'ಕಟ್ಟಾ ಹಿಂದುತ್ವದ ಕಟ್ಟಾಳು ಈಶ್ವರಪ್ಪಗೆ ಡಿಸಿಎಂ ಸ್ಥಾನ ನೀಡಿ'

Kannadaprabha News   | Asianet News
Published : Aug 02, 2021, 02:43 PM IST
'ಕಟ್ಟಾ ಹಿಂದುತ್ವದ ಕಟ್ಟಾಳು ಈಶ್ವರಪ್ಪಗೆ ಡಿಸಿಎಂ ಸ್ಥಾನ ನೀಡಿ'

ಸಾರಾಂಶ

* ರಮೇಶ ಸಜ್ಜಗಾರ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಹಾಲಿನ ಅಭಿಷೇಕ * ಪಕ್ಷ ತನ್ನ ತಾಯಿ ಎನ್ನುವ ಈಶ್ವರಪ್ಪ * ಸಂಘ ಪರಿವಾರದ ಬದ್ಧತೆಯ ನಾಯಕರಾದ ಈಶ್ವರಪ್ಪ   

ಗದಗ(ಆ.02): ಕೆ.ಎಸ್‌. ಈಶ್ವರಪ್ಪರಿಗೆ ಡಿ.ಸಿ.ಎಂ ಸ್ಥಾನ ನೀಡಬೇಕು ಎಂದು ಜಿಲ್ಲೆಯ ಹಿಂದುಳಿದ ವರ್ಗಗಳ ಮುಖಂಡ ರಮೇಶ ಸಜ್ಜಗಾರ ನೇತೃತ್ವದಲ್ಲಿ ನಗರದ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿ, ಡೊಳ್ಳು ವಾದ್ಯಗಳ್ನು ಬಾರಿಸುವ ಮೂಲಕ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡ ರಮೇಶ ಸಜ್ಜಗಾರ ಮಾತನಾಡಿ, ಈಶ್ವರಪ್ಪನವರು ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಅನಂತಕುಮಾರ, ಬಿ.ಎಸ್‌. ಯಡಿಯೂರಪ್ಪನವರ ಜೊತೆ ರಾಜ್ಯ ಸುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರು ಪಕ್ಷದ ರಾಜ್ಯ ಅಧ್ಯಕ್ಷರಾಗಿ ಸಚಿವರಾಗಿ ಸಂಘ ಪರಿವಾರದ ಬದ್ಧತೆಯ ಪಕ್ಷ ನಿಷ್ಠೆ ನಾಯಕರಾಗಿದ್ದು ಮುಖ್ಯಮಂತ್ರಿಯಾಗುವ ಅನೇಕ ಅವಕಾಶಗಳನ್ನು ತಪ್ಪಿಸಿಕೊಂಡಿದ್ದು, ಹಿಂದುಳಿದ ವರ್ಗಗಳ ಅನೇಕ ಸಮುದಾಯಗಳಿಗೆ ಬೇಸರವನ್ನುಂಟು ಮಾಡಿದೆ. ಪಕ್ಷ ತನ್ನ ತಾಯಿ ಎನ್ನುವ ಈಶ್ವರಪ್ಪನವರು ಕೇಂದ್ರದ ರಾಜ್ಯದ ವರಿಷ್ಠರಿಗೆ ನಿಷ್ಠೆಯಾಗಿ ನಡೆದುಕೊಂಡು ಬಂದ ಕಟ್ಟಾ ಹಿಂದುತ್ವದ ಕಟ್ಟಾಳು. ಅದಕ್ಕಾಗಿ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

'ಮಹದಾಯಿ ಹೋರಾಟಗಾರರೊಬ್ಬ ಸಿಎಂ ಆಗಿದ್ದು ಸಂತಸ ತಂದಿದೆ'

ಈ ಸಂದರ್ಭದಲ್ಲಿ ಭೂಸೇನಾ ನಿಗಮದ ಮಾಜಿ ಅಧ್ಯಕ್ಷ ಅರುಣ ಅಣ್ಣಿಗೇರಿ, ಕುರುಬ ಸಮುದಾಯದ ಮುಖಂಡರಾದ ಶಿವು ಡಂಬಳ, ಅರವಿಂದ ಹಬೀಬ, ಮುತ್ತಣ್ಣ ಕಳಸಣ್ಣವರ, ಸೋಮು ಮೇಟಿ, ಹನಮಂತ ಕುರಹಟ್ಟಿ, ಸಂತೋಷ ಶಿರೂರ, ಬಸವರಾಜ ಜಡಿ, ಆಕಾಶ ಕಣವಿ ಮುಂತಾದವರು ಉಪಸ್ಥಿತರಿದ್ದರು.
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC