ಅಂಬೇಡ್ಕರ್ ಹಾಗೂ ಬಾಬೂಜಿ ನಿಲುವು ಒಂದೆ ಆಗಿತ್ತು. ಆದರೆ ಇಬ್ಬರ ನಡುವೆ ಪೈಪೋಟಿ ತಂದು ಅವರ ನಿಲುವು ಬದಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಮೈಸೂರು : ಅಂಬೇಡ್ಕರ್ ಹಾಗೂ ಬಾಬೂಜಿ ನಿಲುವು ಒಂದೆ ಆಗಿತ್ತು. ಆದರೆ ಇಬ್ಬರ ನಡುವೆ ಪೈಪೋಟಿ ತಂದು ಅವರ ನಿಲುವು ಬದಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ನಗರದ ಕಲಾಮಂದಿರದಲ್ಲಿ ಗಾಂಧಿ ವಿಚಾರ ಪರಿಷತ್ತು ಮತ್ತು ಸೋಶಿಯಲ್ ಜಸ್ಟೀಸ್ ಫೌಂಡೇಶನ್ ವತಿಯಿಂದ ಡಾ. ಹರೀಶ್ ಕುಮಾರ್ ಅವರ ಆಧುನಿಕ ಭಾರತದ ನಿರ್ಮಾತೃ ಡಾ. ಬಾಬು ಜಗದೇವನ್ ರಾಮ್ ಮತ್ತು ಬಾಬೂಜಿ ಚಿತ್ರ ಸಂಪುಟ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
undefined
ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ನೀಡಬೇಕು ಎಂದು ಬಾಬೂಜಿ ಪ್ರತಿಪಾದಿಸಿದ್ದರು. ಆಡಳಿತದಲ್ಲಿ ಇದ್ದುಕೊಂಡೆ ದಲಿತರ ಅಭಿವೃದ್ಧಿಗೆ ಅವರು ಕೊಡುಗೆ ನೀಡಿದ್ದರು. ಅವರು ಎಂದಿಗೂ ಸೇಡಿನ ರಾಜಕಾರಣ ಮಾಡಲಿಲ್ಲ. ಆಡಳಿತದಲ್ಲಿ ಶೈಕ್ಷಣಿಕ, ಔದ್ಯೋಗಿಕ ಅಭಿವೃದ್ದಿಗೆ ಅವರು ಶ್ರಮಿಸಿದ್ದಾಗಿ ಅವರು ಹೇಳಿದರು.
ಬಾಬೂಜಿ ಯಶಸ್ವಿ ರಾಜಕೀಯ ಮುತ್ಸದ್ಧಿಯಾಗಿದ್ದರು. ಅಂಬೇಡ್ಕರ್ಮತ್ತು ಬಾಬೂಜಿ ಅವರ ದಾರಿ ಮತ್ತು ಗುರಿ ಅಸ್ಪೃಶ್ಯತೆ ನಿವಾರಣೆ ಒಂದೇ ಆಗಿತ್ತು. ಆದರೆ ಈಗ ಇಬ್ಬರನ್ನೂ ಪ್ರತ್ಯೇಕವಾಗಿ ನೋಡಲಾಗುತ್ತಿದೆ. ಸರಿಯಾದ ಸಮಯಕ್ಕೆ ಈ ಪುಸ್ತಕ ಬಂದಿದೆ. ಯುವಕರು ಹೆಚ್ಚಿನ ಅಧ್ಯಯನ ಮಾಡಬೇಕು. ಬಾಬೂಜಿ ಮತ್ತು ಅಂಬೇಡ್ಕರ್ ಅವರ ಕನಸಿನ ಭಾರತದವನ್ನು ನನಸು ಮಾಡೋಣ ಎಂದರು.
ನೆಹರೂ ಸಂಪುಟದಲ್ಲಿ ಬಾಬೂಜಿ ಇದ್ದರು. ಅತಿರಥ ಮಹಾರಥರು ಜತೆಗಿದ್ದರು. ಮೂಲ ಬಿಹಾರದವರು. ಅಂಬೇಡ್ಕರ್ ಅವರಿಗಿಂತ 15 ವರ್ಷ ಚಿಕ್ಕವರು. ಸ್ವಾತಂತ್ರ್ಯ ಹೋರಾಟದಲ್ಲಿ ಬಾಬೂಜಿ ಪಾಲ್ಗೊಂಡಿದ್ದರು. ಗುಣಮಟ್ಟದ ಶಿಕ್ಷಣ ಪಡೆದುಕೊಂಡು, ಅದ್ಭುತವಾಗಿ ಇಂಗ್ಲಿಷ್ ಮಾತನಾಡುತ್ತಿದ್ದರು. ಕೇಂದ್ರದ ಸಚಿವ ಸಂಪುಟದಲ್ಲಿ ಸಚಿವರಾಗಿ, ಪ್ರಮುಖ ಖಾತೆ ನಿಭಾಯಿಸಿದ್ದರು. ಭಾರತದ ಚರಿತ್ರೆ ಬದಲಿಸುವ ಕೃಷಿ ಇಲಾಖೆಯಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಸ್ವಾಮಿ ನಾಥನ್ ಸಲಹೆ ಪಡೆದು ಕೃಷಿಯಲ್ಲಿ ಆಹಾರ ಸ್ವಾವಲಂಬನೆ ಮಾಡಿದರು. ಲೋಹಿಯಾ, ಗಾಂಧಿ, ನೆಹರು ಅವರ ಸಂಪರ್ಕ ಬಾಬೂಜಿ ಅವರಿಗೆ ಇತ್ತು ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾನ್ಯ ನಾಗರೀಕರಂತೆ. ಇವರನ್ನು ಕಂಡರೆ ಅನೇಕರಿಗೆ ಉರಿ. ಜನಪರ ಕೆಲಸ ಮಾಡಿದರೆ ಹೊಟ್ಟೆ ಉರಿ ಹೆಚ್ಚು. ಇದನ್ನು ವಾಸಿ ಮಾಡಲು ಸಂವಿಧಾನದಲ್ಲಿ ಅವಕಾಶ ಇದೆ.
- ಡಾ.ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು