ಮಂಗಳೂರು:  ಕರುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ವಿಡಿಯೋ ವೈರಲ್, ಆರೋಪಿಗೆ ಶೋಧ

Published : Jul 18, 2019, 08:26 PM ISTUpdated : Jul 18, 2019, 08:30 PM IST
ಮಂಗಳೂರು:  ಕರುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ವಿಡಿಯೋ ವೈರಲ್, ಆರೋಪಿಗೆ ಶೋಧ

ಸಾರಾಂಶ

ದೂರದ ಉತ್ತರ ಪ್ರದೇಶ, ಬಿಹಾರದಲ್ಲಿ ವರದಿಯಾಗುತ್ತಿದ್ದ ಪ್ರಾಣಿಗಳ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ನಮ್ಮದೇ ರಾಜ್ಯದ ಮಂಗಳೂರಿನಿಂದ ವರದಿಯಾಗಿದೆ.

ಮಂಗಳೂರು[ಜು. 18]  ನಗರದ ಕಾವೂರಿನ ಕುಂಜತ್ತ್‌ಬೈಲ್ ಬಳಿ ಕರುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಯುವಕನ ವಿರುದ್ಧ ನಗರ ಪೊಲೀಸರು ಸ್ವಯಂಪ್ರೇರಿತ ಎರಡು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಆತನ ಮೇಲೆ ಹಲ್ಲೆ ನಡೆಸಿದ ಮೂವರನ್ನು ಬಂಧಿಸಿದ್ದಾರೆ.

ಮೇಯಲು ಕಟ್ಟಿದ್ದ ಕರುವಿನೊಂದಿಗೆ ಯುವಕ ಬಲಾತ್ಕಾರದಿಂದ ಲೈಂಗಿಕ ಕ್ರಿಯೆ ನಡೆಸುತ್ತಿರುವುದು ಮತ್ತು ಸ್ಥಳೀಯರು ಆತನಿಗೆ ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ಕೈಗೆತ್ತಿಕೊಂಡಿದ್ದರು.

ಯಜ್ಜಾ ಏಳ್ಬ್ಯಾಡ, ರೈಲಿನಡಿ ಸಿಕ್ಕ ತಾತನ ಸ್ಥಿತಿ ಕೇಳ್ಬೇಡ: ವಿಡಿಯೋ ವೈರಲ್!

ಲೈಂಗಿಕ ಕ್ರಿಯೆ ನಡೆಸಿದ ಆರೋಪದಡಿ ಜಾರ್ಖಂಡ್ ಮೂಲದ ಮೊಹಮ್ಮದ್ ಅನ್ಸಾರಿ ಮೇಲೆ ಕೇಸು ದಾಖಲಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ ಸ್ಥಳೀಯರಾದ ಅಭಿ, ಸುಶಾಂತ್ ಮತ್ತು ಪ್ರಜ್ವಲ್ ಎಂಬವರನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

PREV
click me!

Recommended Stories

ಬೆಂಗಳೂರು : ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ
ನಗರ ವಿವಿ ಎಡವಟ್ಟು: 400 ಎಂಕಾಂ ಸ್ಟೂಡೆಂಟ್ಸ್ ಫೇಲ್‌!