ನವವೃಂದಾವನಕ್ಕೆ ಹಾನಿ: ನಿಧಿಗಾಗಿ ಕೃತ್ಯ ನಡೆಸಿರುವ ಶಂಕೆ

By Web Desk  |  First Published Jul 18, 2019, 3:09 PM IST

ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ತುಂಗಭದ್ರಾ ನದಿಯ ದಡದಲ್ಲಿರುವ ನವವೃಂದಾವನವನ್ನು ರಾತ್ರೋ ರಾತ್ರಿ ದುಷ್ಕರ್ಮಿಗಳು ಅಗೆದುಹಾಕಿದ್ದಾರೆ. ಕೃತ್ಯವನ್ನು ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಹಾಗೂ ಶ್ರೀ ಸುಬುಧೇಂದ್ರ ತೀರ್ಥರು ಖಂಡಿಸಿದ್ದಾರೆ.


ಕೊಪ್ಪಳ(ಜು. 18): ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ತುಂಗಭದ್ರಾ ನದಿಯ ದಡದಲ್ಲಿರುವ ನವವೃಂದಾವನವನ್ನು ರಾತ್ರೋ ರಾತ್ರಿ ದುಷ್ಕರ್ಮಿಗಳು ಅಗೆದುಹಾಕಿದ್ದಾರೆ. ನವವೃಂದಾವನ ವಿವಾದಿತ ವಪ್ರದೇಶವಾಗಿದ್ದು, ಉತ್ತರಾಧಿ ಮತ್ತು ರಾಘವೇಂದ್ರ ಮಠದ ನಡುವೆ ಮಾಲಿಕತ್ವಕ್ಕಾಗಿ ವಿವಾದವಿತ್ತು.

ಮಧ್ಯರಾತ್ರಿ ನವವೃಂದಾವನ ಅಗೆದು ಹಾಕಿರುವ ದುಷ್ಕರ್ಮಿಗಳು ವೃಂದಾವನದ ಕೆಳಭಾಗವನ್ನು ಅಗೆದು ಹಾನಿ ಮಾಡಿದ್ದಾರೆ. ನಿಧಿಗಾಗಿ ವೃಂದಾವನ ಅಗೆದು ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಗಂಗಾವತಿ ನಗರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ನವವೃಂದಾವನದಲ್ಲಿ ಇಂದು ನಡೆದ ಘೋರ ಕೃತ್ಯವನ್ನು ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಖಂಡಿಸಿದ್ದಾರೆ.

Tap to resize

Latest Videos

ಘಟನೆಗೆ ಶ್ರೀ ಸುಬುಧೇಂದ್ರ ತೀರ್ಥರ ಖಂಡನೆ:

ನವವೃಂದಾವನದ ವ್ಯಾಸರಾಜರ ವೃಂದಾವನ ದ್ವಂಸ ಪ್ರಕರಣವನ್ನು ಶ್ರೀ ಸುಬುಧೇಂದ್ರ ತೀರ್ಥರು ಖಂಡಿಸಿದ್ದಾರೆ. ಹಂಪಿ ಪರಂಪರೆಗೆ ಸೇರಿದ ವ್ಯಾಸರಾಜ ಗುರು ಸಾರ್ವಭೌಮರ ಬೃಂದಾವನ್ನು ದುಷ್ಕರ್ಮಿಗಳು ಅದನ್ನು ಸಂಪೂರ್ಣ ನಾಶ ಮಾಡಿದ್ದಾರೆ. ಎಲ್ಲರೂ ಇದನ್ನು ಖಂಡಿಸಬೇಕಿದೆ. ಪುನರ್ ನಿರ್ಮಾಣ ಪ್ರತಿಷ್ಠಾನ ಕಾರ್ಯಕ್ರಮಗಳು ವಿಧಿವಿಧಾನಗಳು ನಡೆಯಬೇಕು. ಸರ್ಕಾರ ಮತ್ತು ಜಿಲ್ಲಾಡಳಿತ ತನಿಖೆ ನಡೆಸಿ ದುಷ್ಕೃತ್ಯ ನಡೆಸಿದವರನ್ನು ಶಿಕ್ಷಿಸಬೇಕು. ರಾಯರ ಮೊರೆ ಹೋಗಿ, ಆಹಾರ ಸೇವಿಸದೆ ಆನೆಗೊಂದಿಗೆ ಎಲ್ಲ ಸ್ವಾಮೀಜಿಗಳು ಸೇರುತ್ತಿದ್ದಾರೆ ಎಂದರು. ಸೂಕ್ತ ತನಿಖೆ ಮತ್ತು ರಕ್ಷಣೆ ನೀಡುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದಾರೆ ಎಂದರು.

ಹಂಪಿ ಕಂಬ ಬೀಳಿಸಿದವರಿಗೆ ಎತ್ತಿ ನಿಲ್ಲಿಸುವ ಶಿಕ್ಷೆ

click me!