ಅಕ್ರಮವಾಗಿ ಸಾಗಿಸುತ್ತಿದ್ದ 50ಕ್ಕೂ ಹೆಚ್ಚು ಕರುಗಳ ರಕ್ಷಣೆ

By Kannadaprabha News  |  First Published Dec 8, 2019, 8:28 AM IST

ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 50ಕ್ಕೂ ಹೆಚ್ಚು ಕರುಗಳನ್ನು ಪೊಲೀಸರು ರಕ್ಷಣೆ ಮಾಡಿ, ಮೂವರನ್ನು ವಶಕ್ಕೆ ಪಡೆದು ಕರುಗಳನ್ನು ಪಿಂಜರಾಪೋಲ್‌ಗೆ ಕಳುಹಿಸಿದ್ದಾರೆ. ರುಗಳನ್ನು ವಶಕ್ಕೆ ಪಡೆದು ರಕ್ಷಣೆ ಮಾಡಿ ಅಕ್ರಮ ಸಾಗಣೆ ಮಾಡುತ್ತಿದ್ದ ಪುನೀತ್‌, ಫಾಜಿಲ್‌, ಅಪ್ಲಾನ್‌ ಎಂಬ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.


ಮೈಸೂರು(ಡಿ.08): ಕೆ.ಆರ್‌.ನಗರದಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 50ಕ್ಕೂ ಹೆಚ್ಚು ಕರುಗಳನ್ನು ಪೊಲೀಸರು ರಕ್ಷಣೆ ಮಾಡಿ, ಮೂವರನ್ನು ವಶಕ್ಕೆ ಪಡೆದು ಕರುಗಳನ್ನು ಪಿಂಜರಾಪೋಲ್‌ಗೆ ಕಳುಹಿಸಿದ್ದಾರೆ.

ಬುಧವಾರ ತಾಲೂಕಿನ ಚುಂಚನಕಟ್ಟೆಯಿಂದ ಎರಡು ಗೂಡ್ಸ್‌ ವಾಹನಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಎಳೆಗರುಗಳನ್ನು ಅಕ್ರಮ ಸಾಗಣೆ ಮಾಡುತ್ತಿರುವ ವಿಚಾರ ತಿಳಿದ ಪೊಲೀಸರು ಕಾದು, ದಾಳಿ ನಡೆಸಿ ಕರುಗಳನ್ನು ವಶಕ್ಕೆ ಪಡೆದು ರಕ್ಷಣೆ ಮಾಡಿ ಅಕ್ರಮ ಸಾಗಣೆ ಮಾಡುತ್ತಿದ್ದ ಪುನೀತ್‌, ಫಾಜಿಲ್‌, ಅಪ್ಲಾನ್‌ ಎಂಬ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Tap to resize

Latest Videos

ಮತ ಎಣಿಕೆ ಹಿನ್ನೆಲೆ ಸಂಚಾರಿ ವಾಹನಗಳ ಮಾರ್ಗ ಬದಲಾವಣೆ

ಚುಂಚನಕಟ್ಟೆಬಳಿಯಿಂದ ಅಕ್ರಮವಾಗಿ ಕರುಗಳನ್ನು ಗೂಡ್ಸ್‌ ವಾಹನಗಳಲ್ಲಿ ತುಂಬಿ ಸಾಗಣೆ ಮಾಡುವ ವಿಚಾರ ತಿಳಿದ ಪೊಲೀಸರು ಮಂಗಳವಾರ ರಾತ್ರಿಯೇ ಚುಂಚನಕಟ್ಟೆಸುತ್ತಮುತ್ತ ಸಿಬ್ಬಂದಿಗಳೊಡನೆ ತಪಾಸಣೆ ನಡೆಸಿ ಅಕ್ರಮ ಗೋಸಾಗಣೆ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಿ ಕರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಶಕ್ಕೆ ಪಡೆದ ಎಲ್ಲ 50 ಕರುಗಳನ್ನು ಪಟ್ಟಣದ ಠಾಣೆಗೆ ತಂದು ಬಿಟ್ಟಾಗ ದಾರಿಹೋಕರು ಹಾಗೂ ರೈತವರ್ಗದವರು ಎಳೆಗರುಗಳನ್ನು ಕಂಡು ಮರುಕಪಟ್ಟರಲ್ಲದೆ ಹಸಿವಿನಿಂದ ಬಳಲುತ್ತಿದ್ದ ಕರುಗಳಿಗೆ ಹಾಲು ತಂದು ಕುಡಿಸಿ ಸಂತೈಸಿ ದುಷ್ಕರ್ಮಿಗಳ ಕೃತ್ಯಕ್ಕೆ ಹಿಡಿಶಾಪ ಹಾಕುವುದಲ್ಲದೆ, ಎಳೆ ಕರುಗಳು ಎಂಬುದನ್ನು ಮರೆತು ಮಾರಾಟ ಮಾಡಿದ ಮಾಲೀಕರ ವಿರುದ್ದವೂ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮದ್ದೂರು ಅಭಿವೃದ್ಧಿಗೆ 400 ಕೋಟಿ ರೂಪಾಯಿ ಬಿಡುಗಡೆ

ಸರ್ಕಲ್‌ ಇನ್ಸ್‌ಪೆಕ್ಟರ್‌ ಪಿ.ಕೆ. ರಾಜು, ಸಬ್‌ ಇನ್ಸ್‌ಪೆಕ್ಟರ್‌ ಚೇತನ್‌, ಸಿಬ್ಬಂದಿಗಳಾದ ಯಶವಂತ್‌, ದಯಾನಂದ್‌, ರವಿಕುಮಾರ್‌, ರಮೇಶ್‌, ಅನೀತ್‌ಕುಮಾರ್‌, ಪ್ರದೀಪ್‌, ಶಾಂತಕುಮಾರ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಬೈ ಎಲೆಕ್ಷನ್: ಕಾರು, ಬೈಕ್, ಕುರಿ, ಕೋಳಿ ಸೇರಿ ಲಕ್ಷ ಲಕ್ಷ ಬೆಟ್ಟಿಂಗ್..!

click me!