ಬಳ್ಳಾರಿ ಜಿಲ್ಲೆಯಲ್ಲಿ ಚಲಿಸುತ್ತಿದ್ದ ತೇರು ತನ್ನ ಮಾರ್ಗ ತಪ್ಪಿದ್ದು , ಪಕ್ಕಕ್ಕೆ ಸರಿದು ನಿಂತಿದೆ. ಅನುಮತಿ ಇಲ್ಲದಿದ್ದರೂ ರಥೋತ್ಸವ ನಡೆಸಿದ್ದು ಈ ವೇಳೆ ಅವಘಡವಾಗಿದೆ.
ಹೂವಿನಹಡಗಲಿ (ಜ.27): ರಥೋತ್ಸವದ ವೇಳೆ ತೇರು ರಸ್ತೆ ಬಿಟ್ಟು ಪಕ್ಕದ್ದಲ್ಲಿರುವ ಅಂಗಡಿ ಬಳಿ ಬಂದು ನಿಂತ ಘಟನೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಸೋಗಿ ಗ್ರಾಮದ ವೀರಭದ್ರೇಶ್ವರ ರಥೋತ್ಸವದಲ್ಲಿ ನಡೆದಿದೆ.
ಸೋಗಿ ವೀರಭದ್ರೇಶ್ವರ ರಥೋತ್ಸವಕ್ಕೆ ಕೊರೋನಾ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಅನುಮತಿ ನೀಡಿರಲಿಲ್ಲ. ಆದರೆ, ನೆರೆದಿದ್ದ ಭಕ್ತರು ಯಾರನ್ನೂ ಕೇಳದೆ ತೇರನ್ನು ಎಳೆದೇ ಬಿಟ್ಟರು.
undefined
ಉಡುಪಿಯಲ್ಲಿ ಮಕರ ಸಂಕ್ರಾತಿ ಹಗಲು ತೇರು ಉತ್ಸವ ವೈಭವ; ಪೋಟೋಗಳು
ಆಗ ರಸ್ತೆ ಬಿಟ್ಟು ಪಕ್ಕದ ಅಂಗಡಿ ಬಳಿಗೆ ತೇರು ಬಂದು ನಿಂತಿದೆ. ಒಮ್ಮೆ ತೇರು ಇನ್ನು ಸ್ವಲ್ಪ ಮುಂದೆ ಹೋಗಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು.
ತೇರು ಎಳೆಯುವ ಭಕ್ತರನ್ನು ಪೊಲೀಸರು ತಡೆಯಲು ಲಾಠಿ ಪ್ರಹಾರ ಮಾಡಿದರು. ಆ ಸಂದರ್ಭದಲ್ಲಿ 4‰5 ಭಕ್ತರಿಗೆ ಗಾಯಗಳಾಗಿದ್ದು, ಅವರನ್ನು ಸೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.