'ಕೈನಲ್ಲಿ ಗೊಂದಲ : ಶಿರಾದಲ್ಲಿ ಬಿಜೆಪಿಗೆ ಬಹು ಮತಗಳ ಅಂತರದ ಗೆಲುವು ಖಚಿತ'

Kannadaprabha News   | Asianet News
Published : Nov 08, 2020, 08:39 AM ISTUpdated : Nov 08, 2020, 08:54 AM IST
'ಕೈನಲ್ಲಿ ಗೊಂದಲ :  ಶಿರಾದಲ್ಲಿ ಬಿಜೆಪಿಗೆ ಬಹು ಮತಗಳ ಅಂತರದ ಗೆಲುವು ಖಚಿತ'

ಸಾರಾಂಶ

ಕಾಂಗ್ರೆಸ್ ನಲ್ಲಿ ಗೊಂದಲ ಉಂಟಾಗಿದ್ದು ಶಿರಾದಲ್ಲಿ ಬಹುತೇಕ ಬಿಜೆಪಿ ಗೆಲುವು ಖಚಿತ ಎಂದು ನಾಯಕರೋರ್ವರು ಹೇಳಿದ್ದಾರೆ. 

ತುಮಕೂರು (ನ.08): ಶಿರಾ ಉಪಚುನಾವಣೆಯಲ್ಲಿ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಬಿಜೆಪಿ ಗೆಲ್ಲಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಶಾಸಕ ಸುರೇಶ್‌ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು, ಶಿರಾದ ಪ್ರತಿ ಜಿಪಂ ಕ್ಷೇತ್ರದಲ್ಲಿ 4-5 ಸಾವಿರ ಮತಗಳ ಲೀಡ್‌ ಪಡೆಯುತ್ತೇವೆ. ಫಲಿತಾಂಶದ ನಂತರ ಕಾಂಗ್ರೆಸ್‌ ಪಕ್ಷದಲ್ಲಿ ಗೊಂದಲ ಸೃಷ್ಠಿಯಾಗಲಿದ್ದು, ಕಾಂಗ್ರೆಸ್‌ ಮುಳುಗುವ ಹಡಗಾಗಲಿದೆ ಎಂದು ಭವಿಷ್ಯ ನುಡಿದರು. 

ಶಿರಾದಲ್ಲಿ 10 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್‌ಗೆ ಗೆಲುವು ಖಚಿತ' .

ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ತಲೆ ಕೆಟ್ಟಿದೆ. ತಮಗೆ ದೆಹಲಿಯಿಂದ ಮಾಹಿತಿ ಬಂದಿದೆ ಅಂತ ಹೇಳುವ ಸಿದ್ದರಾಮಯ್ಯನವರಿಗೆ ಬಿಜೆಪಿಯವರು ಗುಪ್ತಚರ ಮಾಹಿತಿದಾರರೇ ಎಂದು ಪ್ರಶ್ನಿಸಿದ ಸುರೇಶ್‌ಗೌಡ, ಮುಖ್ಯಮಂತ್ರಿ ಬದಲಾವಣೆ ವಿಚಾರ ನಮ್ಮ ಪಕ್ಷದ ವೈಯಕ್ತಿಕ ವಿಷಯ. ಯಡಿಯೂರಪ್ಪ ಬಿಜೆಪಿಯ ಪ್ರಶ್ನಾತೀತ ನಾಯಕ.

ಅವರನ್ನು ಬದಲಾವಣೆ ಮಾಡೋ ವಿಷಯ ಸೂಜಿ ಮೊನೆಯಷ್ಟುಸುಳ್ಳು ಎಂದರು.

PREV
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು