ಗದಗ: ಲಂಚ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ ಏಜೆಂಟ್‌, ಕಂದಾಯ ನಿರೀಕ್ಷಕ ಪರಾರಿ..!

By Girish Goudar  |  First Published Apr 6, 2023, 11:00 PM IST

ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದ ಘಟನೆ, ಕಂದಾಯ ನಿರೀಕ್ಷಕ ಅಡವೆಣ್ಣವರ ಎಸ್ಕೇಪ್. 


ಗದಗ(ಏ.06): 25 ಸಾವಿರ ರೂ. ಲಂಚ ಪಡೆಯುವಾಗ ಏಜೆಂಟ್ ಲೋಕಾಯುಕ್ತ ಬಲೆಗೆ ಬಿದ್ದು ಕಂದಾಯ ನಿರೀಕ್ಷಕ ಪರಾರಿಯಾದ ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ಇಂದು(ಗುರುವಾರ) ನಡೆದಿದೆ. ರೋಣದ ಕಂದಾಯ ನಿರೀಕ್ಷಕ ಅಡವೆಣ್ಣವರ ಎಸ್ಕೇಪ್ ಆಗಿದ್ದಾರೆ. 

ಹುಸೇನ್ ಸಾಬ್ ಎಂಬ ಏಜೆಂಟ್‌ನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. 25 ಸಾವಿರ ಹಣ ಪಡೆಯುವಾಗ ಏಜೆಂಟ್ ಹುಸೇನ್ ಸಾಬ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಬಾಗಲಕೋಟೆ ಮೂಲದ ತಲಾವುದ್ದೀನ್ ಕಲಾದಗಿ ಎಂಬವವರ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. 

Tap to resize

Latest Videos

undefined

ಶಾಸಕ ಲಮಾಣಿಗೆ ಟಿಕೆಟ್‌ ಕೊಟ್ಟರೆ ಬಂಡಾಯ ಅಭ್ಯರ್ಥಿ ನಿಲ್ಲಿಸುತ್ತೇವೆ: ಗಂಗಣ್ಣ ಮಹಾಂತಶೆಟ್ಟರ್‌

ವಂಶಾವಳಿ ಪತ್ರ ನೀಡಲು ಕಂದಾಯ ನಿರೀಕ್ಷಕ ಅಡವೆಣ್ಣವರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಏಜೆಂಟ್ ಹುಸೇನ್ ಸಾಬ್‌ನನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.  ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಪ್ಪಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶಂಕರ್ ರಾಗಿ, ಸಿಪಿಐ ರವಿ ಪುರುಷೋತ್ತಮ, ಅಜೀಜ್ ಕಲಾದಗಿ ತಂಡದಿಂದ ದಾಳಿ ಮಾಡಲಾಗಿದೆ. 

click me!