ಮಹಿಳೆಯರ ಭದ್ರತೆಗಾಗಿ ಬಿಎಂಟಿಸಿಯಿಂದ ವಿಶ್ರಾಂತಿ ಕೊಠಡಿ

By Kannadaprabha News  |  First Published Dec 8, 2019, 8:46 AM IST

ಮಹಿಳಾ ಪ್ರಯಾಣಿಕ ಸುರಕ್ಷತೆ ಹಾಗೂ ಭದ್ರತೆಗಾಗಿ 12 ಸಂಚಾರ ಸಾಗಣೆ ನಿರ್ವಹಣೆ ಕೇಂದ್ರ(ಟಿಟಿಎಂಸಿ)ಗಳಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಿದೆ.
 


ಬೆಂಗಳೂರು(ಡಿ.08): ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಮಹಿಳಾ ಪ್ರಯಾಣಿಕ ಸುರಕ್ಷತೆ ಹಾಗೂ ಭದ್ರತೆಗಾಗಿ 12 ಸಂಚಾರ ಸಾಗಣೆ ನಿರ್ವಹಣೆ ಕೇಂದ್ರ(ಟಿಟಿಎಂಸಿ)ಗಳಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಿದೆ.

ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯ ಅನುದಾನ ಬಳಸಿಕೊಂಡು ನಗರದ ಶಾಂತಿನಗರ, ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣ, ಯಶವಂತಪುರ, ಯಲಹಂಕ ಓಲ್ಡ್‌ಟೌನ್‌, ಐಟಿಪಿಎಲ್‌, ಬನ್ನೇರುಘಟ್ಟ, ವಿಜಯನಗರ, ಕೆಂಗೇರಿ, ಕಾಡುಗೋಡಿ, ಬನಶಂಕರಿ, ದೊಮ್ಮಲೂರು, ಜೀವನಭೀಮನಗರ ಟಿಟಿಎಂಸಿಗಳಲ್ಲಿ ಈ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. 

Tap to resize

Latest Videos

ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ಸೇವೆಗೆ ಒಪ್ಪಿಗೆ!...

ಈ ಕೊಠಡಿಗಳಲ್ಲಿ ಆಸನ ವ್ಯವಸ್ಥೆ, ಮಕ್ಕಳಿಗೆ ಎದೆಹಾಲುಣಿಸಲು ಪ್ರತ್ಯೇಕ ಕೋಣೆ, ವಾಷ್‌ ರೂಂ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲಾಗಿದೆ. ಈ ಕೊಠಡಿಗಳು ಬೆಳಗ್ಗೆ 6ರಿಂದ ರಾತ್ರಿ ಕಡೆಯ ಬಸ್‌ ಹೊರಡುವವರೆಗೂ ತೆರೆದಿರುತ್ತದೆ. ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಈ ಕೊಠಡಿಗಳಿಗೆ ಮಹಿಳಾ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.

click me!