ನಿವೃತ್ತ ಪಿಂಚಣಿ ನೌಕರರಿಗೆ ಹೆಚ್ಚುವರಿ ಪಿಂಚಣಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿ, 4 ತಿಂಗಳ ಗಡುವು ನೀಡಿದ್ದರೂ ಕೂಡ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಇಪಿಎಸ್ 95 ರಾಷ್ಟ್ರೀಯ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ದಾವಣಗೆರೆಯ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ದಾವಣಗೆರೆ (ಮಾ.15): ನಿವೃತ್ತ ಪಿಂಚಣಿ ನೌಕರರಿಗೆ ಹೆಚ್ಚುವರಿ ಪಿಂಚಣಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿ, 4 ತಿಂಗಳ ಗಡುವು ನೀಡಿದ್ದರೂ ಕೂಡ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಇಪಿಎಸ್ 95 ರಾಷ್ಟ್ರೀಯ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ದಾವಣಗೆರೆಯ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಜಿಲ್ಲಾಧ್ಯಕ್ಷ ಕೆ.ಎಂ.ಮರುಳಸಿದ್ಧಯ್ಯ ಮಾತನಾಡಿ ಕಳೆದ ನವೆಂಬರ್ 26ರಂದು ಶ್ರೀ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲೆಯಲ್ಲಿ ರಾಜ್ಯ ಮಟ್ಟದ ನಿವೃತ್ತ ನೌಕರರ ಸಮಾವೇಶವನ್ನು ರಾಷ್ಟ್ರಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ ಹೆಚ್ಚುವರಿ ಪಿಂಚಣಿಗೆ ಒತ್ತಾಯಿಸಲಾಗಿತ್ತು. ಆದರೆ ಪಿಎಫ್ ಸಂಸ್ಥೆ ನ್ಯಾಯಾಲಯದ ಆದೇಶ ಪರಿಗಣಿಸಿ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿಯನ್ನು ನೀಡಿಲ್ಲ ಎಂದು ದೂರಿದರು. ನ್ಯಾಯಾಲಯ ನೀಡಿದ್ದ 4 ತಿಂಗಳ ಗಡುವು ಮುಗಿದಿದ್ದರೂ ಕೂಡ ಯಾವುದೇ ಕ್ರಮ ವಹಿಸಿಲ್ಲ. ಇದಲ್ಲದೇ ನಮಗೆ ಸರ್ಕಾರದ ಯಾವುದೇ ಸವಲತ್ತುಗಳು ದೊರಕುತ್ತಿಲ್ಲ. ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್ ಕೂಡ ದೊರೆತಿಲ್ಲ.
ಮೂವತ್ತು ವರ್ಷ ಕೆಲಸ ಮಾಡಿದ್ದರೂ ಕೇವಲ 2600 ರೂಪಾಯಿ ಮಾತ್ರ ಪಿಂಚಣಿ ನೀಡಲಾಗುತ್ತಿದ್ದು, ಇವತ್ತಿನ ಕಾಲಘಟ್ಟಕ್ಕೆ ತಕ್ಕಂತೆ ಕನಿಷ್ಠ 7500 ರೂಪಾಯಿ ಹಾಗೂ ಡಿಎ ನೀಡಬೇಕು ಹಾಗೂ ಆರೋಗ್ಯ ಸೌಲಭ್ಯ ನೀಡಬೇಕು ಎಂಬುದನ್ನು ಪ್ರತಿಭಟನೆ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.ನಮ್ಮದೇ ಪಿಎಫ್ ಹಣ 5ಲಕ್ಷ ಕೋಟಿ ರೂಪಾಯಿಗೂ ಅಧಿಕವಿದೆ. ಅದಕ್ಕೆ ಬರುವ ಬಡ್ಡಿ ಹಣವನ್ನು ಹೆಚ್ಚುವರಿ ಪಿಂಚಣಿ ಆಗುತ್ತದೆ ಆದ್ದರಿಂದ ಸರ್ಕಾರ ನಿವೃತ್ತರ ಅಳಲು ಆಲಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಟಿ. ಮಂಜುನಾಥ್ ಪುಟಗನಾಳ್, ಮಲ್ಲಿಕಾರ್ಜುನಯ್ಯ ತಂಗಡಗಿ, ಎಂ. ಬಸವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ದಾವಣಗೆರೆ ಜಿಲ್ಲೆಯಲ್ಲಿ ನರೇಗಾ ಕಾಮಗಾರಿಯನ್ನು ಹೆಚ್ಚಿಸಿ: ಸಂಸದ ಜಿ.ಎಂ.ಸಿದ್ದೇಶ್ವರ
ಉದ್ಯೋಗದ ಯೋಜನೆ ಆರಂಭಿಸಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಆಗಮಿಸಿ ಸಾವಿರಾರು ಕೋಟಿ ರುಪಾಯಿ ಶಾಶ್ವತ ಜನೋಪಯೋಗಿ ಕಾಮಗಾರಿ ಉದ್ಘಾಟಿಸಿದ್ದಾರೆ. ಅದೇ ರೀತಿ ಸಾವಿರಾರು ಕೋಟಿ ರುಪಾಯಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಮಾರ್ಚ್ 25ಕ್ಕೆ ದಾವಣಗೆರೆಗೆ ಬರುತ್ತಿರುವ ಪ್ರಧಾನಿ ಯಾವುದಾದರೂ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸುವ ಕೈಗಾರಿಕೆ ಅಥವಾ ಜಿಲ್ಲೆಯ ಅದರಲ್ಲೂ ನಗರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಬಹುದಾದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿ. ನಮ್ಮ ನಗರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಭಾವಿ ರಾಜಕಾರಣಿಗಳಿದ್ದಾರೆ. ಇವರ ಪ್ರಯತ್ನದ ಫಲವಾಗಿ ಇಂತಹ ಯಾವುದಾದರೂ ಕಾಮಗಾರಿಗಳ/ಯೋಜನೆಯ ಅಡಿಗಲ್ಲು/ಶಂಕುಸ್ಥಾಪನೆ ಪೂಜೆಯೇನಾದರೂ ಇದ್ದಲ್ಲಿ ದಾವಣಗೆರೆಯ ಜನತೆಗೆ ಮಾಧ್ಯಮಗಳ ಮೂಲಕ ಮಾಹಿತಿ ನೀಡಬೇಕಾಗಿ ವಕೀಲರಾದ ಬಸವರಾಜ ಉಚ್ಚಂಗಿದುರ್ಗ ಮನವಿ ಮಾಡಿದ್ದಾರೆ.