ಕೊರೋನಾ ಹರಡುವಿಕೆ ತಡೆಯಲು ಪ್ಲಾನ್

By Kannadaprabha NewsFirst Published Nov 8, 2020, 9:14 AM IST
Highlights

ಕೊರೋನಾ ಹರಡುವುದನ್ನು ತಡೆಯಲು ಹೊಸ ಪ್ಲಾನ್ ಮಾಡಲಾಗಿದೆ. ಈ ಮೂಲಕ ತಡೆಯುವ ಕ್ರಮ ಕೈಗೊಳ್ಳಲಾಗುತ್ತಿದೆ. 

ಶಿರಾ (ನ.08):  ಶಿರಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ವೇಳೆ ಕೊರೋನಾ ಮಾರ್ಗಸೂಚಿಗಳನ್ನು ಮರೆತು ಸಮಾವೇಶ, ರಾರ‍ಯಲಿ, ಪ್ರಚಾರ ಸಭೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇದರಿಂದ ಕೊರೋನಾ ಸೋಂಕು ಇನ್ನಷ್ಟುಹರಡದಿರಲು ಆರೋಗ್ಯ ಇಲಾಖೆ ಸಾಮೂಹಿಕವಾಗಿ ರಾರ‍ಯಪಿಡ್‌ ಟೆಸ್ಟ್‌ ನಡೆಸುತ್ತಿದೆ.

ಕೊರೋನಾ ಆತಂಕದ ನಡುವೆಯು ಶೇ.82.31 ರಷ್ಟುಮತದಾನ ನಡೆದಿತ್ತು. ಸಾಮಾಜಿಕ ಅಂತರ ಮತ್ತು ಕಡ್ಡಾಯ ಮಾಸ್ಕ್‌ನಂತಹ ಮಾರ್ಗಸೂಚಿ ಪಾಲಿಸದ ಸಾರ್ವಜನಿಕರು ಚುನಾವಣೆ ಪಾಲ್ಗೊಂಡು ಕೊರೋನಾ ಸೋಂಕಿನ ಬಗ್ಗೆ ನಿರ್ಲಕ್ಷ ವಹಿಸಿದ್ದರು. ಇದನ್ನು ಮನಗಂಡ ಆರೋಗ್ಯ ಇಲಾಖೆ ಶಿರಾ ತಾಲೂಕಿನಾದ್ಯಂತ ಸಾಮೂಹಿಕವಾಗಿ ಕೊರೋನಾ ರಾರ‍ಯಪಿಡ್‌ ಪರೀಕ್ಷೆ ನಡೆಸಲು ಮುಂದಾಗಿದೆ.

ನ.14ರ ವರೆಗೆ ತಾಲೂಕಿನ 35 ಗ್ರಾಮ ಪಂಚಾಯಿತಿ ಹಾಗೂ ನಗರದಲ್ಲಿ 10 ಪ್ರದೇಶದಲ್ಲಿ ಸೇರಿ ಒಟ್ಟು 45 ಕಡೆ ಪರೀಕ್ಷೆ ಮಾಡಲಾಗುತ್ತದೆ. ನ.5 ಮತ್ತು 6ರಂದು ಎರಡು ದಿನಗಳಲ್ಲಿ ಒಟ್ಟು 3768 ರಾರ‍ಯಪಿಡ್‌ ಟೆಸ್ಟ್‌ ಮಾಡಲಾಗಿದೆ. ಅದರಲ್ಲಿ 34 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ.

5 ತಿಂಗಳ ಬಳಿಕ ಬೆಂಗಳೂರಲ್ಲಿ ಕಡಿಮೆ ಕೊರೋನಾ ಕೇಸ್‌ ...

ಈ ಬಗ್ಗೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಅಬ್ಜಲ್‌ ಉರ್‌ ರೆಹಮಾನ್‌, ಕೊರೋನಾ ಸೊಂಕು ನಿಯಂತ್ರಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಚುನಾವಣೆ ಸಂದರ್ಭದಲ್ಲಿ ಜನರಿಗೆ ಆರೋಗ್ಯ ಇಲಾಖೆ ಎಷ್ಟೇ ಅರಿವು ಮೂಡಿಸಿದರೂ ಪ್ರಯೋಜನವಾಗಿಲ್ಲ. ಸಾಮೂಹಿಕವಾಗಿ ಸಭೆ ಸಮಾರಂಭಗಳಿಗೆ ಜನ ಹೆಚ್ಚು ಗುಂಪು ಸೇರುತ್ತಿದ್ದರು. ಇದರಿಂದ ಸೊಂಕು ಉಲ್ಬಣಗೊಂಡಿರು ಸಾಧ್ಯತೆ ಇರುವ ಕಾರಣ ಸಾಮೂಹಿಕ ಪರೀಕ್ಷೆಗೆ ಮುಂದಾದ್ದೇವೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ ಆರೋಗ್ಯ ಸಿಬ್ಬಂದಿಯೊಂದಿಗೆ ಸಹಕರಿಸಿ ಕೊರೋನಾ ಪರೀಕ್ಷೆಗೆ ಒಳಗಾಗಬೇಕು. ಎಲ್ಲರ ಸಹಕಾರ ಮತ್ತು ಸರ್ಕಾರದ ನಿಯಮ ಕಡ್ಡಾಯವಾಗಿ ಪಾಲಿಸಿದರೆ ರೋಗ ನಿಯಂತ್ರಣ ಸಾಧ್ಯ ಎಂದರು.

click me!