ಮತ್ತೆ ರಮ್ಯಾ ಮೇಲೆ ಮಂಡ್ಯ ಜನತೆ ಗರಂ?

By Web DeskFirst Published Aug 31, 2018, 5:49 PM IST
Highlights

ಕಳೆದ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಂಸದೆ ರಮ್ಯಾ ಮತ ಚಲಾಯಿಸಲು ಬಂದಿರಲಿಲ್ಲ. ಇನ್ನೇನು ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಾದರೂ ಮತ ಚಲಾಯಿಸಲು ಬರುತ್ತಾರೆಂದು ಕಾರ್ಯಕರ್ತರು ಕಾಯುತ್ತಿದ್ದರು. ಆದರೆ, ಆಗಿದ್ದೇನು?

ಮಂಡ್ಯ: ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಸ್ತುವಾರಿ ವಹಿಸಿಕೊಂಡಿರುವ ರಮ್ಯಾ, ಕರ್ನಾಟಕ ವಿಧಾನಸಭಾ ಚುನಾವಣೆಗೂ ಮತ ಚಲಾಯಿಸಲು ಬಂದಿರಲಿಲ್ಲ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಗೆ ಮಂಡ್ಯ ಅಭ್ಯರ್ಥಿಯಾಗುತ್ತಾರೆಂಬ ಊಹಾಪೋಹವಿದ್ದು, ಆಗಸ್ಟ್ 31ರಂದು ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಾದರೂ ಮತ ಚಲಾಯಿಸಲು ಬರುತ್ತಾರೆಂದರೆ, ಇಲ್ಲ ಇವತ್ತೂ ಬಂದಿಲ್ಲ.

"

ಇಂದು ಮತ ಚಲಾಯಿಸುತ್ತಾರೆಂದು ಅವರ ಅಭಿಮಾನಿಗಳು ಭಾವಿಸಿದ್ದರು. ಅವರಿಗಾಗಿಯೇ ಕಾಯುತ್ತಲೂ ಇದ್ದರು. ಆದರವರು ಮತದಾನ ಮಾಡಲು ಬಾರದಿದ್ದಕ್ಕೆ ಹೈರಾಣಾಗಿ ಹಿಂದಿರುಗಿದ್ದಾರೆ.

ಮಂಡ್ಯ ನಗರಸಭೆಯ 11ನೇ ವಾರ್ಡ್‌ನಲ್ಲಿ ಮತದಾರರ ಪಟ್ಟಿಯಲ್ಲಿ 671ನೇ ಕ್ರಮಸಂಖ್ಯೆಯಲ್ಲಿ ದಿವ್ಯಾ ಸ್ಪಂದನಾ ಆಲಿಯಾಸ್ ರಮ್ಯಾ ಹೆಸರಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡದೆ ಟೀಕೆಗೆ ಗುರಿಯಾಗಿದ್ದರು. ಈ ಬಾರಿಯೂ ರಮ್ಯಾ ಬಾರದ್ದಕ್ಕೆ ಮಂಡ್ಯದ ಜನರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಮಂಡ್ಯ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರಮ್ಯಾ, ಮತದಾನದ ಹಕ್ಕು ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್‌ಎಸ್‌ಎಸ್‌ ಅನ್ನು ಉಗ್ರ ಸಂಘಟನೆಗೆ ಹೋಲಿಸಿ,ಟ್ವೀಟ್ ಮಾಡಿದ ರಮ್ಯಾ

click me!