ಬಳ್ಳಾರಿ: ಜೈಲಲ್ಲಿ ಬೆನ್ನು ನೋವಿನಿಂದ ದರ್ಶನ್‌ ಒದ್ದಾಟ, ದಾಸನ ನರಕಯಾತನೆಯ ವಿಡಿಯೋ!

By Girish Goudar  |  First Published Oct 20, 2024, 12:42 PM IST

ಈ ದೃಶ್ಯ ನೋಡಿದ್ರೆ ದರ್ಶನ್ ಅಭಿಮಾನಿಗಳು ಹಾಗೂ ಆಪ್ತರಿಗೆ ಬೇಸರವಾಗಬಹುದು. ತೀವ್ರ ಬೆನ್ನು ನೋವಿನ ಹಿನ್ನೆಲೆಯಲ್ಲಿ 80 ಮೀಟರ್ ನಡೆಯೋದಕ್ಕೂ ದರ್ಶನ್ ನರಳಾಡುತ್ತಿದ್ದಾನೆ. ಬೆನ್ನು ಮುಟ್ಟಿ ನೋವು ಕಡಿಮೆ ಮಾಡಲು ದರ್ಶನ್ ಪ್ರಯತ್ನ ಪಡುತ್ತಿದ್ದಾನೆ. 


ಬಳ್ಳಾರಿ(ಅ.20):  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿ ಆರೋಪಿ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಬೆನ್ನು ನೋವಿನಿಂದ ದರ್ಶನ್ ಬಳಲುತ್ತಿರುವ ವಿಡಿಯೋ ಲಭ್ಯವಾಗಿದೆ. 

ಈ ದೃಶ್ಯ ನೋಡಿದ್ರೆ ದರ್ಶನ್ ಅಭಿಮಾನಿಗಳು ಹಾಗೂ ಆಪ್ತರಿಗೆ ಬೇಸರವಾಗಬಹುದು. ತೀವ್ರ ಬೆನ್ನು ನೋವಿನ ಹಿನ್ನೆಲೆಯಲ್ಲಿ 80 ಮೀಟರ್ ನಡೆಯೋದಕ್ಕೂ ದರ್ಶನ್ ನರಳಾಡುತ್ತಿದ್ದಾನೆ.  ಬೆನ್ನು ಮುಟ್ಟಿ ನೋವು ಕಡಿಮೆ ಮಾಡಲು ದರ್ಶನ್ ಪ್ರಯತ್ನ ಪಡುತ್ತಿದ್ದಾನೆ. ನಡೆಯುವಾಗಲೇ ನೋವಿನಿಂದ ಬ್ಯಾಲೆನ್ಸ್ ತಪ್ಪಿ ಬೀಳುವ ಹಂತಕ್ಕೆ ಹೋಗಿದ್ದ ದರ್ಶನ್. ನಡೆಯುವಾಗ ಬಗ್ಗಿ, ಎದ್ದು ಬೆನ್ನು‌‌ ನೋವು ಸರಿ ಮಾಡಿಕೊಳ್ಳಲು ದರ್ಶನ್ ಹರಸಾಹಸ ಪಡುತ್ತಿದ್ದಾನೆ. 

Tap to resize

Latest Videos

ನಿನ್ನೆ ಸಂಜೆ ದರ್ಶನ್ ಪರ ವಕೀಲರಾದ ರಾಮ್ ಸಿಂಗ್ ಬಳ್ಳಾರಿ ಜೈಲಿಗೆ ಬಂದಾಗ ದರ್ಶನ್ ಸ್ಥಿತಿ ಹೀಗಿತ್ತು. ವಕೀಲರನ್ನ ಮೀಟ್ ಮಾಡಲು ಸಂದರ್ಶಕರ ಕೊಠಡಿಗೆ ಬಂದು ಹೋಗುವಾಗ ದರ್ಶನ್ ನರಳಾಡಿದ್ದಾನೆ. 

click me!