ಸ್ಲಮ್ ಜನರ ಅಭಿವೃದ್ಧಿಗೆ ಬಜೆಟ್‌ನಲ್ಲಿ 2 ಸಾವಿರ ಕೋಟಿ ರು. ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ 6ಲಕ್ಷ ಸಬ್ಸಿಡಿ ಹೆಚ್ಚಳ ಮತ್ತು ಹಕ್ಕು ಪತ್ರ ನೋಂದಣಿಗೆ ಆಗ್ರಹಿಸಿ
ತುಮಕೂರು: ಸ್ಲಮ್ ಜನರ ಅಭಿವೃದ್ಧಿಗೆ ಬಜೆಟ್‌ನಲ್ಲಿ 2 ಸಾವಿರ ಕೋಟಿ ರು. ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ 6ಲಕ್ಷ ಸಬ್ಸಿಡಿ ಹೆಚ್ಚಳ ಮತ್ತು ಹಕ್ಕು ಪತ್ರ ನೋಂದಣಿಗೆ ಆಗ್ರಹಿಸಿ ಸ್ಲಮ್ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮನವಿ ಸಲ್ಲಿಸಲಾಯಿತು.
ತುಮಕೂರು ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ರಾಜ್ಯದ ಸ್ಲಮ್ ನಿವಾಸಿಗಳಿಗೆ 2023-2024ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಹಣ ಮೀಸಲಿರಿಸುವುದು ವಸತಿ ಹಕ್ಕು ಕಾಯಿದೆಯನ್ನು ಘೋಷಿಸಲು, ಸ್ಲಮ್ ಜನರ ಅಭಿವೃದ್ಧಿ ನಿಗಮ ಸ್ಥಾಪಿಸಿ ನಗರ ಉದ್ಯೋಗ ಖಾತ್ರಿಯೋಜನೆ ಜಾರಿಗೊಳಿಸುವಂತೆ ಮನವಿ ಮಾಡಲಾಯಿತು.
ಕಾರ್ಯದರ್ಶಿ ಅರುಣ್ ಮಾತನಾಡಿ, ರಾಜ್ಯದಲ್ಲಿ ನಗರ ಜನಸಂಖ್ಯೆಯ ಶೇ.40% ಜನರು 3699 ಕೊಳಗೇರಿಗಳಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇದರಲ್ಲಿ 2780 ಕೊಳಚೆ ಪ್ರದೇಶಗಳು ಕಾನೂನು ವ್ಯಾಪ್ತಿಗೆ ಒಳಪಟ್ಟಿದ್ದು 1973ರಲ್ಲಿ ಜಾರಿಯಾದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಕಾಯಿದೆ ಮತ್ತು 2016ರ ಕರ್ನಾಟಕ ಕೊಳಗೇರಿಗಳ ಸಮಗ್ರಅಭಿವೃದ್ಧಿ ನೀತಿ ಅನ್ವಯ ಜನಸಂಖ್ಯೆವಾರು ಪಾಲು ನೀಡಬೇಕು ಎಂದು ಆಗ್ರಹಿಸಲಾಯಿತು.
2023-24ರ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕೊಳಗೇರಿಗಳ ಸಮಗ್ರಅಭಿವೃದ್ಧಿಗೆ 1 ಸಾವಿರ ಕೋಟಿ ರು. ನೀಡಬೇಕು. 2 ನಗರ ಉದ್ಯೋಗ ಖಾತ್ರಿಯೋಜನೆಯನ್ನು ಸ್ಲಮ್ ನಿವಾಸಿಗಳಿಗೆ ಪ್ರಸಕ್ತ ಬಜೆಟ್‌ನಲ್ಲಿ ಘೋಷಣೆ ಮಾಡಿ. ವರ್ಷದಲ್ಲಿ 200 ದಿನಗಳ ಕೆಲಸ ನೀಡುವಂತಹ ಕಾಯಿದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಮುಂದಾಗಬೇಕೆಂದು ಆಗ್ರಹಿಸಿದರು.
ತಿರುಮಲಯ್ಯ ಮತ್ತು ಧನಂಜಯ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿನ ನಗರಗಳಲ್ಲಿ ಸಾಮಾಜಿವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಸ್ಲಮ್ ನಿವಾಸಿಗಳ ಅಭಿವೃದ್ಧಿಗಾಗಿ ಕರ್ನಾಟಕ ಸ್ಲಂಜನರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ 500 ಕೋಟಿ ಅನುದಾನ ಮೀಸಲಿಡಬೇಕು ಎಂದರು.
ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ಈ ಹಿಂದೆ ನೀಡುತ್ತಿದಂತೆ 10 ಕೆ.ಜೆ ಅಕ್ಕಿ ನೀಡಬೇಕು ಮತ್ತು ಪಡಿತರ ವಿತರಣೆಯಲ್ಲಿ ದಿನೋಪಯೋಗಿ ಸೊಪ್ಪು, ತೊಗರಿಬೇಳೆ,
ಕಡ್ಲೆ ಬೀಜ, ಮೊಟ್ಟೆ, ಗೋಧಿಹಿಟ್ಟು ನೀಡಬೇಕು. ಬಿಪಿಎಲ್ ಗ್ಯಾಸ್‌ನ್ನು 500 ರು.ಗೆ ನೀಡಲು ಬಜೆಟ್‌ನಲ್ಲಿ ಘೋಷಿಸಲು ಆಗ್ರಹಿಸಿದರು.
ಸ್ಲಮ್ ಸಮಿತಿಯ ಪದಾಧಿಕಾರಿಗಳಾದ ಮಹಾದೇವಮ್ಮ, ಲಕ್ಷ್ಮೀಪತಿ, ಕೃಷ್ಣಮೂರ್ತಿ, ನಾಗಮ್ಮ, ಕೆಂಪಮ್ಮ, ಮೋಹನ್‌ಟಿ.ಆರ್, ಗಣೇಶ್, ಅಶ್ವಥಪ್ಪ, ಶಂಕ್ರಯ್ಯ ಪಾಲ್ಗೊಂಡಿದ್ದರು.
ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿ ಅಕ್ಷರ, ಆರೋಗ್ಯ, ಅನ್ನವನ್ನು ಕಡೆಗಣಿಸಲಾಗಿದೆ
ಮೈಸೂರು : ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿ ಅಕ್ಷರ, ಆರೋಗ್ಯ, ಅನ್ನವನ್ನು ಕಡೆಗಣಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಕಿಡಿಕಾರಿದರು.
ಆಹಾರ, ಆರೋಗ್ಯ, ಶಿಕ್ಷಣ ಕ್ಷೇತ್ರ ಸುಭಿಕ್ಷವಾಗಿದ್ದಾಗ ದೇಶ ಅಭಿವೃದ್ಧಿಯಾಗುತ್ತದೆ. ಆದರೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈ ಕ್ಷೇತ್ರಗಳನ್ನು ಕಡೆಗಣಿಸಿ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಬಜೆಟ್ ಮಂಡಿಸಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ವಿಶ್ವನಾಥ್ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಮೋಹನ್
ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಈ ಕ್ಷೇತ್ರಗಳಿಗೆ ಅನುದಾನ ಕಡಿಮೆ ಮಾಡುತ್ತಾ ಬಂದಿದೆ. ಈ ಬಾರಿಯ ಬಜೆಟ್‌ನಲ್ಲಿ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಗೆ ಶೇ.33.33 ಅನುದಾನ ಕಡಿತಗೊಳಿಸಿದೆ. ಕೈಗಾರಿಕೆ ಆಂತರಿಕ ಪ್ರೋತ್ಸಾಹ ಶೇ.10, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಶೇ.18, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಶೇ.0.23, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಗೆ ಶೇ.12.49 ರಷ್ಟುಅನುದಾನ ಕಡಿಮೆ ಮಾಡಿದೆ. ಒಟ್ಟಾರೆಯಾಗಿ ಶಿಕ್ಷಣ ಕ್ಷೇತ್ರಕ್ಕೆ ಕೇವಲ 32 ಸಾವಿರ ಕೋಟಿ ಮೀಸಲಿಡಲಾಗಿದೆ. ಇದರಿಂದಾಗಿ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಅವರು ಆರೋಪಿಸಿದರು.
ಮೋದಿ ಬಂದ ಮೇಲೆ ಅಲ್ಪಸಂಖ್ಯಾತ ಶಾಲೆಗಳಿಗೆ ಅನುದಾನ ಸಿಗುತ್ತಿಲ್ಲ. ಇದು ಅಲ್ಪಸಂಖ್ಯಾತರು ಮಾತ್ರವಲ್ಲದೆ ಭಾರತದ ಅಭಿವೃದ್ಧಿಗೂ ಹೊಡೆತ ನೀಡುತ್ತಿದೆ. ನಮಗೆ ಬೇಕಿರುವುದು ಮೂಲ ಸೌಲಭ್ಯ. ವಿಮಾನ ನಿಲ್ದಾಣಗಳಲ್ಲ. ಶಾಸಕರು, ದಲಿತ ನಾಯಕರು ಬಜೆಟ್ ಕುರಿತ ಸರಿಯಾದ ಮಾಹಿತಿಯನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಅವರ ಆಗ್ರಹಿಸಿದರು.
ಕಳೆದ 5 ವರ್ಷಗಳಲ್ಲಿ ದೇಶದ ಅಭಿವೃದ್ಧಿ ದರ ಕಡಿಮೆಯಾಗುತ್ತಲೆ ಇದೆ. ಜನಸಾಮಾನ್ಯರನ್ನು ಕಡೆಗಣಿಸಿರುವ ಸರ್ಕಾರ ಉಳ್ಳವರ ಪರವಾಗಿ ನಿಲ್ಲುತ್ತಿದೆ. ಇದೇನಾ ನಿಮ್ಮ ಅಭಿವೃದ್ಧಿ ಎಂದು ಅವರು ಕಿಡಿಕಾರಿದರು.
ಗೌಪ್ಯತೆ ಬಹಿರಂಗ ಮಾಡಬಾರದು:
ಸಿಡಿ ಗಲಾಟೆ ಒಳ್ಳಯದಲ್ಲ. ರಾಜಕಾರಣವೇ ಬೇರೆ, ಅಂತರಂಗವೇ ಬೇರೆ. ಎಲ್ಲರಿಗೂ ಅವರದೇ ಆದ ಗೌಪ್ಯತೆ ಇರುತ್ತದೆ. ನಿನ್ನ ಅವಧಿಯಲ್ಲಿ ಏನು ಅಭಿವೃದ್ಧಿ ಮಾಡಿದ್ದೀಯಾ ಎಂದು ಪ್ರಶ್ನಿಸಬೇಕ ಹೊರತು ಗೌಪ್ಯತೆ ಬಗ್ಗೆ ಮಾತನಾಡಬಾರದು. ಅದನ್ನು ಬಹಿರಂಗಪಡಿಸುತ್ತೇನೆ ಎಂದರೆ ಅವರಂತಹ ಮೂರ್ಖ ಇನ್ನೊಬ್ಬ ಇಲ್ಲ. ಇದು ಪ್ರಜಾಪ್ರಭುತ್ವವೂ ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.