ಅತ್ಯಾಚಾರಿಗೆ 21 ವರ್ಷ ಜೈಲು ಶಿಕ್ಷೆ, ದಂಡ ವಿಧಿಸಿ ನ್ಯಾಯಾಲಯ ತೀರ್ಪು

By Kannadaprabha NewsFirst Published Mar 21, 2024, 11:35 AM IST
Highlights

ಬಾಲಕಿ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ 21 ವರ್ಷ ಜೈಲು ಶಿಕ್ಷೆ, ದಂಡ ವಿಧಿಸಿ ಅಧಿಕ ಸೆಷನ್ ಮತ್ತು ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದೆ.

  ಮಂಡ್ಯ : ಬಾಲಕಿ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ 21 ವರ್ಷ ಜೈಲು ಶಿಕ್ಷೆ, ದಂಡ ವಿಧಿಸಿ ಅಧಿಕ ಸೆಷನ್ ಮತ್ತು ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದೆ.

ನಗರದ ಹಾಲಹಳ್ಳಿ ಲೇಬರ್ ಕಾಲೋನಿಯ ಮುಸ್ಲಿಂ ಬ್ಲಾಕ್ ಹತ್ತನೇ ಕ್ರಾಸ್‌ನ ಸಲ್ಮಾನ್ ಪಾಷಾ ಶಿಕ್ಷೆಗೊಳಗಾದ ಆರೋಪಿ. ಸಲ್ಮಾನ್‌ ಪಾಷಾ ಬಡಾವಣೆಯ ಶಾಲೆಗೆ ಮತ್ತು ಟ್ಯೂಷನ್‌ಗೆ ಹೋಗುವಾಗ ಮತ್ತು ಬರುವಾಗ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ತಿಂಡಿ ಕೊಟ್ಟು ಮಾತನಾಡಿಸುತ್ತಿದ್ದನು ಎನ್ನಲಾಗಿದೆ.

Latest Videos

ಬಾಲಕಿ ಪ್ರತಿದಿನ ಸಂಜೆ ಟ್ಯೂಷನ್‌ಗೆ ಹೋಗುವಾಗ ಆರೋಪಿಯು ಬಾಲಕಿಯನ್ನು ಯಾರೂ ಇಲ್ಲದ ಸಮಯದಲ್ಲಿ ತನ್ನ ರೂಂಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. 2022ನೇ ಜುಲೈ 3ರಂದು ಬಾಲಕಿಯ ಮೇಲೆ ವೆಸಗುವ ಉದ್ದೇಶದಿಂದ ಮಧ್ಯರಾತ್ರಿ ಬಾಲಕಿಯ ಮನೆಯ ಕಾಂಪೌಂಡ್ ಒಳಗೆ ಅಕ್ರಮ ಪ್ರವೇಶ ಮಾಡಿ ಕಿಟಕಿಯ ಮೂಲಕ ಆಕೆಯನ್ನು ಕೂಗಿ ಎಬ್ಬಿಸಿ ಮನೆಯಿಂದ ಹೊರಗೆ ಕರೆದು, ನಂತರ ಲಿಫ್ಟ್ ಕೊಡುವುದಾಗಿ ಹೇಳಿ ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿರುವುದು ದೃಢಪಟ್ಟಿದೆ.

ಪ್ರಕರಣ ಕುರಿತಂತೆ ದೂರು ದಾಖಲಾದ ನಂತರ ಭಾರತೀಯ ದಂಡ ಸಂಹಿತೆ 354(ಡಿ), 366, 378(ಎಬಿ), 376(೨)(ಎನ್) ಐಪಿಸಿ ಕಲಂ 6, 12 ಪೋಕೋ ಕಾಯಿದೆ ಅಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿ ಅಂದಿನ ಇನ್ಸ್‌ಪೆಕ್ಟರ್ ಎಸ್.ಕೆ.ಕೃಷ್ಣ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಶೇಷ ಪ್ರಕರಣ ಕುರಿತಂತೆ ಮಂಡ್ಯದ ಅಧಿಕ ಸಷೆನ್ಸ್‌ ಮತ್ತು ತ್ವರಿತಗತಿ 2ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಕೆ.ಎ.ನಾಗಜ್ಯೋತಿ ಅವರು ವಿಚಾರಣೆ ನಡೆಸಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಸಲ್ಮಾನ್ ಪಾಷನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ಸಂತ್ರಸ್ತ ಯುವತಿಯ ಪರ ವಾದ ಮಂಡಿಸಿದ್ದರು.

click me!