ್ರಿಯರ ಜನಮನ ಸೆಳೆಯುತ್ತಿವೆ. ಹೀಗಾಗಿ ಬಯಲುಸೀಮೆಯ ಝೂಗೆ ಆಗಮಿಸ್ತಿರೋ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಿದೆ
undefined
ತಾಯಿ ಕರಡಿಯೊಂದಿಗೆ ಚಿನ್ನಾಟ ವಾಡ್ತಿರೊ ಕರಡಿ ಮರಿಗಳು. ಕುತೂಹಲದಿಂದ ಪ್ರಾಣಿಗಳನ್ನು ವೀಕ್ಷಿಸುತ್ತಿರೊ ಪ್ರವಾಸಿಗರು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯ. ಕಳೆದ ನಾಲ್ಕು ವರ್ಷಗಳ ಹಿಂದೆ, ಮೃಗಾಲಯ ಅಭಿವೃದ್ಧಿಗಾಗಿ ಜಿಲ್ಲೆಯ DMF ನಿಧಿಯಿಂದ 3 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿತ್ತು. ಆ ಹಣದಿಂದ ಮೃಗಾಲಯಕ್ಕೆ ಮೈಸೂರು ಹಾಗು ಬನ್ನೇರುಘಟ್ಟ ಮೃಗಾಲಯದಿಂದ ಎರಡು ಹುಲಿಗಳನ್ನು ತರಲಾಗಿದೆ.
ತುಮಕೂರು: ಚಿರತೆ ದಾಳಿಗೆ ಬೆಚ್ಚುತ್ತಿದ್ದಾರೆ ಕುರಿಗಾಯಿಗಳು!
ಆ ಹುಲಿಗಳ ಗಂಭೀರ ನಡಿಗೆ ಹಾಗು ಮೃಗಾಲಯದಲ್ಲೇ ಜನ್ಮ ಪಡೆದು ಜನರಿಗೆ ಆಕರ್ಷಣೀಯವಾಗಿ, ತಾಯಿ ಕರಡಿ ಯೊಂದಿಗೆ ತುಂಟಾಟವಾಡುವ ಕರಡಿ ಮರಿಗಳ ಚಿನ್ನಾಟ ಝೂಗೆ ಬರುವ ಜನರ ಜನರ ಮನ ಸೆಳೆಯುತ್ತಿದೆ. ಹೀಗಾಗಿ ದಿನದಿಂದ ದಿನಕ್ಕೆ ಆಡುಮಲ್ಲೇಶ್ವರ ಜೂಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಸರ್ಕಾರಕ್ಕೆ ಆದಾಯ ಕೂಡ ದ್ವಿಗುಣವಾಗಿದೆ. ಹಾಗೆಯೇ ಇನ್ನಷ್ಟು ಅಪರೂಪದ ಆಕರ್ಷಕ ಪ್ರಾಣಿಗಳನ್ನು ಈ ಜೂಗೆ ತರಲು ಮೃಗಾಲಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದು, ಪ್ರಾಣಿಗಳ ವಾಸಕ್ಕೆ ಅಗತ್ಯ ಗೃಹ ನಿರ್ಮಾಣ ಭರದಿಂದ ಸಾಗಿದೆ ಅಂತಾರೆ ಮೃಗಾಲಯಧಿಕಾರಿ.
ಮೃಗಾಲಯದ ಬೋನ್‌ನಿಂದ ಎಸ್ಕೇಪ್ ಆದ ಹನುಮಾನ್ ಕೋತಿ: ಝೂ ಒಳಗಿಂದ್ಲೇ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಮಂಕಿ!
ಇನ್ನೂ ಈ ಮೃಗಾಲಯ ಚಿತ್ರದುರ್ಗ ನಗರದಿಂದ 7 ಕಿಲೋ ಮೀಟರ್ ಅಂತರದಲ್ಲಿದೆ. ಹಚ್ಚ ಹಸುರಿನ ಸೊಬಗಿನ ವಾತಾವರಣದ ಮಧ್ಯೆ ಕಲ್ಲು ಬಂಡೆಗಳ ನಡುವೆ ಹಾದು ಹೋಗಿರುವ ಅಂಕು ಡೊಂಕಾದ ರಸ್ತೆಯಲ್ಲಿ ಪ್ರಾಣಿ ಪಕ್ಷಿಗಳ ಕಲರವ ವೀಕ್ಷಿಸುವ ಪ್ರವಾಸಿಗರು ಫುಲ್ ಎಂಜಾಯ್ ಮಾಡ್ತಿದ್ದಾರೆ. ಅದ್ರಲ್ಲಂತೂ ಇತ್ತೀಚೆಗೆ ಮನೆಯಲ್ಲೇ ಪ್ರಾಣಿಗಳನ್ನು ಸಾಕುವುದೇ ಹೊಸ ಟ್ರೆಂಡ್ ಆಗಿದೆ. ಆದ ಕಾರಣ ಆಡುಮಲ್ಲೇಶ್ವರ ಝೂ ನಲ್ಲಿ ಕರಡಿಗಳ ಚಿನ್ನಾಟವಂತು ಪ್ರಾಣಿ ಪ್ರಿಯರಿಗೆ ಸಖತ್ ಮಜಾ ಕೊಡ್ತಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಒಟ್ಟಾರೆ ಹುಲಿ ಹಾಗು ಕರಡಿಗಳ ಆಗಮನದಿಂದಾಗಿ ಬಯಲು ಸೀಮೆಯ ಆಡುಮಲ್ಲೇಶ್ವರ ಕಿರು ಮೃಗಾಲಯ ಜನಾಕರ್ಷಣೀಯ ಕೇಂದ್ರ ಎನಿಸಿದೆ. ಹೀಗಾಗಿ ವಿವಿದೆಡೆಗಳಿಂದ ಮೃಗಾಲಯ ವೀಕ್ಷಣೆಗೆ ಜನಸಾಗರವೇ ಹರಿದು ಬರ್ತಿದೆ. ಹಾಗಾದ್ರೆ ನೀವು ಸಹ ಹುಲಿಗಳ ಗಂಭೀರ ನಡಿಗೆ ಹಾಗು ಕರಡಿ ಮರಿಗಳ ತುಂಟಾಟ ಕಣ್ತುಂಬಿಕೊಬೇಕು ಅಂದ್ರೆ ಇಂದೇ ಆಡುಮಲ್ಲೇಶ್ವರ ಝೂ ಗೆ ಭೇಟಿ ಕೊಡಿ.