ನೋ ರಿಯಾಕ್ಷನ್‌, ಓನ್ಲಿ ಯಾಕ್ಷನ್‌ ಅಷ್ಟೇ: ರಾಜೀನಾಮೆ ನೀಡ್ತಾರ ಸಚಿವ ..?

By Kannadaprabha News  |  First Published Jan 27, 2021, 7:07 AM IST

ರಾಜ್ಯದಲ್ಲಿ ಕ್ಯಾಬಿನೆಟ್ ವಿಸ್ತರಣೆಯಾಗಿದ್ದು ಈ ಸಂಬಂಧ ಅನೇಕರು ತಮ್ಮ ಅಸಮಾಧಾನ ಹೊರ ಹಾಕಿದ್ದು ಇದೀಗ ನೋ ರಿಯಾಕ್ಷನ್ ಓನ್ಲಿ ಆಕ್ಷನ್ ಎಂದಿದ್ದಾರೆ. 


ಬಳ್ಳಾರಿ (27): ‘ನೋ ರಿಯಾಕ್ಷನ್‌, ಓನ್ಲಿ ಯಾಕ್ಷನ್‌ ಅಷ್ಟೇ’ ಪದೇ ಪದೆ ಖಾತೆ ಬದಲಾವಣೆಯಾಗುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮೂಲ ಸೌಕರ್ಯ ಮತ್ತು ವಕ್ಫ್ ಸಚಿವ ಆನಂದ್‌ ಸಿಂಗ್‌ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ಕೊಡುವುದು ಬೇಡ ಅಂದಿದ್ದಾರೆ. ಹೀಗಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಜ.28ರಿಂದ ಅಧಿವೇಶನ ಆರಂಭವಾಗಲಿದ್ದು, ಸಹಜವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು ಎಂದರು.

Tap to resize

Latest Videos

ಪದೇ ಪದೇ ಖಾತೆ ಬದಲಾವಣೆ; ಇಬ್ಬರು ಪ್ರಮುಖ ಸಚಿವರ ರಾಜೀನಾಮೆ? ...

ಜಿಲ್ಲೆ ರಚನೆಗೆ ಸಮಯ ಬೇಕು: ನೂತನ ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ 30 ಸಾವಿರ ಆಕ್ಷೇಪಣೆಗಳು ಬಂದಿದ್ದು, ಅವುಗಳ ಪರಿಶೀಲಿಸಿ ಜಿಲ್ಲೆ ರಚನೆ ಕುರಿತು ಶೀಘ್ರ ನಿರ್ಣಯ ಕೈಗೊಳ್ಳಲಾಗುತ್ತದೆ. ಹೊಸ ಜಿಲ್ಲೆಗೆ ಬಂದಿರುವ ಆಕ್ಷೇಪಣೆಗೆ ಉತ್ತರ ನೀಡಬೇಕಾಗುತ್ತದೆ. ಹೀಗಾಗಿ ಒಂದಷ್ಟುಸಮಯ ಹಿಡಿಯುತ್ತದೆ. ತದನಂತರದಲ್ಲಿ ಹೊಸ ಜಿಲ್ಲೆಯ ಘೋಷಣೆ ಬಗ್ಗೆ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.

click me!