ಬೆಂಗಳೂರು ಮೂಲದ ಕುಟುಂಬವೊಂದು ಮೋಜು ಮಾಡಲು ಕಾವೇರಿ ನದಿಯ ನಡುಗಡ್ಡೆಗೆ ತೆರಳಿದ್ದಾರೆ. ಆದರೆ, ದಿಢೀರ್ ನೀರು ಹೆಚ್ಚಾದ ಪರಿಣಾಮ ವಾಪಾಸ್ ಬರಲಾಗದೇ ಕೂಗಿಕೊಳ್ಳುತ್ತಿದ್ದನ್ನು ಗಮನಿಸಿದ ಸ್ಥಳೀಯರು, ಹಗ್ಗದ ಸಹಾಯದಿಂದ 4 ವರ್ಷದ ಬಾಲಕಿ, 8 ವರ್ಷದ ಬಾಲಕ, ಮೂವರು ಮಹಿಳೆಯರು ಹಾಗೂ ಓರ್ವ ವ್ಯಕ್ತಿಯನ್ನು ದಡಕ್ಕೆ ಸೇರಿಸಿದ್ದಾರೆ.
ಚಾಮರಾಜನಗರ(ಆ.05): ನೀರಿನಲ್ಲಿ ಮೋಜು ಮಾಡಲು ಹೋಗಿದ್ದ ಕುಟುಂಬವೊಂದು ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದ ಘಟನೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಕಾವೇರಿ ನದಿಯಲ್ಲಿ ನಡೆದಿದ್ದು ಸದ್ಯ, ಸ್ಥಳೀಯರು, ತೆಪ್ಪ ಓಡಿಸುವರಿಂದ ಪಾರಾಗಿದ್ದಾರೆ.
ಬೆಂಗಳೂರು ಮೂಲದ ಕುಟುಂಬವೊಂದು ಮೋಜು ಮಾಡಲು ಕಾವೇರಿ ನದಿಯ ನಡುಗಡ್ಡೆಗೆ ತೆರಳಿದ್ದಾರೆ. ಆದರೆ, ದಿಢೀರ್ ನೀರು ಹೆಚ್ಚಾದ ಪರಿಣಾಮ ವಾಪಾಸ್ ಬರಲಾಗದೇ ಕೂಗಿಕೊಳ್ಳುತ್ತಿದ್ದನ್ನು ಗಮನಿಸಿದ ಸ್ಥಳೀಯರು, ಹಗ್ಗದ ಸಹಾಯದಿಂದ 4 ವರ್ಷದ ಬಾಲಕಿ, 8 ವರ್ಷದ ಬಾಲಕ, ಮೂವರು ಮಹಿಳೆಯರು ಹಾಗೂ ಓರ್ವ ವ್ಯಕ್ತಿಯನ್ನು ದಡಕ್ಕೆ ಸೇರಿಸಿದ್ದಾರೆ.
undefined
ಕೊಳ್ಳೇಗಾಲ: ಜಮೀನಲ್ಲಿ ಮೊಬೈಲ್ ಟವರ್ ಹಾಕೋದಾಗಿ ಲಕ್ಷಾಂತರ ರೂ. ವಂಚನೆ
ಈ ಹಿಂದೆ ಹಲವರು ಇದೇ ರೀತಿ ಹುಚ್ಚಾಟ ಮೆರೆದು ಪ್ರಾಣ ಕಳೆದುಕೊಂಡಿದ್ದರು. ಒಟ್ಟಿನಲ್ಲಿ ಸ್ಥಳೀಯರ ಸಮಯಪ್ರಜ್ಞೆ ಹಾಗೂ ಮಾನವೀಯತೆಯಿಂದ ಇಡೀ ಕುಟುಂಬ ಜಲಕಂಟಕದಿಂದ ಪಾರಾಗಿದ್ದಾರೆ.