ಶಾಸಕ ರಮೇಶ್ ಜಾರಕಿಹೊಳಿಯಿಂದ ಮಹತ್ವದ ನಿರ್ಧಾರ

Kannadaprabha News   | Asianet News
Published : Aug 15, 2021, 07:32 AM IST
ಶಾಸಕ ರಮೇಶ್ ಜಾರಕಿಹೊಳಿಯಿಂದ ಮಹತ್ವದ ನಿರ್ಧಾರ

ಸಾರಾಂಶ

ನನಗೆ ಮತ್ತು ನಮ್ಮ ಆಪ್ತರಿಗೆ ಮಂತ್ರಿಸ್ಥಾನ ನೀಡದಿರುವ ಬಗ್ಗೆ ಯಾವುದೇ ಬೇಸರವಿಲ್ಲ ಪಕ್ಷವನ್ನು ಮತ್ತಷ್ಟು ಬಲಪಡಿಸಿ 2023ರಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ನಾನು ಯಾವ ತ್ಯಾಗಕ್ಕೂ ಸಿದ್ಧ

ಅಥಣಿ (ಆ.15):  ನನಗೆ ಮತ್ತು ನಮ್ಮ ಆಪ್ತರಿಗೆ ಮಂತ್ರಿಸ್ಥಾನ ನೀಡದಿರುವ ಬಗ್ಗೆ ಯಾವುದೇ ಬೇಸರವಿಲ್ಲ. ಪಕ್ಷದ ಹಿರಿಯರು ಮತ್ತು ಸಂಘ ಪರಿವಾರದ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಿ 2023ರಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ನಾನು ಯಾವ ತ್ಯಾಗಕ್ಕೂ ಸಿದ್ಧ ಎಂಬುದಾಗಿ ಶಾಸಕ ರಮೇಶ್‌ ಜಾರಿಕಿಹೊಳಿ ತಿಳಿಸಿದ್ದಾರೆ.

ಪಟ್ಟಣದಲ್ಲಿ ಶುಕ್ರವಾರ ಶಾಸಕ ಮಹೇಶ್‌ ಕುಮಠಳ್ಳಿ ಅವರೊಂದಿಗೆ ಪಕ್ಷದ ಮುಖಂಡರ ಸಭೆ, ಹಿರಿಯ ಆರೆಸ್ಸೆಸ್‌ ಮುಖಂಡ ಅರವಿಂದ ದೇಶಪಾಂಡೆ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶುಕ್ರವಾರ ದೆಹಲಿಯಲ್ಲಿ ಪಕ್ಷದ ಮುಖಂಡರನ್ನು ಭೇಟಿ ಮಾಡಿದ್ದೇನೆ. ಅಲ್ಲಿ ನನಗೆ ಮತ್ತು ನಮ್ಮ ಬೆಂಬಲಿಗ ಶಾಸಕರಿಗೆ ಯಾವುದೇ ಮಂತ್ರಿಸ್ಥಾನ ನೀಡುವ ಬಗ್ಗೆ ಲಾಬಿ ನಡೆಸಿಲ್ಲ ಎಂದರು.

ರಮೇಶ್ ಜಾರಕಿಹೊಳಿ ಹಾಗೂ ಮತ್ತೋರ್ವ ಶಾಸಕಗೆ ಶೀಘ್ರ ಮಂತ್ರಿಗಿರಿ

ಸಿಡಿ ಪ್ರಕರಣಲ್ಲಿ ತನಿಖೆ ಮುಕ್ತಾಯವಾದರೂ ಕ್ಲೀನ್‌ ಚಿಟ್‌ ಸಿಗದ ಬಗ್ಗೆ ಈ ರೀತಿ ಪ್ರತಿಕ್ರಿಯೆ ನೀಡಿ, ಕ್ಲೀನ್‌ ಚಿಟ್‌ ಪಡೆಯಲು ಯಾವುದೇ ಆತುರವಿಲ್ಲ. ರಾಜಕಾರಣದಲ್ಲಿ ಶೂರರಿಗೆ ಷಡ್ಯಂತ್ರ ಮಾಡುವವರು ಇದ್ದೇ ಇರುತ್ತಾರೆ. ಈ ವಿಚಾರದಲ್ಲಿ ಕಾನೂನು ಹೋರಾಟ ನಡೆಸುತ್ತೇನೆ ಎಂದರು.

PREV
click me!

Recommended Stories

ಸುಳ್ಳು ಆರೋಪ ಮಾಡಿದರೆ ಒದ್ದು ಒಳಗೆ ಹಾಕಬೇಕಾಗುತ್ತದೆ: ಸಚಿವ ಎಂ.ಬಿ.ಪಾಟೀಲ್‌
ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ