ರಾಜ್ಯದಲ್ಲಿ ಸಂಘ ಸಂಸ್ಥೆಗಳು ದಿನಕ್ಕೆ ನೂರಾರು ಜನ್ಮ ತಾಳುತ್ತವೆ. ಆದ್ರೆ ಹಾಸನದಲ್ಲೊಂದು ವಿಶೇಷ ಸಂಘ ಹುಟ್ಟಿದೆ. ಅದು ಕರ್ನಾಟಕ ಮದ್ಯಪ್ರಿಯರ ಸಂಘ. ಈ ಸಂಘ ಜೊತೆಯಲ್ಲಿ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಜನ್ಮತಾಳಿದೆ.
ಹಾಸನ (ಡಿ.23): ರಾಜ್ಯದಲ್ಲಿ ಸಂಘ ಸಂಸ್ಥೆಗಳು ದಿನಕ್ಕೆ ನೂರಾರು ಜನ್ಮ ತಾಳುತ್ತವೆ. ಆದ್ರೆ ಹಾಸನದಲ್ಲೊಂದು ವಿಶೇಷ ಸಂಘ ಹುಟ್ಟಿದೆ. ಅದು ಕರ್ನಾಟಕ ಮದ್ಯಪ್ರಿಯರ ಸಂಘ. ಮದ್ಯಪ್ರಿಯರ ಸಂಘ ಕೇವಲ ಲೆಕ್ಕಕ್ಕೆ ಹುಟ್ಟಿಲ್ಲ. ಜೊತೆಯಲ್ಲಿ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಜನ್ಮತಾಳಿದೆ. ಸರಕಾರ ಮದ್ಯ ಪ್ರಿಯರ ಹಿತರಕ್ಷಣೆ ದೃಷ್ಟಿಯಿಂದ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಗರದಲ್ಲಿಂದು ಕರ್ನಾಟಕ ಮದ್ಯಪಾನ ಪ್ರಿಯರ ಸಂಘ ಒತ್ತಾಯಿಸುತ್ತಿದೆ. ಮದ್ಯಪಾನ ಪ್ರಿಯರ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಮದ್ಯಪಾನ ಪ್ರಿಯರಿಗೆ ಇನ್ಶುರೆನ್ಸ್ ಸೌಲಭ್ಯ ಒದಗಿಸಿ, ಕುಟುಂಬಕ್ಕೆ ಆರ್ಥಿಕ ಸೌಲಭ್ಯ ಒದಗಿಸಬೇಕು, ಹಾಗೂ ಮದ್ಯಪ್ರಿಯರ ಮಕ್ಕಳಿಗೆ ಹಾಸ್ಟೆಲ್ ನಲ್ಲಿ ಶೇ.10 ರಷ್ಟು ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಮದ್ಯ ಪ್ರಿಯರಿಗೆ ನಿಗಮ ಮಂಡಳಿ ರಚಿಸಿ ಪ್ರತಿ ವರ್ಷ
ಮದ್ಯ ಪ್ರಿಯರು ಮರಣ ಹೊಂದಿದರೆ ಅವರ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ಹಣ ನೀಡಬೇಕು, ಪ್ರತಿ ಹೋಬಳಿ ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ಮದ್ಯ ಪ್ರಿಯರ ಆರೋಗ್ಯ ತಪಾಸಣೆ ಮಾಡಬೇಕು ಎಂದು ಆಗ್ರಹಿಸಿದ ಅವರು ಮದ್ಯದ ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡಿ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
undefined
ಲಾರಿಯಿಂದ ಬಿದ್ದ ಮದಿರೆಗಾಗಿ ಮುಗಿಬಿದ್ದ ಜನ... ವಿಡಿಯೋ ವೈರಲ್
ಅತೀ ಶೀಘ್ರದಲ್ಲಿ ಮಧ್ಯ ಪ್ರಿಯರ ಸಂಘಕ್ಕೆ ಸದಸ್ಯತ್ವ ನೋಂದಣಿ ಉದ್ಘಾಟನೆ ಕಾರ್ಯಕ್ರಮ ಮಾಡಲಾಗುತ್ತಿದ್ದು, ಕಾರ್ಯಕ್ರಮವನ್ನು ಅಬಕಾರಿ ಸಚಿವ ಕೆ. ಗೋಪಾಲಯ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಉಚಿತ ಮಧ್ಯ ಹಾಗೂ ಬಿರಿಯಾನಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಸಂಘ ಸಂಸ್ಥೆಗಳು ಜನ್ಮ ತಾಳುವುದು ಸಹಜ. ಆದ್ರೆ ಮದ್ಯಪ್ರಿಯರ ಸಂಘ ಈಗ ಹುಟ್ಟಿಕೊಂಡಿದ್ದು, ಮದ್ಯಪ್ರಿಯರಿಗೆ ಸರ್ಕಾರ ಸವಲತ್ತುಗಳನ್ನು ನೀಡಬೇಕೆಂದು ವಿಭಿನ್ನವಾಗಿ ಒತ್ತಾಯಿಸುತ್ತಿದೆ. ಮದ್ಯಪ್ರಿಯರ ಬೇಡಿಕೆಗಳನ್ನು ಸರ್ಕಾರ ಹೇಗೆ ಪರಿಗಣಿಸುತ್ತದೆ ಎಂಬುದು ಸದ್ಯದ ಪ್ರಶ್ನೆ.
ಮದ್ಯ, ದುಶ್ಚಟ ತ್ಯಜಿಸಿ: ಮಲ್ಲಿಕಾರ್ಜುನ್
ಕೆ.ಆರ್.ಪೇಟೆ: ಮದ್ಯ ಹಾಗೂ ದುಶ್ಚಟ ತ್ಯಜಿಸುವ ಮೂಲಕ ನವ ಜೀವನ ನಡೆಸಲು ಮಾನಸಿಕವಾಗಿ ಸಿದ್ದರಾಬೇಕು ಎಂದು ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಸೋಮನಹಳ್ಳಿಯಲ್ಲಿ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ, ಹಲವು ದುಶ್ಚಟಗಳಿಗೆ ಬಲಿಯಾಗಿರುವ ನೀವು ಸಾಕಷ್ಟುಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ. ಇದರಿಂದ ಹಣಕಾಸಿನ ಮತ್ತು ಸಾಂಸಾರಿಕ ಜೀವನದಲ್ಲಿ ಹಾಗೂ ಸಮಾಜದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದರು.
ಇವೆಲ್ಲವುದರಿಂದ ಮುಕ್ತಿ ಪಡೆಯಲು ವ್ಯಸನಮುಕ್ತರಾಗಲು ಬಯಸಿ ಒಂದು ವಾರಗಳ ಕಾಲ ಇಲ್ಲಿ ತರಬೇತಿ ಪಡೆಯುತ್ತಿದ್ದೀರಿ. ಮುಂದಿನ ಜೀವನದಲ್ಲಿ ತಪ್ಪು ಮಾಡದಂತೆ ಎಚ್ಚರಿಕೆಯಿಂದ ಕುಟುಂಬದ ಸದಸ್ಯರೊಡನೆ ಹೆಚ್ಚು ಕಾಲ ವ್ಯಯಿಸಿ ಪರಿಶುದ್ಧ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು. ಈ ವೇಳೆ ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಗ್ರಾ.ಪಂ ಸದಸ್ಯ ರವಿ, ಮಹಾಲಿಂಗ, ನಾಗೇಂದ್ರ, ಪತ್ರಕರ್ತ ಲೋಕೇಶ್, ಸೇರಿದಂತೆ ಹಲವರು ಹಾಜರಿದ್ದರು.