ರಮೇಶ್ ಜಾರಕಿಹೊಳಿ ಆಪ್ತ ಕೈ ಮುಖಂಡ ಸೇರ್ತಾರ ಬಿಜೆಪಿ..?

Kannadaprabha News   | Asianet News
Published : Oct 28, 2020, 10:49 AM ISTUpdated : Oct 28, 2020, 10:53 AM IST
ರಮೇಶ್ ಜಾರಕಿಹೊಳಿ ಆಪ್ತ ಕೈ ಮುಖಂಡ ಸೇರ್ತಾರ ಬಿಜೆಪಿ..?

ಸಾರಾಂಶ

ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಪರಮಾಪ್ತ ಕಾಂಗ್ರೆಸ್ ಮುಖಂಡ ಬಿಜೆಪಿ ಸೇರ್ಪಡೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದು ಈ ಬಗ್ಗೆ ಸ್ವತಃ ಸಚಿವರೇ ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿ (ಅ.28): ಸುರೇಶ್‌ ಅಂಗಡಿ ಕುಟುಂಬಸ್ಥರಿಗೆ ಲೋಕಸಭಾ ಚುನಾವಣೆ ಟಿಕೆಟ್‌ ಕೊಟ್ಟಲ್ಲಿ ಅವರ ಪರವಾಗಿ ಪ್ರಚಾರ ನಡೆಸುವುದಾಗಿ ಘೋಷಿಸಿರುವ ಕಾಂಗ್ರೆಸ್‌ನ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವುದು ಇಲ್ಲವೇ ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟವಿಚಾರ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.

 ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕವಾಗಿ ಪ್ರಕಾಶ ಹುಕ್ಕೇರಿ ನನ್ನ ಗೆಳೆಯ. ಆದರೆ ಹೈಕಮಾಂಡ್‌ ನಿರ್ಧಾರಕ್ಕೆ ನಾನು ಬದ್ಧ ಎಂದರು.

RR ನಗರ ಉಪಕದನ: ಸಿದ್ದರಾಮಯ್ಯ ಪ್ರಚಾರದ ವೇಳೆ ಪ್ರಧಾನಿ ಮೋದಿ ಪರ ಜೈಕಾರ .

ಇದೇವೇಳೆ ಸುರೇಶ ಅಂಗಡಿ ಅವರು ಸಿಎಂ ಆಗುತ್ತಿದ್ದರು ಎಂಬ ಅವರ ಮಾವ ಲಿಂಗರಾಜ ಪಾಟೀಲ್‌ ಅವರ ಹೇಳಿಕೆಗೆ ಸಂಬಂಧಿಸಿದಂತೆ, ಸುರೇಶ ಅಂಗಡಿ ಅವರ ಮಾವ ಏನು ಹೇಳಿದ್ದಾರೋ ಎಂದು ನನಗೆ ಗೊತ್ತಿಲ್ಲ.

ಆದರೆ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದರು. ನನ್ನ ಹಾಗೇ ತಡವಾಗಿ ಮಂತ್ರಿಯಾದರು. ದುರ್ದೈವದಿಂದ ಅಕಾಲಿಕ ನಿಧನರಾದರು ಎಂದರು.

PREV
click me!

Recommended Stories

ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ